ಬುಧವಾರ, ಸೆಪ್ಟೆಂಬರ್ 18, 2019
21 °C

ಮಲಯಾಳದ ‘ಕಲಿ’ ಕನ್ನಡದ ‘ಕಿಡಿ’

Published:
Updated:
ಮಲಯಾಳದ ‘ಕಲಿ’ ಕನ್ನಡದ ‘ಕಿಡಿ’

ಮಲಯಾಳ ಚಿತ್ರರಸಿಕರ ಮನ ಗೆದ್ದಿದ್ದ ‘ಕಲಿ’ ಚಿತ್ರ ಕನ್ನಡದಲ್ಲಿ ‘ಕಿಡಿ’ ಎನ್ನುವ ಹೆಸರಿನಲ್ಲಿ ಮೈದಳೆದಿದೆ. ಸಿನಿಮಾವನ್ನು ತೆರೆಗೆ ತರುವ ಮುನ್ನ ಸಿನಿತಂಡ ಸುದ್ದಿಗೋಷ್ಠಿ ನಡೆಸಿ, ಕೆಲವು ಮಾಹಿತಿ ನೀಡಿತು. ನೃತ್ಯ ನಿರ್ದೇಶಕ ರಘು.ಎಸ್ ಅವರು ಈ ಸಿನಿಮಾದ ಮೂಲಕ ಮೊದಲ ಬಾರಿಗೆ ನಿರ್ದೇಶನ ಕೆಲಸಕ್ಕೆ ಕೈಹಾಕಿದ್ದಾರೆ.

‘ಪರೀಕ್ಷೆ ಬರೆದು, ಫಲಿತಾಂಶಕ್ಕೆ ಕಾಯುತ್ತಿದ್ದೇವೆ. ಬ್ಯಾಂಕ್ ಉದ್ಯೋಗಿ ಪಾತ್ರ ನನ್ನದು. ಮೂಲ ಚಿತ್ರದ ಎಳೆಯನ್ನು ತೆಗೆದುಕೊಂಡು ಕನ್ನಡದ ಸಂಸ್ಕೃತಿಗೆ ತಕ್ಕಂತೆ ಬದಲಾವಣೆ ಮಾಡಲಾಗಿದೆ. ಆ್ಯಕ್ಷನ್ ದೃಶ್ಯಕ್ಕಾಗಿ ಏಳು ತಿಂಗಳು ತಾಲೀಮು ನಡೆಸಿದ್ದೇನೆ’ ಎಂದರು ನಟ ಭುವನ್‍ ಚಂದ್ರ.

‘ಪ್ರೇಮಿಯಾಗಿ ನಾಯಕನಿಗೆ ಕೋಪ ಬೇಡ ತಾಳ್ಮೆ ಇರಲಿ ಎಂದು ಬುದ್ಧಿವಾದ ಹೇಳುತ್ತೇನೆ. ಒಂದು ಹಂತದಲ್ಲಿ ಸಂಕಷ್ಟಗಳು ಮೈಮೇಲೆ ಬಂದು ಬೀಳುತ್ತವೆ. ಆಗ ಸಿನಿಮಾ ತಿರುವು ಪಡೆದುಕೊಳ್ಳುತ್ತದೆ’ ಎಂದರು ನಾಯಕಿ ಪಲ್ಲವಿ.

ಲಾರಿ ಚಾಲಕನಾಗಿ ಡ್ಯಾನಿ ಕುಟ್ಟಪ್ಪ, ಡಾಬಾ ಮಾಲೀಕನ ಪಾತ್ರದಲ್ಲಿ ಉಗ್ರಂ ಮಂಜು ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳು ಈ ಸಿನಿಮಾದಲ್ಲಿ ಇವೆ. ಎಮಿಲ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ಟಿ.ನಾಗರಾಜ್ ಅವರು. ಬಿ.ಟಿ.ಮಲ್ಲಿಕಾರ್ಜುನಯ್ಯ, ಆರ್.ಧನಂಜಯ್ ಸಹ ನಿರ್ಮಾಪಕರು.

Post Comments (+)