ಬಾದಾಮಿಗೆ ಯಡಿಯೂರಪ್ಪ ಭೇಟಿ 6ಕ್ಕೆ

ಗುರುವಾರ , ಜೂನ್ 20, 2019
24 °C

ಬಾದಾಮಿಗೆ ಯಡಿಯೂರಪ್ಪ ಭೇಟಿ 6ಕ್ಕೆ

Published:
Updated:
ಬಾದಾಮಿಗೆ ಯಡಿಯೂರಪ್ಪ ಭೇಟಿ 6ಕ್ಕೆ

ಬಾದಾಮಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಇದೇ 6ರಂದು ಭೇಟಿ ನೀಡಲಿದ್ದು, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮಹಾಂತೇಶ ಮಮದಾಪುರ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮುಖಂಡ ಸಿದ್ದಣ್ಣ ಶಿವನಗುತ್ತಿ ಹೇಳಿದರು.

ನಗರದಲ್ಲಿ ಮಂಗಳವಾರತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಅಂದು ಸಂಜೆ 6 ಗಂಟೆಗೆ ಬರಲಿರುವ ಮಮದಾಪುರ ಮಮದಾಪುರ ಅವರ 51 ನೇ ಹುಟ್ಟುಹಬ್ಬ ಸಮಾರಂಭದ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಇಲ್ಲಿನ ಮಮದಾಪುರ ಕಲ್ಯಾಣ ಮಂಟಪದ ಆವರಣದಲ್ಲಿ ಮಹಾಂತೇಶ ಅವರ ಅಭಿಮಾನಿ ಬಳಗವು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದೆ. ಅಂದು ಬೆಳಿಗ್ಗೆ ನೇತ್ರ ತಪಾಸಣೆ ಮತ್ತು ಚಿಕಿತ್ಸೆ, ರಕ್ತದಾನ ಶಿಬಿರ ಮತ್ತು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಶಿವು ಗಂಗಾಲ ಹೇಳಿದರು.

ಸಮಾರಂಭದಲ್ಲಿ ಕಮತಗಿ ಹೋಳೆಹುಚ್ಚೇಶ್ವರ ಶ್ರೀಗಳು, ಡಾ. ಶಿವಕುಮಾರ ಶ್ರೀಗಳು, ಸಂಸದ ಪಿ.ಸಿ. ಗದ್ದಿಗೌಡರ ಹಾಗೂ ಜಿಲ್ಲೆಯ ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮುತ್ತಣ್ಣ ಕಳ್ಳಿಗುಡ್ಡ, ಉಮೇಶ ಹಕ್ಕಿ, ಅಡಿವೆಪ್ಪ ಢಾಣಕಶಿರೂರ, ಹೊನ್ನಯ್ಯ ಹಿರೇಮಠ, ಬಸವರಾಜ ಪಾಟೀಲ, ಬಸವರಾಜ ತೀರ್ಥಪ್ಪನವರ, ಗುರುಸಿದ್ದಯ್ಯ ಹಿರೇಮಠ, ಮಲ್ಲಣ್ಣ ಸಂಕದಾಳ, ಬಸವರಾಜ ಸುಂಕದ, ಶಂಕ್ರಪ್ಪ ಗಾಣಿಗೇರ, ನದಾಫ ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry