ಅಡ್ಡಿಪಡಿಸುವ ಉದ್ದೇಶ?

ಭಾನುವಾರ, ಮೇ 26, 2019
26 °C

ಅಡ್ಡಿಪಡಿಸುವ ಉದ್ದೇಶ?

Published:
Updated:
ಅಡ್ಡಿಪಡಿಸುವ ಉದ್ದೇಶ?

ರಾಜ್ಯ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್ ಒಳ್ಳೆಯ ಜನಸೇವಾ ಕಾರ್ಯಕ್ರಮ ಎಂಬುದು ಸಾಬೀತಾಗಿದೆ. ಕ್ಯಾಂಟೀನ್‌ ಆರಂಭಿಸಲು ಸೂಕ್ತ ಸ್ಥಳ ಅಲಭ್ಯವಾದ ಕಡೆಗಳಲ್ಲಿ ಉದ್ಯಾನ ಅಥವಾ ಆಟದ ಮೈದಾನದ ಸ್ವಲ್ಪ ಜಾಗವನ್ನು ಕ್ಯಾಂಟೀನ್ ನಿರ್ಮಾಣಕ್ಕೆ ಬಳಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಯೋಜನೆಯ ಸದುದ್ದೇಶ ಅರ್ಥಮಾಡಿಕೊಳ್ಳದ ಕೆಲವರು ಅದಕ್ಕೆ ಅಡ್ಡಿಪಡಿಸುತ್ತಿರುವ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಕ್ಯಾಂಟೀನ್‍ನಿಂದ ಉದ್ಯಾನ, ಆಟದ ಮೈದಾನಗಳು ಹಾಳಾಗುತ್ತವೆ ಎಂಬ ಕಾರಣ ಮುಂದೆ ಮಾಡಿ ಕೆಲವರು ಧರಣಿ ಕುಳಿತಿದ್ದಾರೆ, ಗುಂಪುಗೂಡಿ ಗಲಾಟೆ ಮಾಡಿದ್ದಾರೆ.

ಸೂಕ್ಷ್ಮವಾಗಿ ಗಮನಿಸಿದರೆ ಇವರೆಲ್ಲಾ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಅಥವಾ ಪ್ರತಿನಿಧಿಗಳು ಎಂಬುದು ವೇದ್ಯವಾಗುತ್ತದೆ. ಅಂದರೆ, ಉಣ್ಣುವ ಅನ್ನಕ್ಕೆ ಕಲ್ಲು ಹಾಕಿದರೂ ಚಿಂತೆಯಿಲ್ಲ, ಸರ್ಕಾರದ ಯೋಜನೆಗೆ ಅಡ್ಡಿ ಮಾಡಬೇಕೆಂಬ ಹುನ್ನಾರ ಇವರಲ್ಲಿ ಇದ್ದಂತೆ ಕಾಣಿಸುತ್ತದೆ.

ನಿಜಕ್ಕೂ ಉದ್ಯಾನ, ಆಟದ ಮೈದಾನಗಳನ್ನು ಸಂರಕ್ಷಿಸಬೇಕೆಂಬ ಉದ್ದೇಶವಿದ್ದರೆ, ಹಲವೆಡೆ ಅಕ್ರಮವಾಗಿ ನಿರ್ಮಾಣವಾಗಿರುವ ಆರಾಧನಾ ಕೇಂದ್ರಗಳನ್ನೂ ಅವರು ವಿರೋಧಿಸಲೇಬೇ ಕಾಗಿತ್ತು. ರಸ್ತೆ ಬದಿ, ಉದ್ಯಾನ, ಆಟದ ಮೈದಾನಗಳಲ್ಲಿ ಧಾರ್ಮಿಕ ಕಟ್ಟಡಗಳ ಅಕ್ರಮ ನಿರ್ಮಾಣಕ್ಕೆ ಸ್ವಯಂ ಕುಮ್ಮಕ್ಕು ಕೊಟ್ಟು, ಸಾರ್ವಜನಿಕವಾಗಿ ಅದನ್ನು ಸಮರ್ಥಿಸಿಕೊಂಡ ರಾಜಕಾರಣಿಗಳ ಭಾಷಣಗಳನ್ನೂ ನಾನು ಕೇಳಿಸಿಕೊಂಡಿದ್ದೇನೆ.

ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಇನ್ನೂ ಈ ಬಗೆಯ ಧಾರ್ಮಿಕ ಕಟ್ಟಡಗಳು ನಿರ್ಮಾಣವಾಗುತ್ತಲೇ ಇರುವುದರ ಬಗ್ಗೆ ನ್ಯಾಯಾಲಯವೇ ಅಗತ್ಯ ಕ್ರಮ ಕೈಗೊಳ್ಳಬೇಕು.

-ಡಾ.ಟಿ. ಗೋವಿಂದರಾಜು, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry