ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವುತರ ಗೌರವಧನದಲ್ಲಿ ಹೆಚ್ಚಳ

Last Updated 4 ಅಕ್ಟೋಬರ್ 2017, 7:34 IST
ಅಕ್ಷರ ಗಾತ್ರ

ಮೈಸೂರು: ದಸರಾ ಮೆರವಣಿಗೆಗಾಗಿ ಒಂದೂವರೆ ತಿಂಗಳಿನಿಂದ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಆನೆಗಳು ಅರಣ್ಯ ಇಲಾಖೆ ಅಧಿಕಾರಿಗಳ ಬೆಂಗಾವಲಿನಲ್ಲಿ ಮಂಗಳವಾರ ತಮ್ಮ ಶಿಬಿರಗಳಿಗೆ ತೆರಳಿದವು.

ಈ ಬಾರಿ 35 ಮಾವುತರು, ಕಾವಾಡಿಗರು ಹಾಗೂ 20 ಸಹಾಯಕರಿಗೆ ಅರಮನೆ ಮಂಡಳಿ ಹಾಗೂ ಅರಣ್ಯ ಇಲಾಖೆ ಪ್ರತ್ಯೇಕವಾಗಿ ಗೌರವಧನ ನೀಡಿದವು. ಕಳೆದ ಬಾರಿ ಅರಮನೆ ಮಂಡಳಿ ವತಿಯಿಂದ ಮಾತ್ರ ವಿತರಿಸಲಾಗಿತ್ತು.

ಅರಮನೆ ಮಂಡಳಿ ವತಿಯಿಂದ ತಲಾ ₹ 7,500 ಗೌರವಧನ ನೀಡಲಾಯಿತು. ಸಹಾಯಕರಿಗೆ ತಲಾ ₹ 5,000 ವಿತರಿಸಲಾಯಿತು. ಅರಣ್ಯ ಇಲಾಖೆ ವತಿಯಿಂದ ಕ್ರಮವಾಗಿ ₹ 3,000 ಹಾಗೂ ₹ 2,000 ನೀಡಲಾಯಿತು.

ಸಂಸದ ಪ್ರತಾಪಸಿಂಹ, ಡಿಸಿಎಫ್‌ (ವನ್ಯಜೀವಿ) ವಿ.ಏಡುಕುಂಡಲ, ಆನೆವೈದ್ಯ ನಾಗರಾಜು, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಮಣ್ಯ ಇದ್ದರು.
ಚೇತರಿಸಿಕೊಳ್ಳುತ್ತಿರುವ ಚಿನ್ನಪ್ಪ: ಜಂಬೂಸವಾರಿ ದಿನದಂದು ಪ್ರಶಾಂತ ಆನೆಯಿಂದ ಕೆಳಗೆ ಬಿದ್ದು ಎಡಗೈಗೆ ಪೆಟ್ಟು ಮಾಡಿಕೊಂಡಿರುವ ಮಾವುತ ಜೆ.ಆರ್‌.ಚಿನ್ನಪ್ಪ ಚೇತರಿಸಿಕೊಳ್ಳುತ್ತಿದ್ದಾರೆ.‌ ಅವರ ಕೈಗೆ ಬ್ಯಾಂಡೇಜ್‌ ಹಾಕಲಾಗಿದೆ.

‘ಅಂದು ಕಣ್ಣುಗಳು ಮಂಜಾದವು. ತಲೆತಿರುಗಿ ಕೆಳಗೆ ಬಿದ್ದೆ. 18 ವರ್ಷಗಳಿಂದ ಆನೆ ಕೆಲಸದಲ್ಲಿ ತೊಡಗಿದ್ದೇನೆ. ಆದರೆ, ಯಾವತ್ತೂ ಈ ರೀತಿ ಆಗಿರಲಿಲ್ಲ. ಹಿಂದಿನ ರಾತ್ರಿ ಸರಿಯಾಗಿ ನಿದ್ದೆ ಮಾಡಿರದ ಕಾರಣ ಹೀಗಾಗಿರಬಹುದು’ ಎಂದು ಚಿನ್ನಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT