ಭಾನುವಾರ, ಸೆಪ್ಟೆಂಬರ್ 22, 2019
22 °C

ಸ್ವಚ್ಛತೆಗೆ ಆದ್ಯತೆ ನೀಡಿ: ಕುಲಕರ್ಣಿ

Published:
Updated:
ಸ್ವಚ್ಛತೆಗೆ ಆದ್ಯತೆ ನೀಡಿ: ಕುಲಕರ್ಣಿ

ಕಕ್ಕೇರಾ: ‘ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿ ಇಟ್ಟುಕೊಂಡಾಗ ಮಾತ್ರ ಗಾಂಧೀಜಿ ಅವರ ಸ್ವಚ್ಛ ಭಾರತದ ಕನಸು ನನಸಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ನೂತನ ಕಾರ್ಯ ನಿರ್ವಾಹಕ ಅಧಿಕಾರಿ ನರಸಿಂಹರಾವ್ ಕುಲಕರ್ಣಿ ಹೇಳಿದರು.

ಮಹಾತ್ಮ ಗಾಂಧಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಸಮೀಪದ ತಿಂಥಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಸಿದ್ಧ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಚ್ಛ ಭಾರತ ಮಿಷನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಪ್ರತಿಯೊಬ್ಬರೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು. ಉತ್ತಮ ಆರೋಗ್ಯಕ್ಕಾಗಿ ನಾವು ವಾಸಿಸುವ ಸುತ್ತಮುತ್ತ ಕಚ್ಚಾ ವಸ್ತುಗಳು ಬಿಸಾಡದಂತೆ ನೋಡಿಕೊಳ್ಳಬೇಕು. ಬಯಲು ಶೌಚಾಲಯದಿಂದ ಮುಕ್ತಿ ಹೊಂದಿ ಪ್ರತಿ ಕುಟುಂಬವು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬೇಕು’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಇಮಾಮಸಾಬ ಹವಾಲ್ದಾರ್, ಇಮಾಮಸಾಬ ಎ.ಡಿ, ದೇವಿಂದ್ರಪ್ಪಗೌಡ ಮೇಟಿ, ಸದಸ್ಯರಾದ ಇಬ್ರಾಹಿಂ, ಸಂಜೀವಕುಮಾರ, ಮಲ್ಲಪ್ಪ ಪೊಲೀಸಪಾಟೀಲ, ಭೀಮಣ್ಣ ಐದಭಾವಿ, ಮಲ್ಲಿಕಾರ್ಜುನ ದೊಡ್ಡಮನಿ, ಶರಣುನಾಯಕ ಯರಡೋಣಿ, ರತ್ನರಾಜ ಶ್ಯಾಲಿಮನಿ, ಸೋಪಣ್ಣ ಹಾಲಭಾವಿ ಸೇರಿದಂತೆ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.

Post Comments (+)