ನಟ ಪ್ರಕಾಶ್ ರಾಜ್‌ಗೆ ಪ್ರಚಾರದ ಹುಚ್ಚು: ಬಿಜೆಪಿ

ಸೋಮವಾರ, ಜೂನ್ 17, 2019
22 °C

ನಟ ಪ್ರಕಾಶ್ ರಾಜ್‌ಗೆ ಪ್ರಚಾರದ ಹುಚ್ಚು: ಬಿಜೆಪಿ

Published:
Updated:
ನಟ ಪ್ರಕಾಶ್ ರಾಜ್‌ಗೆ ಪ್ರಚಾರದ ಹುಚ್ಚು: ಬಿಜೆಪಿ

ಬೆಂಗಳೂರು: ‘ನಟ ಪ್ರಕಾಶ್ ರಾಜ್‌ ಅವರಿಗೆ ಪ್ರಚಾರದ ಹುಚ್ಚು ಇದ್ದರೆ ಯಾವುದಾದರೂ ರಾಜಕೀಯ ಪಕ್ಷ ಸೇರಿಕೊಳ್ಳಲಿ. ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಲಿ’ ಎಂದು ಬಿಜೆಪಿ ಆಗ್ರಹಿಸಿದೆ.

‘ಮೋದಿ ನನಗಿಂತಲೂ ಉತ್ತಮ ನಟ’ ಎಂದು ಕಾರ್ಯಕ್ರಮವೊಂದರಲ್ಲಿ ಪ್ರಕಾಶ್‌ ರಾಜ್‌ ನೀಡಿದ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ವಕ್ತಾರ ಎಸ್‌.ಸುರೇಶ್‌ ಕುಮಾರ್‌ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ಕಾವೇರಿ ನದಿ ನೀರಿನ ಸಮಸ್ಯೆ ವಿಷಯದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದ್ದ ಪ್ರಕಾಶ್ ರಾಜ್‌ ತಾನೊಬ್ಬ ನಟ ಎಂದಿದ್ದರು. ಈಗ ರಾಜ್ಯದಲ್ಲಿ ನಡೆದ ಹತ್ಯೆಗಳಿಗೆ ಪ್ರಧಾನಿ ಪ್ರತಿಕ್ರಿಯಿಸಬೇಕು ಎಂದು ಅವರು ಹೇಳುವ ಅಗತ್ಯವಿರಲಿಲ್ಲ. ಎದುರಿಗೆ ಇದ್ದ ಜನರಿಂದ ಚಪ್ಪಾಳೆ ಗಿಟ್ಟಿಸುವ ಉದ್ದೇಶಕ್ಕೆ ಹೀಗೆ ಅವರು ಹೇಳಿಕೆ ನೀಡಿದರು’ ಎಂದು ಅವರು ಟೀಕಿಸಿದರು.

‘ಪ್ರಕಾಶ್‌ ಒಬ್ಬ ಅತ್ಯುತ್ತಮ ನಟ. ಸಿನಿಮಾದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದಂತೆ ಡಿವೈಎಫ್‍ಐ ಕಾರ್ಯಕ್ರ ಮದಲ್ಲಿ ಅವರು ಮಾತನಾಡಿದ್ದಾರೆ. ಅದರಲ್ಲಿ ವಿಶೇಷವೇನೂ ಇಲ್ಲ’ ಎಂದು ಸುರೇಶ್‌ ಕುಮಾರ್‌ ವ್ಯಂಗ್ಯವಾಡಿದರು.

ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಮಾತನಾಡಿ, ‍‘ಪ್ರಧಾ ನಿಯವರನ್ನು ಟೀಕಿಸಿದರೆ ರಾತ್ರೋರಾತ್ರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವ್ಯಕ್ತಿಗಳಾಗಬಹುದು ಎಂಬ ಭ್ರಮೆ ಕೆಲವರಿಗೆ ಇದೆ. ಮೋದಿ ಅವರನ್ನು ಟೀಕಿಸುವ ಮೂಲಕ ನಿಮ್ಮ ವ್ಯಕ್ತಿತ್ವಕ್ಕೆ ನೀವೇ ಮಸಿ ಬಳಿದುಕೊಳ್ಳು

ತ್ತಿದ್ದೀರಿ. ಅದನ್ನು ಕೂಡಲೇ ನಿಲ್ಲಿಸಿ’ ಎಂದು ಒತ್ತಾಯಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry