ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟ ಪೂರೈಕೆಗೆ ಸೈಕಲ್ ಬಳಕೆ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಉಡುಪಿ: ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಲು ರಾಜ್ಯ ಸರ್ಕಾರ ಆರಂಭಿಸಿರುವ ‘ಮಾತೃಪೂರ್ಣ’ ಯೋಜನೆಯ ಲಾಭ
ವನ್ನು ಅರ್ಹರೆಲ್ಲರಿಗೂ ತಲುಪಿಸಲು ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ.

ಅಂಗನವಾಡಿಗೆ ಬರಲು ಸಾಧ್ಯವಾಗದವರಿಗೆ ಸೈಕಲ್ ಮೂಲಕ ಊಟ ತಲುಪಿಸಲು ಯೋಜನೆ ರೂಪಿಸಲಾಗುತ್ತಿದೆ. ಉದ್ಯೋಗಸ್ಥ ಮಹಿಳೆಯರಿಗೆ ಅವರು ಕೆಲಸ ಮಾಡುವ ಸ್ಥಳಕ್ಕೆ ಸಮೀಪ ಇರುವ ಅಂಗನವಾಡಿಯಲ್ಲಿ ಊಟಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ತಿಂಗಳಿಗೆ ಬೇಕಾಗುವಷ್ಟು ಆಹಾರ ಧಾನ್ಯವನ್ನು ನೀಡುವ ಹಿಂದಿನ ಪದ್ಧತಿಯೇ ಚೆನ್ನಾಗಿತ್ತು. ಈಗ ಅಂಗನವಾಡಿಗೆ ಹೋಗಿ ಊಟ ಮಾಡಬೇಕಿದೆ. ಅಂಗನವಾಡಿಯಿಂದ 2–3 ಕಿ.ಮೀ ದೂರ ಮನೆ ಇರುವವರು ಪ್ರತಿ ದಿನ ಮಧ್ಯಾಹ್ನ ಹೋಗಿ ಬರಲು ಸಾಧ್ಯವಾಗದು. ಉದ್ಯೋಗಸ್ಥ ಗರ್ಭಿಣಿ ಮತ್ತು ಬಾಣಂತಿಯರು ಸಹ ಯೋಜನೆಯಿಂದ ವಂಚಿತರಾಗುತ್ತಾರೆ ಎಂಬ ಅಭಿಪ್ರಾಯ ಕೆಲವು ಫಲಾನುಭವಿಗಳಿಂದ ವ್ಯಕ್ತವಾಗಿದೆ.

ತಿಂಗಳಿಗೆ ಆಗುವಷ್ಟು ಅಕ್ಕಿ, ಮೊಟ್ಟೆ, ಬೇಳೆಕಾಳು ನೀಡಿದರೆ ಮನೆಯವರೆಲ್ಲ ತಿಂದು ಖಾಲಿ ಮಾಡುತ್ತಾರೆ. ಅದಕ್ಕೆ ನಿರ್ಬಂಧ ಹೇರಲು ಹಾಗೂ ಕಣ್ಣಿಡಲು ಸಾಧ್ಯವಾಗದು. ಆದ್ದರಿಂದ ಈ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ ಎಂಬ ಕಾರಣಕ್ಕೆ ‘ಮಾತೃಪೂರ್ಣ’ ಯೋಜನೆ ಜಾರಿಗೊಳಿಸಲಾ
ಗಿದೆ ಎಂಬುದು ಇಲಾಖೆಯ ಸಮಜಾಯಿಷಿ.

‘ಇದೊಂದು ಮಹತ್ವಕಾಂಕ್ಷಿ ಯೋಜನೆಯಾಗಿದ್ದು ಯಾರೊಬ್ಬರೂ ಯೋಜನೆಯಿಂದ ವಂಚಿತರಾಗಬಾರದು ಎಂಬುದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಆಶಯವಾಗಿದೆ. ಆದ್ದರಿಂದ ಮನೆ ದೂರ ಇರುವವರಿಗೆ ಹಾಗೂ ಬರಲು ಸಾಧ್ಯವಾಗದವರಿಗೆ ಸೈಕಲ್ ಮೂಲಕ ಊಟ ತಲುಪಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್.

‘ಈಗಿರುವ ನಿಯಮದ ಪ್ರಕಾರ ಗರ್ಭಿಣಿಯರು ತಾವು ಯಾವ ಅಂಗನವಾಡಿಯಲ್ಲಿ ನೋಂದಣಿ ಮಾಡಿರುತ್ತಾರೋ ಅಲ್ಲಿಯೇ ಆಹಾರ ಪಡೆಯಬೇಕಾಗುತ್ತದೆ. ಈ ನಿಯಮ ಸಡಿಲಿಸಿ ಜಿಲ್ಲೆಯ ಯಾವುದಾದರೂ ಒಂದು ಅಂಗವಾಡಿಯಲ್ಲಿ ಊಟ ಮಾಡಲು ಸಹ ಅವಕಾಶ ಕಲ್ಪಿಸಲಾಗುವುದು. ಅಲ್ಲದೆ ಕಾರ್ಖಾನೆಯ ಮಾಲೀಕರೊಂದಿಗೆ ಮಾತನಾಡಿ ಫಲಾನುಭವಿಗಳಿಗೆ ಪ್ರತಿ ದಿನ ಪೌಷ್ಟಿಕ ಆಹಾರ ನೀಡಲು ವ್ಯವಸ್ಥೆ ಮಾಡಲಾಗುವುದು. ಕೆಲವು ಕಾರ್ಖಾನೆಗಳಲ್ಲಿ ಊಟದ ವ್ಯವಸ್ಥೆ ಇದ್ದು, ಅಲ್ಲಿಯೇ ಅವರಿಗೆ ಮೊಟ್ಟೆ, ಹಾಲು ನೀಡಲು ಕ್ರಮ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಅವರು.

ಉಡುಪಿ ಜಿಲ್ಲೆಯಲ್ಲಿ ಒಟ್ಟು 6,713 ಗರ್ಭಿಣಿಯರು, 7,579 ಬಾಣಂತಿಯರು ಇದ್ದಾರೆ. 1,191 ಅಂಗನವಾಡಿಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT