ಇಟ್ಟಿಗೆ ಕಾರ್ಖಾನೆ ಚಿಮಣಿ ಕುಸಿದು ಮೂವರ ಸಾವು

ಬುಧವಾರ, ಮೇ 22, 2019
27 °C

ಇಟ್ಟಿಗೆ ಕಾರ್ಖಾನೆ ಚಿಮಣಿ ಕುಸಿದು ಮೂವರ ಸಾವು

Published:
Updated:

ಕೆಜಿಎಫ್: ಇಟ್ಟಿಗೆ ಕಾರ್ಖಾನೆಯ ಚಿಮಣಿ ಕುಸಿದು ಪಕ್ಕದ ಶೆಡ್‌ನಲ್ಲಿ ಮಲಗಿದ್ದ ಮಗು ಸೇರಿದಂತೆ ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ಸಮೀಪದ ಜೆಕೆಪುರಂ ಬಳಿ ನಡೆದಿದೆ.

ಗ್ರಾಮದ ರಾಜ್‌ಪೇಟೆ ರಸ್ತೆಯಲ್ಲಿರುವ ಜೈರಾಜ್ ಎಂಬುವರಿಗೆ ಸೇರಿದ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಶೌಕರ್ (60), ಅವರ ಪತ್ನಿ ಫಾತಿಮಾ (50) ಮತ್ತು ಮೊಮ್ಮಗ ನಯಾಜ್‌ (5) ಮೃತಪಟ್ಟವರು.

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಸುಮಾರು 30 ಅಡಿ ಉದ್ದದ ಚಿಮಣಿ ಕುಸಿದು ಶೆಡ್‌ ಮೇಲೆ ಬಿದ್ದಿದೆ. ಅವಶೇಷಗಳಡಿ ಸಿಲುಕಿದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ನಯಾಜ್‌ ಬೆಂಗಳೂರಿನ ಚೆನ್ನಸಂದ್ರದ ಬ್ಲೂಮರ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿದ್ದು, ರಾತ್ರಿ ಅಜ್ಜಿ ತಾತನ ಜೊತೆಗೆ ಮಲಗಬೇಕು ಎಂದು ಪಟ್ಟು ಹಿಡಿದು ಗೋದಾಮಿನಲ್ಲಿ ಮಲಗಿದ್ದನು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಪ್ರಭಾರ) ಡಾ.ರೋಹಿಣಿ ಕಟೋಚ್‌, ಡಿವೈಎಸ್ಪಿ ಬಿ.ಎಲ್‌.ಶ್ರೀನಿವಾಸಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದರು. ಆಂಡರಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry