ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯ ಆಹ್ವಾನಿಸುತ್ತಿರುವ ಚರಂಡಿ!

Last Updated 4 ಅಕ್ಟೋಬರ್ 2017, 8:32 IST
ಅಕ್ಷರ ಗಾತ್ರ

ಲಿಂಗಸುಗೂರು: ಸಮೀಪದ ಕಸಬಾಲಿಂಗಸುಗೂರು ಬಸ್‌ ನಿಲ್ದಾಣ ಬಳಿಯ ಮುಖ್ಯರಸ್ತೆಯ ಚರಂಡಿ ಮೇಲಿನ ಸಿಮೆಂಟ್‌ ಹೊದಿಕೆ ಕುಸಿದು ದೊಡ್ಡ ಕಂದಕ ನಿರ್ಮಾಣವಾಗಿದೆ.

ಒಂದು ವಾರದಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಮೀನುಗಳ ಒಡ್ಡುಗಳು ಕೊಚ್ಚಿ ಹೋಗಿದ್ದು, ಅಲ್ಲಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ರಾಯಚೂರು –ಬೆಳಗಾವಿ ರಾಜ್ಯ ಹೆದ್ದಾರಿ ಮತ್ತು ಬೀದರ್‌ ಶ್ರೀರಂಗಪಟ್ಟಣ ಮೇಲ್ದರ್ಜೆಗೇರಿಸಿದ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಇಬ್ಭಾಗಿಸುವ ಕಸಬಾ ಲಿಂಗಸುಗೂರು ಗ್ರಾಮದಲ್ಲಿ ಚರಂಡಿ ಮೇಲ್ಭಾಗ ಕುಸಿದಿರುವುದು ಅಪಾಯವನ್ನು ಆಹ್ವಾನಿಸುತ್ತಿದೆ. ಕಂದಕ ನಿರ್ಮಾಣವಾಗಿ ಒಂದು ವಾರ ಕಳೆದರೂ ದುರಸ್ತಿಗೆ ಕ್ರಮವಾಗಿಲ್ಲ.

ತಾತ್ಕಾಲಿಕ ದುರಸ್ತಿಗೆ ಮುಂದಾಗಿದ್ದ ಪುರಸಭೆ ಆಡಳಿತ ಮಂಡಳಿ ನಿರ್ವಹಣೆ ವೆಚ್ಚ ಹೆಚ್ಚಾಗುವ ಸಂಬಂಧ ಕೆಲಸ ಸ್ಥಗಿತಗೊಳಿಸಿದೆ. ಲೊಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಇಲಾಖೆ ಅಧಿಕಾರಿ ವರ್ಗ ಸಂಘ ಸಂಸ್ಥೆಗಳ ಮನವಿಗೆ ಸ್ಪಂದಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT