‘ವೈರ’ ತಂಡದ ಬೇಸರದ ಮಾತು

ಶುಕ್ರವಾರ, ಮೇ 24, 2019
22 °C

‘ವೈರ’ ತಂಡದ ಬೇಸರದ ಮಾತು

Published:
Updated:
‘ವೈರ’ ತಂಡದ ಬೇಸರದ ಮಾತು

ಧರ್ಮಶ್ರೀ ಮಂಜುನಾಥ್ ನಿರ್ಮಾಣದ ‘ವೈರ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಿದೆಯಂತೆ. ಸಿನಿಮಾ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ನಿರ್ದೇಶಕ ನವರಸನ್ ಹಾಗೂ ಮಂಜುನಾಥ್ ಅವರು ಈ ವಿಚಾರವಾಗಿ ತಮ್ಮ ಬೇಸರ ತೋಡಿಕೊಂಡಿದ್ದಾರೆ.

ನವರಸನ್ ಅವರು ಈ ಸಿನಿಮಾದಲ್ಲಿ ನಾಯಕ ಆಗಿಯೂ ಅಭಿನಯಿಸಿದ್ದಾರೆ. ಪ್ರಿಯಾಂಕಾ ಮಲ್ನಾಡ್ ಅವರು ಇದರ ನಾಯಕಿ. ಸಿನಿಮಾದಲ್ಲಿ ಪ್ರಿಯಾಂಕಾ ಅವರು ಸನ್ನಿವೇಶವೊಂದಕ್ಕೆ ಪೂರಕವಾಗಿ ಕೆಲವು ಸೆಕೆಂಡ್‌ಗಳ ಕಾಲ ಬೆತ್ತಲೆ ಬೆನ್ನು ತೋರಿಸಿದ್ದಾರಂತೆ. ಹಾಗಾಗಿ, ಸಿನಿಮಾಕ್ಕೆ ‘ಎ’ ಪ್ರಮಾಣಪತ್ರ ನಿಡಲಾಗಿದೆ ಎಂಬುದು ಸಿನಿ ತಂಡದ ಬೇಸರದ ಮಾತು.

‘ಬಾಹುಬಲಿ ಸಿನಿಮಾದಲ್ಲಿ ತಮನ್ನಾ ಅವರು ಬೆನ್ನು ತೋರಿಸಿದ್ದರು ಎಂಬ ಕಾರಣಕ್ಕೆ ಯು/ಎ ಪ್ರಮಾಣಪತ್ರ ನೀಡಲಾಗಿತ್ತು’ ಎಂದು ಹೇಳಿದರು ನವರಸನ್.

‘ವೈರ’ ಚಿತ್ರಕ್ಕೆ ಈ ರೀತಿಯ ಪ್ರಮಾಣಪತ್ರ ನೀಡಿರುವುದಕ್ಕೆ ನಟ ಕೃಷ್ಣಮೂರ್ತಿ ಕವತ್ತಾರ್ ಕೂಡ ಬೇಸರ ವ್ಯಕ್ತಪಡಿಸಿದರು. ‘ಈ ಸಿನಿಮಾದಲ್ಲಿ ಅಶ್ಲೀಲ ದೃಶ್ಯಗಳು, ದ್ವಂದ್ವಾರ್ಥದ ಸಂಭಾಷಣೆಗಳು ಇಲ್ಲ. ಆದರೆ ಕೆಲವು ಸೆಕೆಂಡುಗಳ ಕಾಲ ಬೆನ್ನು ತೋರಿಸುವ ದೃಶ್ಯವಿದೆ ಎಂಬ ಕಾರಣಕ್ಕೆ ಎ ಪ್ರಮಾಣಪತ್ರ ನೀಡಲಾಗಿದೆ. ಅವರು ಯಾವ ಪ್ರಮಾಣಪತ್ರ ನೀಡಿದರೂ, ಜನ ನೀಡುವ ಪ್ರಶಂಸೆಯ ಪ್ರಮಾಣಪತ್ರವೇ ನಮಗೆ ಸ್ಫೂರ್ತಿ’ ಎಂದರು ನಿರ್ಮಾಪಕ ಮಂಜುನಾಥ್.

ಪ್ರಿಯಾಂಕಾ ಅವರು ಸಿನಿಮಾ ಪ್ರಚಾರಕ್ಕೆ ಕೂಡ ಬರುತ್ತಿಲ್ಲ ಎಂಬ ಇನ್ನೊಂದು ಬೇಸರದ ವಿಚಾರವನ್ನೂ ನವರಸನ್ ಪತ್ರಕರ್ತರ ಬಳಿ ಹೇಳಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry