ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತ ‘ಎ’ ತಂಡಕ್ಕೆ ಏಕಪಕ್ಷೀಯ ಗೆಲುವು

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪರ್ಥ್‌: ಆರಂಭದಲ್ಲಿ ಅಫಾನ್ ಯೂಸುಫ್‌ ತಂದುಕೊಟ್ಟ ಮುನ್ನಡೆ ಮತ್ತು ದ್ವಿತೀಯಾರ್ಧದಲ್ಲಿ ಅರ್ಮಾನ್ ಖುರೇಷಿ ಗಳಿಸಿದ ಗೋಲುಗಳ ಬಲದಿಂದ ಭಾರತ ‘ಎ’ ತಂಡ ಆಸ್ಟ್ರೇಲಿಯನ್ ಹಾಕಿ ಲೀಗ್‌ನಲ್ಲಿ ಭರ್ಜರಿ ಜಯ ಸಾಧಿಸಿತು. ಇಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡದವರು ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿ (ಎಸಿಟಿ) ತಂಡವನ್ನು 2–0 ಗೋಲುಗಳಿಂದ ಮಣಿಸಿದರು.

ಭಾರತ ತಂಡದವರು ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಇದರ ಫಲವಾಗಿ ಐದನೇ ನಿಮಿಷದಲ್ಲಿ ಅಫಾನ್ ಸುಲಭ ಗೋಲು ಗಳಿಸಿದರು. ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ರಕ್ಷಣಾ ವಿಭಾಗದವರು ಅತ್ಯುತ್ತಮ ಆಟವಾಡಿದರು. ಹೀಗಾಗಿ ಆತಿಥೇಯ ತಂಡದವರು ಪರದಾಡಿದರು. ಲಭಿಸಿದ ಕೆಲವು ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದಕ್ಕೂ ಎಸಿಟಿ ತಂಡಕ್ಕೆ ಸಾಧ್ಯವಾಗಲಿಲ್ಲ. ಇದು ಪ್ರಥಮಾರ್ಧದಲ್ಲಿ ಭಾರತ ಮುನ್ನಡೆಯನ್ನು  ಉಳಿಸಿಕೊಳ್ಳಲು ನೆರವಾಯಿತು.

ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರರು ಇನ್ನಷ್ಟು ಆಕ್ರಮಣಕಾರಿಯಾಗಿ ಮುನ್ನುಗ್ಗಿದರು. ಮನಮೋಹಕ ಪಾಸ್‌ಗಳ ಮೂಲಕ ಹಾಕಿಪ್ರಿಯರನ್ನು ರಂಜಿಸಿದರು. ಹೀಗಾಗಿ ಎದುರಾಳಿಗಳು ಪಂದ್ಯದ ಮೇಲಿನ ಹಿಡಿತ ಕಳೆದುಕೊಂಡರು. 46ನೇ ನಿಮಿಷದಲ್ಲಿ ಗೋಲು ಗಳಿಸಿದ ಅರ್ಮಾನ್‌ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ನಂತರ ಎಸಿಟಿ ತಂಡ ಸಂಪೂರ್ಣವಾಗಿ ಶರಣಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT