ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಸಂತೆಯಲ್ಲಿ...

Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸುಧಾರಿತ ಮಾರುತಿ ಸುಜುಕಿ ಎಸ್ ಕ್ರಾಸ್
ಮಾರುತಿ ಎಸ್ ಕ್ರಾಸ್ ಇದೀಗ ಸುಧಾರಿತಗೊಂಡು ಹೊಸ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಕಾಲಿಟ್ಟಿದೆ. ಕ್ರಾಸ್‍ಓವರ್ ವಿಭಾಗದಲ್ಲಿ ಬದಲಾವಣೆಗಳ ಅಗತ್ಯ ಕಂಡು, ಈ ಪರಿಷ್ಕರಣೆ ಕೈಗೊಳ್ಳಲಾಗಿದೆ. ಹೊಸತರಲ್ಲಿ ಎಸ್‍ಎಚ್‌ವಿಎಸ್ ಹೈಬ್ರಿಡ್ ಸಿಸ್ಟಂ ಅಳವಡಿಸಲಾಗಿದೆ. ಪ್ರೊಜೆಕ್ಟರ್ ಎಲ್‍ಇಡಿ ಡಿಆರ್‍ಎಲ್ ಹೆಡ್‌ಲ್ಯಾಂಪ್‌ಗಳು, ಪರಿಷ್ಕೃತ 10 ಸ್ಲಾಟ್ ಕ್ರೋಮ್ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. 16 ಇಂಚಿನ ಬ್ಲಾಕ್ ಮತ್ತು ಡೈಮಂಡ್ ಕಟ್ ಟು ಟೋನ್ ಅಲಾಯ್ ಚಕ್ರಗಳನ್ನು ಹೊಂದಿರಲಿದೆ. ಆಪಲ್ ಕಾರ್ ಪ್ಲೇ ಹಾಗೂ ಆ್ಯಂಡ್ರಾಯ್ಡ್ ಆಟೊ ಅಳವಡಿಸಲಾಗಿದೆ. 25.1ಕಿ.ಮೀ ಮೈಲೇಜ್ ನೀಡಲಿದ್ದು, 10% ಕಡಿಮೆ ಇಂಗಾಲ ಹೊರಸೂಸುತ್ತದೆ. ₹8.92 ಲಕ್ಷದಿಂದ ಆರಂಭಗೊಂಡು ₹11.29 ಲಕ್ಷದವರೆಗೂ ಬೆಲೆ ನಿಗದಿಪಡಿಸಲಾಗಿತ್ತು.

ಫೋರ್ಡ್‌ನ ಐಷಾರಾಮಿ ಪಿಕ್ ಅಪ್ ಟ್ರಕ್
ಟ್ರಕ್‌ಗಳನ್ನು ವಿನ್ಯಾಸದ ದೃಷ್ಟಿಯಿಂದ ನೋಡುವವರು ಕಡಿಮೆ. ಆದರೆ ಪಿಕ್ ಅಪ್ ಟ್ರಕ್‌ಗಳ ವಿನ್ಯಾಸಕ್ಕೆ ಹೊಸ ವ್ಯಾಖ್ಯಾನವನ್ನೇ ನೀಡಲು ಹೊರಟಿದೆ ಫೋರ್ಡ್. ಟ್ರಕ್‌ಗೆ ಐಷಾರಾಮಿ ಸ್ಪರ್ಶ ನೀಡಿದೆ. ಈ ಎಫ್ 450ನ ಆರಂಭಿಕ ಬೆಲೆ $ 87,100. ಎಲ್ಲಾ ಆಯ್ಕೆಗಳನ್ನು ಒಳಗೊಂಡರೆ $94,455 ಎಂದು ಕಂಪೆನಿ ತಿಳಿಸಿದೆ.

ಒಳಾಂಗಣದಲ್ಲಿ ಟು ಟೋನ್ ಕಸ್ಟಮ್ ಕ್ಯಾಮೆಲ್ ಬ್ಲಾಕ್ ಲೆದರ್, ಹ್ಯಾಂಡ್ ಫಿನಿಶ್ಡ್ ಡಾರ್ಕ್ ಆಶ್ ವುಡ್ ಟ್ರಿಮ್‌ನಿಂದ ವಿನ್ಯಾಸಗೊಂಡಿದೆ. ಸ್ಯೂಡ್ ಹೆಡ್‌ಲೈನರ್, ಮೂನ್‌ರೂಫ್, ಎಲ್‍ಇಡಿ ಹೆಡ್‌ಲೈಟ್‌ಗಳು, ಡ್ರೈವರ್ ಅಸಿಸ್ಟನ್ಸ್ ಟೆಕ್ ಕೂಡ ಟ್ರಕ್‌ಗೆ ಇರಲಿದೆ. ಐಷಾರಾಮಿ ಕಾರುಗಳಂತೆ ಲೇನ್ ಕೀಪ್ ಅಸಿಸ್ಟ್, ಕೊಲಿಷನ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಕೂಡ ಈ ಇರಲಿದೆ. ಇನ್ನೂ ಒಂದು ವಿಶೇಷ ಎಂದರೆ, ಇದರಲ್ಲಿ 360ಡಿಗ್ರಿ ಕ್ಯಾಮೆರಾ ಹಾಗೂ ಟ್ರೇಲರ್ ರಿವರ್ಸ್ ಗೈಡನ್ಸ್ ಸೌಲಭ್ಯ ಇರುವುದು.

ಬಜಾಜ್ ಪಲ್ಸರ್ ಎನ್‍ಎಸ್200ಗೆ ಎಬಿಎಸ್
ಬಜಾಜ್ ತನ್ನ ಪಲ್ಸರ್ ಎನ್‍ಎಸ್ 200 ಅನ್ನು ಪರಿಷ್ಕೃತ ಗೊಳಿಸಿದೆ. ಸುರಕ್ಷತಾ ಆಯ್ಕೆಗಳನ್ನು ನೀಡುವ ದೃಷ್ಟಿಯಿಂದ ಬದಲಾವಣೆ ಕೈಗೊಂಡಿದೆ. ಈ ಹೊಸ ಬೈಕ್‌ನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಯುನಿಟ್ ಅನ್ನು ಫ್ರಂಟ್ ವೀಲ್‌ಗಳಿಗೆ ನೀಡಲಾಗಿದೆ.

ಈ ಎಬಿಎಸ್ ಇರುವ ಎನ್‍ಎಸ್ 200ಗೆ ಒಟ್ಟಾರೆ ₹1.09 ಲಕ್ಷ (ಎಕ್ಸ್ ಶೋರೂಂ, ಮುಂಬೈ) ಬೆಲೆ ನಿಗದಿಗೊಳಿಸಿದೆ. ಎಬಿಎಸ್ ಯುನಿಟ್‌ನ ಹೊರತಾಗಿ ಬೇರೆ ಯಾವುದೇ ತಾಂತ್ರಿಕ ಹಾಗೂ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿಲ್ಲ. 199.5ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಮುಂದುವರೆಯಲಿದೆ. ಮೂರು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಿದೆ.

2012ರಲ್ಲಿ ಎನ್‍ಎಸ್ 200 ಅನ್ನು ಬಿಡುಗಡೆಗೊಳಿಸಲಾಗಿತ್ತು. ಈ ವರ್ಷದ ಆರಂಭದಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿ ಬಿಎಸ್ iv ಎಂಜಿನ್‌ ನೊಂದಿಗೆ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ಈ ಪರಿಷ್ಕರಣೆ ಪರಿಚಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT