ನೀರಿನಲ್ಲಿ ಮುಳುಗಿ ಬಾಲಕಿಯರ ಸಾವು

ಸೋಮವಾರ, ಜೂನ್ 24, 2019
26 °C

ನೀರಿನಲ್ಲಿ ಮುಳುಗಿ ಬಾಲಕಿಯರ ಸಾವು

Published:
Updated:

ಆನೇಕಲ್‌: ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ಆನೇಕಲ್ ತಾಲ್ಲೂಕಿನ ಯಡವನಹಳ್ಳಿ ಸಮೀಪದ ಹೊಂಡದಲ್ಲಿ ನಡೆದಿದೆ. ಮೃತರನ್ನು ಗೊಟ್ಟಿಗೆರೆಯ ಹರೀಶ್ ಹಾಗೂ ಮಮತಾ ದಂಪತಿ ಮಕ್ಕಳಾದ ದೀಪಿಕಾ (6) ಹಾಗೂ ಮೋನಿಕಾ (5) ಎಂದು ಗುರುತಿಸಲಾಗಿದೆ.

ವಿವರ: ಗೊಟ್ಟಿಗೆರೆಯಲ್ಲಿ ಬಟ್ಟೆ ಇಸ್ತ್ರಿ ಅಂಗಡಿ ಇಟ್ಟುಕೊಂಡಿರುವ ಹರೀಶ್ ಪತ್ನಿ ಮಮತಾ, ‘ತನ್ನ ತವರು ಮನೆಯಾದ ತಾಲೂಕಿನ ಯಡವನಹಳ್ಳಿಗೆ ತನ್ನ ಮೂವರು ಹೆಣ್ಣುಮಕ್ಕಳೊಂದಿಗೆ ದಸರಾ ರಜೆಗೆ ಬಂದಿದ್ದರು. ಬಟ್ಟೆ ಒಗೆಯಲೆಂದು ಮಮತಾ ಅವರ ತಾಯಿಯ ಜತೆ ಊರಿನ ಸಮೀಪದ ಹೊಂಡದ ಬಳಿಗೆ ತೆರಳಿದ್ದಾರೆ. ಇವರ ಜತೆ ದೀಪಿಕಾ ಹಾಗೂ ಮಮತಾ ಸಹ ಹೋಗಿದ್ದಾರೆ.

ಇನ್ನೊಂದು 2 ವರ್ಷದ ಹೆಣ್ಣು ಮಗು ಮನೆಯಲ್ಲಿ ತಾತನ ಜತೆ ಆಟವಾಡಿಕೊಂಡಿತ್ತು. ಮಮತಾ ಬಟ್ಟೆ ಒಗೆದ ಮೇಲೆ ಪಕ್ಕದ ಬಂಡೆಯ ಮೇಲೆ ಒಣಗಿಸಲು ಹೋಗಿದ್ದಾರೆ. ಈ ವೇಳೆ ನೀರಿಗಿಳಿದ ಮಕ್ಕಳು ಮುಳುಗಿ ಮೃತಪಟ್ಟಿದ್ದಾರೆ.

ಬಟ್ಟೆ ಒಣಗಿ ಹಾಕಿ ಬಂದು ನೋಡುವಷ್ಟರಲ್ಲಿ ಹೊಂಡದ ಬಳಿ ಮಕ್ಕಳ ಚಪ್ಪಲಿಗಳು ಮಾತ್ರ ಇದ್ದವು. ಗಾಬರಿಗೊಂಡು ಸುತ್ತಮುತ್ತ ಹುಡುಕಾಡುವಷ್ಟರಲ್ಲಿ ಇಬ್ಬರ ಶವಗಳು ನೀರಿನಿಂದ ತೇಲಿ ಮೇಲೆ ಬಂದಿವೆ. ಇದನ್ನು ಕಂಡು ಬಾಲಕಿಯರ ತಾಯಿ ಹಾಗು ಅಜ್ಜಿ ರೋಧಿಸಿದ್ದಾರೆ. ನಂತರ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿ ಶವಗಳನ್ನು ಹೊರತೆಗೆಯಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry