ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐತಿಹಾಸಿಕ ಸಿನಿಮಾ ಇಷ್ಟ’

Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಂದರ್ಶನ: ಕಲಾವತಿ ಬೈಚಬಾಳ

‘ಮುಗುಳು ನಗೆ’ ಸಿನಿಮಾದ ಅನುಭವ ಹೇಗಿತ್ತು?

(ಜೋರಾಗಿ ನಕ್ಕು) ತುಂಬಾ ಖುಷಿ ನೀಡಿದ ಸಿನಿಮಾ ಇದು. ಬಿಗ್ ಬ್ರೇಕ್ ಸಿಕ್ಕಂತಾಗಿದೆ ನನಗೆ. ಎಷ್ಟೇ ಚಿತ್ರಗಳನ್ನು ಮಾಡಿದ್ದರೂ ಇದರಷ್ಟೂ ಖುಷಿ ಎಲ್ಲೂ ಸಿಕ್ಕಿರಲಿಲ್ಲ. ಈ ಚಿತ್ರದಲ್ಲಿ ಪರಿಪೂರ್ಣವಾಗಿ ನಟನೆ ಮಾಡಿದ್ದೀನಿ ಅಂತಾ ಅಂದುಕೊಂಡಿದೀನಿ. ಸದ್ಯ ಸಿನಿಮಾ ಯಶಸ್ಸು ಕಾಣುತ್ತಿದೆ. ಹೊರ ರಾಜ್ಯದಲ್ಲೂ ಸದ್ದು ಮಾಡ್ತಿದೆ. ಚೆನ್ನೈ, ಹೈದರಾಬಾದ್‌ಗಳಲ್ಲಿಯೂ ಉತ್ತಮ ಸ್ಪಂದನೆ ಸಿಕ್ಕಿದೆ. ಅಮೆರಿಕ, ಕೆನಡಾದಲ್ಲೂ ಚಿತ್ರ ಬಿಡುಗಡೆ ಆಗ್ತಿದೆ. ಎಲ್ಲರ ಮುಖದಲ್ಲೂ ಮುಗುಳು ನಗೆ ಕಾಣ್ತಿದೆ. ಎಲ್ಲರೂ ಎಂಜಾಯ್ ಮಾಡ್ತಿದ್ದಾರೆ.

* ನಟನೆ ಯಾವಾಗಿಂದ ಶುರು ಆಯಿತು?

ನಾನೊಬ್ಬಳು ನಟಿ ಆಗ್ತಿನಿ ಅಂತಾ ಯಾವತ್ತೂ ಅಂದುಕೊಂಡಿರಲಿಲ್ಲ. ನನ್ನ ತಂದೆ ಜಾಹೀರಾತು ಏಜೆನ್ಸಿಯಲ್ಲಿ ಕೆಲಸ ಮಾಡ್ತಿದ್ರು. ಅಲ್ಲಿ ಜಾಹೀರಾತು ಚಿತ್ರ ನಿರ್ಮಿಸುವವರು (ಆ್ಯಡ್‌ ಫಿಲ್ಮಂ ಮೇಕರ್‌) ನನ್ನನ್ನು ನೋಡಿ ಆಡಿಷನ್‌ಗೆ ಕರೆದರು. ಆಗಿನ್ನೂ ನನಗೆ 10 ವರ್ಷ. ಚಿಕ್ಕವಯಸ್ಸಿನಿಂದಲೇ ಜಾಹೀರಾತುಗಳಲ್ಲಿ ನಟಿಸುತ್ತಿದ್ದೆ. ಅಮೇಲೆ ಮಾಡ್‌ಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟೆ. ಓದು ಮುಗಿಯುತ್ತಿದ್ದಂತೆ ಸಿನಿಮಾ ಕ್ಷೇತ್ರದತ್ತ ಗಮನಹರಿಸಿದೆ.

* ಎಷ್ಟು ಚಿತ್ರಗಳನ್ನು ಮಾಡಿದ್ದೀರಿ?

ತೆಲುಗಿನಲ್ಲಿ ಐದು ಚಿತ್ರಗಳಲ್ಲಿ ನಟಿಸಿದ್ದೀನಿ. ಮುಗುಳು ನಗೆ ಕನ್ನಡದಲ್ಲಿ ನಟಿಸಿರೋ ನನ್ನ ಎರಡನೇ ಚಿತ್ರ.

* ಮುಂದೆ ಎಂಥ ಪಾತ್ರದಲ್ಲಿ ಕಾಣಿಸಿಕೊಳ್ಳೊಕೆ ಇಷ್ಡಪಡ್ತೀರಿ?

ಸದ್ಯ ನಾನು ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಒಳ್ಳೇ ಕಥೆಗಾಗಿ, ವಿಭಿನ್ನ ಪಾತ್ರಕ್ಕಾಗಿ ಕಾಯ್ತಿದೀನಿ. ಈಗಾಗಲೇ ಚಟಪಟ ಮಾತನಾಡೋ, ಕ್ಲಾಸಿ ಬೋಲ್ಡ್ ಪಾತ್ರದಲ್ಲಿ ಅಭಿನಯಿಸಿದ್ದೀನಿ. ನಟನೆ ಅನ್ನೋದು ಅಷ್ಟು ಸುಲಭದ ಮಾತಲ್ಲ. ಜನರಿಗೆ ಆ ಪಾತ್ರ ಇಷ್ಟವಾಗಬೇಕು. ಹಾಗಾಗಿ ಜನರು ನನ್ನನ್ನು ಸುಲಭವಾಗಿ ಗುರುತಿಸುವಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳೋಕೆ ಇಷ್ಟಪಡ್ತೀನಿ.

* ಬಿಡುವಿನ ಸಮಯದಲ್ಲಿ ಏನ್ ಮಾಡ್ತೀರಿ?

ನೃತ್ಯ, ಯೋಗ ಮತ್ತು ಚಿತ್ರಕಲೆ ನಂಗೆ ತುಂಬಾ ಇಷ್ಟ ಇವುಗಳ ಜೊತೆಗೆ ಸಮಯ ಕಳಿತೀನಿ.

* ಇಷ್ಟದ ಉಡುಗೆ, ತಿಂಡಿ ಯಾವುದು?

ಎಲ್ಲಾ ಥರದ ಉಡುಗೇನೂ ಇಷ್ಡ. ಆದ್ರೆ ಸೀರೆ ಅಂದ್ರೆ ಸ್ವಲ್ಪ ಹೆಚ್ಚು ಇಷ್ಟ. ಅನ್ನ, ಸಾರು, ಪಲ್ಯ, (ಜೋರಾದ ನಗು) ಪೀಜ್ಜಾ, ಚೀಸ್ ಇಷ್ಟ. ಮನೆಯಲ್ಲಿ ಎಲ್ಲರೂ ಸಸ್ಯಹಾರಿಗಳು. ನನಗೆ ಮೊಟ್ಟೆ ಇಷ್ಟ, ಆದ್ರೆ ಮಾಂಸ ತಿನ್ನಲ್ಲ.

* ಕೆಲಸ ಮಾಡೋವಾಗೆಲ್ಲ ತುಂಬಾ ತರಲೆ ಮಾಡ್ತೀರಂತೆ?

ಹೌದಾ... (ಜೋರಾದ ನಗು) ಹೌದೌದು. ಯಾರಿಗೂ ಬೇಜಾರಾಗದಂತೆ ತರಲೆ ಮಾಡ್ತಾ, ಎಲ್ಲರನ್ನೂ ನಗಸ್ತಾ ಇರ್ತೀನಿ. ಸ್ನೇಹಿತರು ನನ್ನನ್ನು ಪಿ.ಜೆ.ಕ್ವೀನ್ ಅಂತಾ ಕರಿತಾರೆ. ಆಗಾಗಾ ಪಿ.ಜೆ.ಜೋಕ್ಸ್ ಹೋಡಿತಾ ಇರ್ತೀನಿ. ಸಿನಿಮಾ ಶೂಟಿಂಗ್ ಮಾಡೋವಾಗ್ಲೂ ತುಂಬಾ ತರಲೆ ಮಾಡಿದ್ದೀನಿ.

* ಅಭಿಮಾನಿಗಳಿಗೆ ನಿಮ್ಮ ಕಿವಿಮಾತು ಏನು?

ಕನ್ನಡ ಚಿತ್ರಗಳನ್ನು ಆದಷ್ಟು ಚಿತ್ರಮಂದಿರಗಳಿಗೇ ಹೋಗಿ ನೋಡಿ, ಪ್ರೋತ್ಸಾಹಿಸಿ. ಕನ್ನಡ ಸಿನಿಮಾಗಳನ್ನು ಉಳಿಸಿ, ಬೆಳೆಸಿ.

* ತೆಲಗು ಮತ್ತು ಕನ್ನಡ ಚಿತ್ರರಂಗ ಎರಡರಲ್ಲೂ ಕೆಲಸಾ ಮಾಡಿದ್ದೀರಿ. ಏನ್ ವ್ಯತ್ಯಾಸ ಅನಿಸಿತು?

ಹೆಚ್ಚೆನು ವ್ಯತ್ಯಾಸ ಇಲ್ಲ. ಎಲ್ಲಾ ಭಾಷೆಯ ಚಿತ್ರಗಳನ್ನು ನೋಡೊರಿದ್ದಾರೆ.. ಎಲ್ಲಾ ನಟ ನಟಿಯರೂ ಎಲ್ಲೆಡೆಯೂ ಕೆಲಸಾ ಮಾಡ್ತಿದ್ದಾರೆ. ಐಫಾ, ಫಿಲಂಫೇರ್ ಮುಂತಾದ ಅವಾರ್ಡ್ ಕಾರ್ಯಕ್ರಮಗಳಲ್ಲಿ ಎಲ್ಲರನ್ನೂ ಭೇಟಿ ಆಗ್ತೀವಿ. ಕುಶಲೋಪರಿ ಮಾತಾಡ್ತೀವಿ. ನನ್ನ ಮಾತೃಭಾಷೆ ಕನ್ನಡ ಆಗಿರೋದ್ರಿಂದಾ ಕನ್ನಡ ಚಿತ್ರಗಳಲ್ಲಿ ನಟನೆ ಮಾಡಲು ಹೆಚ್ಚು ಸಹಕಾರಿ ಆಯ್ತು. ತೆಲಗು ಚಿತ್ರಗಳ ನಿರ್ಮಾಣದ ಬಜೆಟ್ ಅಧಿಕವಾಗಿರುತ್ತೆ. ನಮ್ಮಲ್ಲೂ ಆ ತರದ ದುಬಾರಿ ಬಜೆಟ್ ಸಿನಿಮಾಗಳು ಸಿಕ್ಕರೆ ಇನ್ನೂ ಒಳ್ಳೊಳ್ಳೆ ಪ್ರತಿಭೆಗಳು ತೆರೆಗೆ ಬರಲು ಸಾಧ್ಯವಾಗುತ್ತೆ. ನಮ್ಮ ಕನ್ನಡ ಚಿತ್ರರಂಗವನ್ನು ಎಲ್ಲೋ ಕರೆದೊಯ್ಯಬಹುದು.

* ಎಂಥ ಚಿತ್ರಗಳು ನಿಮಗಿಷ್ಟ?

ನನಗೆ ಕಮರ್ಷಿಯಲ್ ಸಿನಿಮಾಗಳು ಅಷ್ಟೊಂದು ಇಷ್ಟ ಆಗಲ್ಲಾ. ಕಮರ್ಷಿಯಲ್ ಹಾಡು ನೃತ್ಯಗಳನ್ನು ಎಂಜಾಯ್ ಮಾಡ್ತಿನಿ. ಅದಕ್ಕೂ ಹೆಚ್ಚಾಗಿ ವಾಸ್ತವಕ್ಕೆ ಹತ್ತಿರ ಇರುವಂತಹ ಮತ್ತು ಬಾಹುಬಲಿಯಂತಹ ಐತಿಹಾಸಿಕ ಸಿನಿಮಾಗಳು ತುಂಬಾ ಇಷ್ಟ. ಯಾವುದೋ ಒಂದು ಅದ್ಭುತ ಲೋಕಕ್ಕೆ ಕರೆದೊಯ್ಯುವ, ಅಬ್ಬಾ..! ಎನ್ನಿಸುವಂತಹ ಸಿನಿಮಾಗಳು ತುಂಬಾ ಇಷ್ಟ. ಇಂತಹ ಸಿನಿಮಾಗಳಿಂದ ನಾನು ತುಂಬಾ ಪ್ರೇರಣೆಗೊಳ್ತೀನಿ. ಯುಟರ್ನ್, ತಿಥಿ, ರಂಗಿತರಂಗ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ನನಗೆ ತುಂಬಾ ಇಷ್ಟವಾದ ಸಿನಿಮಾಗಳು.

* ಯಾವ ಆಧಾರದ ಮೇಲೆ ಸಿನಿಮಾ ಒಪ್ಪಿಕೊಳ್ಳುತ್ತೀರಿ?

ಸಿನಿಮಾ ಯಸಸ್ವಿ ಆಗುತ್ತೊ ಬಿಡುತ್ತೊ ಅಂತಾ ಯಾರಿಗೂ ಗೊತ್ತಿರಲ್ಲ. ಹಿರಿಯ ನಿರ್ದೇಶಕರೂ ಸಾಕಷ್ಟು ಅನುಭವ ಹೊಂದಿರುತ್ತಾರೆ. ಸಾಧಾರಣವಾದ ಕಥೆಯನ್ನು ತೆರೆಯ ಮೇಲೆ ಸಖತ್ತಾಗಿ ನಿರ್ಮಿಸಬಲ್ಲ ಕಲೆ ಕರಗತ ಮಾಡಿಕೊಂಡಿರುತ್ತಾರೆ. ಹಾಗಾಗಿ ಎರಡನ್ನೂ ನೋಡಿಕೊಂಡೆ ಸಿನಿಮಾ ಒಪ್ಪಿಕೊಳ್ಳುತ್ತಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT