‘ಕರಿಯ 2’ ಬಿಡುಗಡೆಗೆ ಸಿದ್ಧ

ಸೋಮವಾರ, ಮೇ 20, 2019
33 °C

‘ಕರಿಯ 2’ ಬಿಡುಗಡೆಗೆ ಸಿದ್ಧ

Published:
Updated:
‘ಕರಿಯ 2’ ಬಿಡುಗಡೆಗೆ ಸಿದ್ಧ

14 ವರ್ಷದ ಹಿಂದೆ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ಕರಿಯ’ ಚಿತ್ರವು ಜಯಭೇರಿ ಬಾರಿಸಿತ್ತು.

ಈಗ ಸಂತೋಷ್ ಅಭಿನಯದ ‘ಕರಿಯ 2’ ಚಿತ್ರವು ಪರಮೇಶ್ ಹಾಗೂ ಪ್ರೇಮ್ ಅವರ ನಿರ್ಮಾಣದಲ್ಲಿ ತಯಾರಾಗಿ ಬಿಡುಗಡೆಗೆ ಸಿದ್ಧವಾಗಿದೆ. ಸಂತೋಷ್ ಎಂಟರ್‌ ಪ್ರೈಸಸ್‌ ಸಹಯೋಗದಡಿ ನಿರ್ಮಾಣಗೊಂಡಿರುವ ಈ ಚಿತ್ರ ಅಕ್ಟೋಬರ್ 13ರಂದು ರಾಜ್ಯದಾದ್ಯಂತ ತೆರೆಗೆ ಬರಲಿದೆ.

ಪ್ರಭು ಶ್ರೀನಿವಾಸ್ ಈ ಚಿತ್ರ ನಿರ್ದೇಶಿಸಿದ್ದಾರೆ. ಕೃಪಾ ಕರಣ್ ಅವರ ಸಂಗೀತ ಚಿತ್ರಕ್ಕಿದೆ. ಜಯಂತ ಕಾಯ್ಕಿಣಿ, ಕವಿರಾಜ್ ಹಾಗೂ ಚಿನ್ಮಯಿ ಗೀತ ಸಾಹಿತ್ಯ ಮಾಡಿದ್ದಾರೆ.

ಸಂತೋಷ್ ಅವರಿಗೆ ನಾಯಕಿಯಾಗಿ ಮಯೂರಿ ಅಭಿನಯಿಸಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಟ ಅಜಯ್ ಘೋಷ್ ಈ ಚಿತ್ರದಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲ ಅವರೂ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶ್ರೀನಿವಾಸ್ ದೇವಸ್ವಂ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಗೌಡ ಸಂಕಲನ ಈ ಚಿತ್ರಕ್ಕಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry