‘ದಿ ವಿಲನ್’ ಬ್ಯಾಂಕಾಕ್‌ಗೆ ಪಯಣ

ಸೋಮವಾರ, ಮೇ 27, 2019
34 °C

‘ದಿ ವಿಲನ್’ ಬ್ಯಾಂಕಾಕ್‌ಗೆ ಪಯಣ

Published:
Updated:

‘ದಿ ವಿಲನ್‌’ ಚಂದನವನದ ಬಹುನಿರೀಕ್ಷಿತ ಚಿತ್ರ. ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದ ಈ ಚಿತ್ರವನ್ನು ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ.

ಡಾ.ಸಿ.ಆರ್. ಮನೋಹರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರತಂಡವು ಒಂದು ಭರ್ಜರಿ ಚೇಸಿಂಗ್ ದೃಶ್ಯ ಸೆರೆ ಹಿಡಿಯಲು ಬ್ಯಾಂಕಾಕ್ ತಲುಪಿದೆ.

ಚೇಸಿಂಗ್ ದೃಶ್ಯ ಸೆರೆ ಹಿಡಿಯಲು ₹ 3.5 ಕೋಟಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್, ಕಿಚ್ಚ ಸುದೀಪ್ ಹಾಗೂ ತಿಲಕ್ ಈ ದೃಶ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾಸ್ ಮಾದ ಅವರ ಸಾಹಸ ನಿರ್ದೇಶನದಲ್ಲಿ ಮೂಡಿಬರಲಿರುವ ಈ ದೃಶ್ಯಕ್ಕೆ ವಿದೇಶಿ ಸಾಹಸಿಗರನ್ನೂ ಬಳಸಿಕೊಳ್ಳಲಾಗುವುದು ಎಂದು ಪ್ರೇಮ್ ಹೇಳಿದ್ದಾರೆ. ಮೊದಲ ಬಾರಿಗೆ ಆಮಿ ಜಾಕ್ಸನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿದ್ದಾರೆ. ಶ್ರುತಿ ಹರಿಹರನ್, ಶ್ರೀಕಾಂತ್, ಹಿಂದಿ ನಟ ಮಿಥುನ್ ಚಕ್ರವರ್ತಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. 

*

ಮೊದಲ ಹಂತ ಪೂರ್ಣ

ಮಾನಸಾ ದಿನಕರ್ ತೂಗುದೀಪ ‘ಲೈಫ್ ಜೊತೆ ಒಂದು ಸೆಲ್ಫಿ’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಮಾನಸಾ ಅವರ ಪತಿ ದಿನಕರ್ ತೂಗುದೀಪ ನಿರ್ದೇಶನ ಮಾಡುತ್ತಿರುವ ಚಿತ್ರ

ಇದಾಗಿದೆ. ಈಗಾಗಲೇ ಮೊದಲ ಹಂತದಲ್ಲಿ ಉಡುಪಿ, ಮಲ್ಪೆ ಬೀಚ್, ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಚಿತ್ರದ ಹಾಡುಗಳು ಹಾಗೂ ಮಾತಿನ ಭಾಗದ ಚಿತ್ರೀಕರಣ ದಾಖಲಿಸಲಾಗಿದೆ. ಇದು ಸಮೃದ್ಧಿ ಮಂಜುನಾಥ್ ನಿರ್ಮಾಣದ ಚಿತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry