ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿರಾಯ

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೆ.ಎನ್. ನಾಗೇಶ್ ಕೋಗಿಲು ನಿರ್ಮಾಣದ ಚಿತ್ರ ಇದು. ಅರವಿಂದ್ ಕೌಶಿಕ್ ಈ ಚಿತ್ರದ ನಿರ್ದೇಶಕರು. ಬಾಲು ನಾಗೇಂದ್ರ, ದಿವ್ಯಾ ಉರುಡುಗ, ಚಿರಶ್ರೀ ಅಂಚನ್, ನವರಸ ರಾಮಕೃಷ್ಣ, ರೇಣು, ನಾಗೇಂದ್ರ ಕುಮಾರ್, ಕುಲದೀಪ್, ಶ್ರೀನಾಥ ಕೌಂಡಿನ್ಯ ತಾರಾಗಣ ಈ ಚಿತ್ರದಲ್ಲಿ ಇದೆ. ರವಿ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ, ಅರ್ಜುನ್ ರಾಮು ಸಂಗೀತ ನೀಡಿದ್ದಾರೆ.

*
ಕಿಡಿ
ಟಿ.ನಾಗರಾಜ್ ಈ ಚಿತ್ರದ ನಿರ್ಮಾಪಕರು. ರಘು ಎಸ್ ಅವರು ಇದರ ನಿರ್ದೇಶಕ. ಎಮಿಲ್ ಸಂಗೀತ ನಿರ್ದೇಶನ, ಬೆನಕರಾಜು ಛಾಯಾಗ್ರಹಣ ಚಿತ್ರಕ್ಕಿದೆ. ಮಲೆಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ ‘ಕಲಿ’ ಚಿತ್ರದ ರಿಮೇಕ್ ಇದು. ಭುವನ್ ಚಂದ್ರ, ಪಲ್ಲವಿ ಗೌಡ, ಡ್ಯಾನಿ ಕುಟ್ಟಪ್ಪ, ಉಗ್ರಂ ಮಂಜು, ಮಜಾ ಟಾಕೀಸ್ ಪವನ್, ಯತಿರಾಜ್, ಮನಮೋಹನ್ ರೈ, ಕಾವ್ಯ ಸಿನಿಮಾದ ತಾರಾಬಳಗದಲ್ಲಿದ್ದಾರೆ.

*
ವೈರ
ಧರ್ಮಶ್ರೀ ಮಂಜುನಾಥ್ ನಿರ್ಮಾಣದ ಚಿತ್ರ ಇದು. ನವರಸನ್ ಅವರು ಈ ಚಿತ್ರ ನಿರ್ದೇಶಿಸಿದ್ದಾರೆ. ಅಲ್ಲದೆ ಇದರಲ್ಲಿಲ ನಾಯಕನಾಗಿಯೂ ಅಭಿನಯಿಸಿದ್ದಾರೆ. ನಿತಿನ್ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಸಂಗಿತ ಈ ಚಿತ್ರಕ್ಕಿದೆ. ಪ್ರಿಯಾಂಕಾ ಮಲ್ನಾಡ್, ಕೆಂಪೇಗೌಡ, ತಬಲಾ ನಾಣಿ, ಕೌತಾರ್, ಮಂಜುಳಾ, ಹ್ಯಾರಿ ತಾರಾಗಣ ಈ ಚಿತ್ರದಲ್ಲಿದೆ.

*
ಲಕ್ಷ್ಮೀನಾರಾಯಣರ ಪ್ರಪಂಚನೇ ಬೇರೆ
ಹಿರಿಯ ನಟಿ ವಿನಯಾ ಪ್ರಸಾದ್ ಹಾಗೂ ಜ್ಯೋತಿ ಪ್ರಕಾಶ್ ಅತ್ರೆ ಅವರು ನಿರ್ಮಿಸಿರುವ ಚಿತ್ರ ಇದು. ವಿನಯಾ ಪ್ರಸಾದ್ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ಜೆ.ಜೆ.ಕೃಷ್ಣ ಅವರ ಛಾಯಾಗ್ರಹಣವಿದೆ. ಇದು ಹಾಸ್ಯಭರಿತ ಕೌಟುಂಬಿಕ ಚಿತ್ರ. ಮಂಜುನಾಥ್ ಹೆಗಡೆ, ವಿನಯಾ ಪ್ರಸಾದ್, ಜ್ಯೋತಿ ಪ್ರಕಾಶ್ ಅತ್ರೆ, ಪ್ರಥಮಾ ಪ್ರಸಾದ್ ರಾವ್, ಋತು, ಶೈಲಜಾ ಜೋಶಿ, ದೀಪಕ್ ಕುಮಾರ್ ಜೆ.ಕೆ ತಾರಾಬಳಗದಲ್ಲಿದ್ದಾರೆ.

*
ಏಪ್ರಿಲ್‍ನ ಹಿಮ ಬಿಂದು
ಶಿವ್ – ಜಗನ್ ನಿರ್ದೇಶನದ ಚಿತ್ರ ಇದು. ಭರತ್ ಬಿ.ಜೆ ಸಂಗೀತ, ಮಂಜುನಾಥ್ ಬಿ. ನಾಯಕ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ದತ್ತಣ್ಣ, ಸೋಮಶೇಖರ್, ಬಾಬು ಹಿರಣ್ಣಯ್ಯ, ಶ್ರೀಧರ್, ಚಿದಾನಂದ್, ಸಚಿನ್, ಗಣೇಶ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT