ಡಿ.19ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಶನಿವಾರ, ಮೇ 25, 2019
32 °C

ಡಿ.19ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

Published:
Updated:
ಡಿ.19ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಕೋಲಾರ: ನಗರದಲ್ಲಿ ಬುಧವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.19 ಮತ್ತು 20ರಂದು ನಡೆಸಲು ತೀರ್ಮಾನಿಸಲಾಯಿತು.

ಹೈಕೋರ್ಟ್‌ನ ನಿವೃತ್ತ ನ್ಯಾಯಾಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಅವರನ್ನು ಸಮ್ಮೇಳನದ ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಲಾಯಿತು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಮ್ಮೇಳನ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

‘ಸಮ್ಮೇಳನದ ಸವಿ ನೆನಪಿಗಾಗಿ ಸ್ಮರಣ ಸಂಚಿಕೆ ಹೊರತರಬೇಕು. ಕನ್ನಡದ ಕವನಗಳು, ಲೇಖನಗಳು, ಕಥೆಗಳು ಹಾಗೂ ಕನ್ನಡಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಸಂಚಿಕೆ ಒಳಗೊಂಡಿರಬೇಕು. ಆಸಕ್ತರು ಕವನ, ಲೇಖನ, ಕಥೆಯನ್ನು ಅ.31 ರೊಳಗೆ ಕಳುಹಿಸಬಹುದು’ ಎಂದು ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಹೇಳಿದರು.

ಬಳಿಕ ಪರಿ ಷತ್‌ನ ಪದಾಧಿಕಾರಿಗಳು ನಾಗಮೋಹನ್‌ ದಾಸ್‌ ಅವರನ್ನು ಭೇಟಿಯಾಗಿ ಸಮ್ಮೇಳ ನದ ಅಧ್ಯಕ್ಷತೆ ವಹಿಸುವಂತೆ ಮನವಿ ಮಾಡಿದರು.

ಜಿಲ್ಲೆಯ ಮುಳಬಾಗಿಲು ತಾಲ್ಲೂ ಕಿನ ಹೆಬ್ಬಣಿ ಗ್ರಾಮದ ನಾಗಮೋಹನ್‌ ದಾಸ್‌ ಹಲವು ಸಮಾಜಮುಖಿ ಕೃತಿ ಗಳನ್ನು ರಚಿಸಿದ್ದಾರೆ. ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಹಲವಾರು ಪ್ರಬಂಧಗಳನ್ನು ಬರೆದು ಜನಜಾಗೃತಿ ಮೂಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry