ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿ.ವಿ: ಕುಲಪತಿ, ಕುಲಸಚಿವರಿಗೆ ಹೊಸ ಕಾರು

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರ ಕಾರು ಖರೀದಿಗೆ ಸಿಂಡಿಕೇಟ್‌ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

‘ಈಗಿರುವ ಕಾರುಗಳು 15 ವರ್ಷಗಳ ಹಿಂದೆ ಖರೀದಿಸಿದ್ದು, ಅವುಗಳ ಇಂಧನ ಮತ್ತು ದುರಸ್ತಿ ವೆಚ್ಚವೇ ಜಾಸ್ತಿಯಾಗುತ್ತಿದೆ. ಹಾಗಾಗಿ ಎರಡು ಹೊಸ ಕಾರುಗಳನ್ನು ಖರೀದಿಸುತ್ತೇವೆ’ ಎಂದು ಸಭೆಗೆ ನೀಡಿದ್ದ ಕಾರ್ಯಸೂಚಿಯಲ್ಲಿ ವಿಶ್ವವಿದ್ಯಾಲಯ ತಿಳಿಸಿತ್ತು.

‘2016ರಲ್ಲಿಯೇ ಸಿಂಡಿಕೇಟ್‌ ಸಭೆಯಲ್ಲಿ ಮೂರು ಕಾರು ಖರೀದಿಗೆ ಒಪ್ಪಿಗೆ ಪಡೆಯಲಾಗಿತ್ತು. ಆದರೆ, ಆಗ ಕೇವಲ ಒಂದು ಕಾರಿಗೆ ಒಪ್ಪಿಗೆ ಸಿಕ್ಕಿತ್ತು. ಹಾಗಾಗಿ ಈಗ ಮತ್ತೊಮ್ಮೆ ಅದನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಈಗಿರುವ ಕಾರುಗಳು ಹಳೆಯದಾಗಿರುವುದರಿಂದ ಯಾರೂ ಅದನ್ನು ವಿರೋಧಿಸಲಿಲ್ಲ’ ಎಂದು ಸದಸ್ಯರೊಬ್ಬರು ತಿಳಿಸಿದರು.

‘ಇನೋವಾ ಕಾರುಗಳನ್ನು ಖರೀದಿಸುವುದಾಗಿ ಕಾರ್ಯಸೂಚಿಯಲ್ಲಿ ತಿಳಿಸಿದ್ದರು. ಎರಡು ಕಾರಿನಿಂದ ಸುಮಾರು 28 ಲಕ್ಷ ವೆಚ್ಚವಾಗಬಹುದು. ಅಲ್ಲದೆ, ಈಗಿರುವ ಕಾರುಗಳನ್ನು ವಿಶ್ವವಿದ್ಯಾಲಯದ ಇತರೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಹಂಗಾಮಿ ಕುಲಪತಿ ಸಭೆಗೆ ತಿಳಿಸಿದರು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT