ಅಕ್ಷಯಪಾತ್ರ ಪ್ರತಿಷ್ಠಾನಕ್ಕೆ 2 ವಾಹನ ಹಸ್ತಾಂತರ

ಸೋಮವಾರ, ಮೇ 20, 2019
30 °C

ಅಕ್ಷಯಪಾತ್ರ ಪ್ರತಿಷ್ಠಾನಕ್ಕೆ 2 ವಾಹನ ಹಸ್ತಾಂತರ

Published:
Updated:
ಅಕ್ಷಯಪಾತ್ರ ಪ್ರತಿಷ್ಠಾನಕ್ಕೆ 2 ವಾಹನ ಹಸ್ತಾಂತರ

ಬೆಂಗಳೂರು: ಎಂಬೆಸ್ಸಿ ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಎರಡು ವಾಹನಗಳನ್ನು ‘ಅಕ್ಷಯಪಾತ್ರ ಪ್ರತಿಷ್ಠಾನ’ಕ್ಕೆ ನಗರದಲ್ಲಿ ಬುಧವಾರ ಹಸ್ತಾಂತರಿಸಿತು.

ಸಂಸ್ಥೆಯ ಸಮುದಾಯ ವಿಸ್ತರಣ ಕಾರ್ಯಕ್ರಮದ ಮುಖ್ಯಸ್ಥೆ ಶೈನಾ ಗಣಪತಿ, ‘ನಮ್ಮ ಸಂಸ್ಥೆಯು ಸಮುದಾಯದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ. ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕೆಳಹಂತದ ಕುಟುಂಬಗಳ ಪ್ರಗತಿಗೆ ಒತ್ತು ನೀಡುತ್ತಿದೆ’ ಎಂದರು.

ಅಕ್ಷಯಪಾತ್ರ ಪ್ರತಿಷ್ಠಾನದ ಜತೆಗೆ ಕೈಜೋಡಿಸಿರುವುದು ಖುಷಿ ತಂದಿದೆ. ಹಸ್ತಾಂತರಿಸಿದ ವಾಹನಗಳ ಮೂಲಕ ಸರ್ಕಾರಿ ಶಾಲೆಗಳ ಮಕ್ಕಳಿಗೆ ಹಾಲು ವಿತರಣೆ ಮಾಡಲಾಗುತ್ತದೆ. ಇದರಿಂದ ಒಟ್ಟು ಸುಮಾರು 13,000 ಮಕ್ಕಳಿಗೆ ಸಹಾಯವಾಗಲಿದೆ. ಪ್ರತಿಷ್ಠಾನದ ಬಿಸಿಯೂಟ ಯೋಜನೆಗೂ ಸಂಸ್ಥೆ ನೆರವು ನೀಡುತ್ತಿದೆ ಎಂದು ಹೇಳಿದರು.

ನಗರದಲ್ಲಿ 17 ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಒದಗಿಸಲು ಸಂಸ್ಥೆ ಆರ್ಥಿಕ ನೆರವು ನೀಡಿದೆ. 3 ಶಾಲಾ ಕಟ್ಟಡ ನಿರ್ಮಿಸಲು ಸಹಾಯ ಮಾಡಿದೆ ಎಂದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry