ಮಠಗಳನ್ನು ಬಿಡಿ ಎನ್ನುವುದು ಸರಿಯಲ್ಲ: ಶ್ರೀಶೈಲ ಶ್ರೀ

ಮಂಗಳವಾರ, ಜೂನ್ 18, 2019
31 °C

ಮಠಗಳನ್ನು ಬಿಡಿ ಎನ್ನುವುದು ಸರಿಯಲ್ಲ: ಶ್ರೀಶೈಲ ಶ್ರೀ

Published:
Updated:

ರಾಯಚೂರು: ‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಬೆಂಬಲಿಸಿ, ಇಲ್ಲವೆ ಮಠಗಳನ್ನು ಬಿಡಿ ಎನ್ನುವ ಸಚಿವ ಎಂ.ಬಿ.ಪಾಟೀಲ ಹೇಳಿಕೆ ಅವರ ಸ್ಥಾನಕ್ಕೆ ತಕ್ಕುದ್ದಲ್ಲ' ಎಂದು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ಸಚಿವರೇ ಹೋರಾಟ ಮಾಡುತ್ತಿರುವುದು ಮತ್ತು ಚುನಾವಣೆ ಮುಂಚೆ ನಿರ್ಧಾರ ತಿಳಿಸಿ ಎನ್ನುತ್ತಿರುವುದನ್ನು ನೋಡಿದರೆ ಇದು ರಾಜಕೀಯ ಪ್ರೇರಿತ ಎನ್ನುವುದು ಗೊತ್ತಾಗುತ್ತದೆ’ ಎಂದು ಅವರು ಮಂಗಳವಾರ ಇಲ್ಲಿ ಪ್ರತಿಕ್ರಿಯಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮದ ವಾದದಲ್ಲಿ ಹುರುಳಿಲ್ಲ. 40ಕ್ಕೂ ಹೆಚ್ಚು ಶರಣರು 200ಕ್ಕೂ ಹೆಚ್ಚು ವಚನಗಳಲ್ಲಿ ವೀರಶೈವ ಪದ ಉಲ್ಲೇಖಿಸಿದ್ದಾರೆ. ಆದರೆ, ಕೇವಲ ಎಂಟು ಶರಣರು 13 ವಚನಗಳಲ್ಲಿ ಲಿಂಗಾಯತ ಪದ ಬಳಸಿದ್ದಾರೆ. ಆದರೆ, ಬಸವಣ್ಣನವರ ಯಾವುದೇ ವಚನದಲ್ಲೂ ಲಿಂಗಾಯತ ಪದವಿಲ್ಲ. ಲಿಂಗಾಯತ ಎನ್ನುವ ಪದ ವೀರಶೈವದ ಅನ್ವರ್ಥವಾಗಿದೆ’ ಎಂದು ಹೇಳಿದರು.

‘ಸಮನ್ವಯ ಸಮಿತಿ ನಿರ್ಣಯ ಹೇಳುವವರೆಗೂ ಯಾವುದೇ ಹೇಳಿಕೆ ನೀಡಬಾರದು ಎಂದು ನಿರ್ಧರಿಸಲಾಗಿತ್ತು. ಆದರೆ, ಸಭೆ, ಸಮಾವೇಶಗಳಲ್ಲಿ ಈಗ ಬಹಿರಂಗ ಹೇಳಿಕೆ ನೀಡಲಾಗುತ್ತಿದೆ. ಹೀಗಾಗಿ ಸಮನ್ವಯ ಸಮಿತಿ ರಚನೆಯಾಗುವುದೇ ಎಂಬ ಸಂಶಯ ಮೂಡಿದೆ.

ಮೌಢ್ಯ ನಿಷೇಧ ಕಾಯ್ದೆಯಲ್ಲಿ ವಿವಾದಾತ್ಮಕ ವಿಷಯಗಳನ್ನು ಕೈಬಿಡಲಾಗಿದೆ. ಆದರೆ ಪೂರ್ಣ ಕರಡು ನೋಡಿದ ನಂತರ ವಾಸ್ತವ ತಿಳಿಯಲಿದೆ’ ಎಂದರು.

ಸೋಮವಾರಪೇಟೆ ಮಠದ ರಾಚೋಟಿವೀರ ಶಿವಾಚಾರ್ಯರು, ನಿಲೋಗಲ್ ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯರು, ಬಿಚ್ಚಾಲಿಯ ವೀರಭದ್ರ ಶಿವಾಚಾರ್ಯರು ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry