ಗುರ್ಮಿತ್‌ಗೆ ಆಹ್ವಾನ ನೀಡಿದ ವಿಶ್ವಸಂಸ್ಥೆ!

ಬುಧವಾರ, ಜೂನ್ 26, 2019
28 °C

ಗುರ್ಮಿತ್‌ಗೆ ಆಹ್ವಾನ ನೀಡಿದ ವಿಶ್ವಸಂಸ್ಥೆ!

Published:
Updated:

ವಿಶ್ವಸಂಸ್ಥೆ: ಮುಂದಿನ ತಿಂಗಳು ನಡೆಯುವ ವಿಶ್ವ ಶೌಚಾಲಯ ದಿನಕ್ಕೆ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ಮತ್ತು ಹನಿಪ್ರೀತ್‌ ಅವರನ್ನು ವಿಶ್ವಸಂಸ್ಥೆ  ಆಹ್ವಾನಿಸಿ ಟೀಕೆಗೊಳಗಾದ ಪ್ರಸಂಗ ಬುಧವಾರ ನಡೆಯಿತು.

ವಿಶ್ವ ಶೌಚಾಲಯ ದಿನದಂದು ನಡೆಯುವ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹನಿಪ್ರೀತ್ ಮತ್ತು ಗುರ್ಮೀತ್ ರಾಮ್ ರಹೀಂ ಕೈ ಜೋಡಿಸುವಂತೆ ಕೋರಿ ಟ್ವೀಟ್‌ ಮಾಡಲಾಗಿತ್ತು.ವಿಶ್ವ ಸಂಸ್ಥೆಯ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಆಗುತ್ತಿದ್ದಂತೆ ಹಲವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಇದು ದಿನದ ಬಹುದೊಡ್ಡ ಜೋಕ್ ಎಂದು ವ್ಯಂಗ್ಯವಾಡಿದ್ದಾರೆ.

ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ವಿಶ್ವಸಂಸ್ಥೆ ಈ ಟ್ವೀಟ್‌ ಅನ್ನು ತೆಗೆದು ಹಾಕಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry