ರಸ್ತೆ ತಕರಾರು: ಪರಸ್ಪರ ಹಲ್ಲೆ, ದೂರು

ಗುರುವಾರ , ಜೂನ್ 20, 2019
31 °C
ಹೆಬ್ರಿಯಲ್ಲಿ ಮನೋರಂಜನಾ ಕೂಟ ಉದ್ಘಾಟನೆ

ರಸ್ತೆ ತಕರಾರು: ಪರಸ್ಪರ ಹಲ್ಲೆ, ದೂರು

Published:
Updated:

ಬೈಂದೂರು: ರಸ್ತೆಗೆ ಸ್ಥಳ ಬಿಟ್ಟುಕೊಡುವ ಕುರಿತು ಕಾಲ್ತೋಡು ಗ್ರಾಮದ ಎರಡು ಕುಟುಂಬಗಳ ನಡುವಿನ ತಕರಾರಿನ ಕಾರಣ ಪರಸ್ಪರ ಹಲ್ಲೆ ನಡೆಸಿದ ಬಗ್ಗೆ ಪೊಲೀಸರಿಗೆ ಎರಡು ಪ್ರತ್ಯೇಕ ದೂರು ಸಲ್ಲಿಸಲಾಗಿದೆ.

ಅಲ್ಸಾಡಿ ಹರೋರಿಮನೆ ಜ್ಯೋತಿ ಶೆಟ್ಟಿ ಅವರು, ‘ಗೋಪಾಲ ಶೆಟ್ಟಿ, ನಿರಂಜನ ಶೆಟ್ಟಿ, ವಿಜಯ ಶೆಟ್ಟಿ, ಪ್ರಜ್ವಲ ಶೆಟ್ಟಿ ಅವರುಗಳು ನನ್ನ ಮೇಲೆ ಸೋಮವಾರ ಹಲ್ಲೆ ನಡೆಸಿದರು. ಆಗ ಆದ ಎದೆನೋವಿನ ಚಿಕಿತ್ಸೆಗೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾದ್ದೇನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಕವಲಾಡಿಮನೆ ಗೋಪಾಲ ಶೆಟ್ಟಿ ನೀಡಿರುವ ದೂರಿನಲ್ಲಿ ದಾರಿ ಬಗ್ಗೆ ನ್ಯಾಯಲಯದ ಖಾಯಂ ಇಂಜಂಕ್ಷನ್ ಇದ್ದರೂ ಜ್ಯೋತಿ ಶೆಟ್ಟಿ ಮತ್ತಿತರರು ದಾರಿಗೆ ತಡೆಯುಂಟು ಮಾಡಿರುವುದರ ಕುರಿತು ಮಾತನಾಡುತ್ತಿದ್ದಾಗ ನನಗೆ ಮತ್ತು ಮಗ ನಿರಂಜನ ಅವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಲಾಯಿತು. ಚಿಕಿತ್ಸೆಗೆ ತಾವಿಬ್ಬರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿರುವುದಾಗಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry