ವನ್ಯಜೀವಿ, ಮಾನವ ಸಂಘರ್ಷ ರಾಜ್ಯದಲ್ಲಿ ಅಧಿಕ

ಬುಧವಾರ, ಜೂನ್ 26, 2019
28 °C
ವಿನಾಶದ ಅಂಚಿನಲ್ಲಿರುವ ಕೊಂಡುಕುರಿ ಬೇಟೆ ನಿಲ್ಲಬೇಕು: ಸಂಜಯ್‌ಗುಬ್ಬಿ

ವನ್ಯಜೀವಿ, ಮಾನವ ಸಂಘರ್ಷ ರಾಜ್ಯದಲ್ಲಿ ಅಧಿಕ

Published:
Updated:

ಜಗಳೂರು: ಅರಣ್ಯಗಳು ವನ್ಯಜೀವಿಗಳ ಆವಾಸ ಸ್ಥಾನ ಮಾತ್ರವಾಗಿರದೆ, ಅಮೂಲ್ಯ ಜಲದ ಮೂಲಗಳಾಗಿವೆ. ಅರಣ್ಯಗಳ ನಾಶವಾದಲ್ಲಿ ಮಾನವ ಕುಲಕ್ಕೆ ಆಪತ್ತು ಕಾದಿದೆ ಎಂದು ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಆತಂಕ ವ್ಯಕ್ತಪಡಿಸಿದರು.

ರಂಗಯ್ಯನದುರ್ಗ ವನ್ಯಜೀವಿ ವಲಯದಿಂದ ಪಟ್ಟಣದ ನಾಲಂದ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 63ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರಣ್ಯ ಪ್ರದೇಶಗಳ ಮೇಲೆ ಇತ್ತೀಚೆಗೆ ಒತ್ತಡ ಹೆಚ್ಚುತ್ತಿದೆ. ವನ್ಯಜಿವಿಗಳ ಆವಾಸ ಸ್ಥಾನ ಕುಗ್ಗುತ್ತಿದೆ. ರಾಜ್ಯದಲ್ಲಿ ಶೇ 50ರಷ್ಟು ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ಇದೆ. ಜಗಳೂರು ತಾಲ್ಲೂಕು ಸೇರಿದಂತೆ ಸುಮಾರು 573 ಹಳ್ಳಿಗಳಲ್ಲಿ ಈ ಸಂಘರ್ಷ ಮುಂದುವರಿದಿದೆ. ವನ್ಯಜೀವಿಗಳ ಉಳಿವಿಗಾಗಿ ಅರಣ್ಯ ಇಂತಹ ಸಂಘರ್ಷಗಳ ಸಂದರ್ಭದಲ್ಲಿ ಅರಣ್ಯ ಇಲಾಖೆ ಜನರ ಪರ ನಿಲ್ಲಬೇಕು. ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ವಿತರಿಸಬೇಕು. ಇಲ್ಲದಿದ್ದಲ್ಲಿ ಇಡೀ ವನ್ಯಸಂಕುಲ ಜನರ ಆಕ್ರೋಶಕ್ಕೆ ಬಲಿಯಾಗಬೇಕಾಗುತ್ತದೆ ಎಂದು ಅವರು ಹೇಳಿದರು.

ಕೊಂಡುಕುರಿ ಸಂತತಿ ವಿನಾಶದತ್ತ ಸಾಗಿದೆ. ಭಾರತ, ನೇಪಾಳ ಸೇರಿದಂತೆ ಜಗತ್ತಿನಲ್ಲಿ ಈಗ ಕೇವಲ 7 ಸಾವಿರ ಕೊಂಡುಕುರಿಗಳು ಮಾತ್ರ ಉಳಿದಿವೆ. ದೇಶದ ಏಕೈಕ ಕೊಂಡುಕುರಿ ವನ್ಯಧಾಮ ಇಲ್ಲಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ ಎಂದರು.

ಶಾಸಕ ಎಚ್‌.ಪಿ.ರಾಜೇಶ್‌ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಕೇವಲ ಪಠ್ಯಕ್ರಮ ಬೋಧನೆ ಮಾಡದೇ ಪ್ರಾಯೋಗಿಕವಾಗಿ ಅವರನ್ನು ಪರಿಸರಕ್ಕೆ ಪೂರಕವಾಗಿ ರೂಪಿಸಬೇಕು. ನಮ್ಮ ಪ್ರದೇಶದ ಅರಣ್ಯ, ವನ್ಯಜೀವಿಗಳು, ಮರಗಿಡ, ಬೆಟ್ಟಗುಡ್ಡ ಹಾಗೂ ಐತಿಹಾಸಿಕ ಸ್ಥಳಗಳ ಬಗ್ಗೆ ಅರಿವು ಮೂಡಿಸಬೇಕು’  ಎಂದು ಸಲಹೆ ನೀಡಿದರು.

ವನ್ಯಜೀವಿ ಆಸಕ್ತರಾದ ಡಾ.ಟಿ.ಜಿ.ರವಿಕುಮಾರ್, ವಕೀಲ ಡಿ.ಶ್ರೀನಿವಾಸ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್‌.ಕೆ.ಮಂಜುನಾಥ್‌ ,ಡಿಎಫ್‌ಓ ಕೆ.ಚಂದ್ರಶೇಖರ ನಾಯಕ, ಎಸಿಎಫ್‌ ಸಿ.ಸೇಶಿ, ಆರ್‌ಎಫ್‌ಓ ಸಂದೀಪ ನಾಯಕ, ಪ್ರಾಚಾರ್ಯ ಟಿ.ಮಧು, ಕೆ.ಪಿ.ಪಾಲಯ್ಯ, ಗಿರೀಶ್‌ ಒಡೆಯರ್‌, ಬಿಸ್ತುವಳ್ಳಿ ಬಾಬು ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry