ಪುಸ್ತಕ, ಸಮವಸ್ತ್ರ ವಿತರಣೆ

ಶುಕ್ರವಾರ, ಮೇ 24, 2019
22 °C

ಪುಸ್ತಕ, ಸಮವಸ್ತ್ರ ವಿತರಣೆ

Published:
Updated:
ಪುಸ್ತಕ, ಸಮವಸ್ತ್ರ ವಿತರಣೆ

ಬೆಂಗಳೂರು: ಗಾಂಧಿ ಜಯಂತಿ ಅಂಗವಾಗಿ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಪಿ.ಎಂ. ಮುನಿರಾಜುಗೌಡ ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್‌ ಪುಸ್ತಕ, ಸಮವಸ್ತ್ರ, ಹಣ್ಣುಗಳನ್ನು ವಿತರಿಸಿದರು.

ಮಲ್ಲತಹಳ್ಳಿ, ಸುಂಕದಕಟ್ಟೆ, ಲಗ್ಗೆರೆ, ರಾಜರಾಜೇಶ್ವರಿನಗರ, ಲಕ್ಷಿದೇವಿನಗರಗಳಲ್ಲಿ ಇರುವ ಸರ್ಕಾರಿ ಶಾಲೆಯ ಸುಮಾರು 2,000 ಮಕ್ಕಳಿಗೆ ಪುಸ್ತಕ ವಿತರಿಸಿದರು. ಅಲ್ಲದೆ, ಶಾಲಾ ಸಿಬ್ಬಂದಿಗೂ ಬಟ್ಟೆ ನೀಡಿದರು.

ಪಿ.ಎಂ. ಮುನಿರಾಜುಗೌಡ, ‘ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸರ್ಕಾರ ಹಾಗೂ ದಾನಿಗಳು ಪ್ರೋತ್ಸಾಹ ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ಶಿಕ್ಷಣ ಪಡೆದು ತಮ್ಮ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಕಿವಿಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry