ಭಾನುವಾರ, ಸೆಪ್ಟೆಂಬರ್ 22, 2019
23 °C
ಅರಳಹಳ್ಳಿ ಗ್ರಾಮಸ್ಥರ ಮನವಿ

ಮಾದಿಗ ಸಮುದಾಯಕ್ಕೆ ರಕ್ಷಣೆ ನೀಡಿ

Published:
Updated:

ಯಾದಗಿರಿ: ಸುರಪುರ ತಾಲ್ಲೂಕಿನ ಅರಳಹಳ್ಳಿ ಗ್ರಾಮದ ಮಾದಿಗ ಸಮುದಾಯಕ್ಕೆ ಸೂಕ್ತ ಪೊಲೀಸ್‌ ರಕ್ಷಣೆ ನೀಡುವಂತೆ ಆಗ್ರಹಿಸಿ ಮಾದಿಗ ಸಮುದಾಯದ ಮುಖಂಡರು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಗ್ರಾಮದ ಆರು ಜನರು ಮಾದಿಗ ಸಮುದಾಯದವರ ಮೇಲೆ ಅನ್ಯ ಸಮಾಜದವರು ಹಲ್ಲೆ ಮಾಡಿದ್ದಾರೆ. ಸುರಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆ ಮಾಡಿದ ಆರೋಪಿಗಳ ಸಂಬಂಧಿಕರು ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಇದರಿಂದ ಅಲ್ಲಿನ ಮಾದಿಗ ಸಮುದಾಯ ಭೀತಿಯಲ್ಲಿ ಕಾಲ ಕಳೆಯುವಂತೆ ಆಗಿದೆ ಎಂದು ಗ್ರಾಮದ ಸಾಮಪ್ಪ, ರಾಮಣ್ಣ, ಹೊಳೆಪ್ಪ, ಬಸಪ್ಪ, ಧರ್ಮಣ್ಣ, ಮಹಾದೇವ, ಮಹಾಲಿಂಗಪ್ಪ, ಭೀಮರಾಯ ಮನವಿ ಮಾಡಿದ್ದಾರೆ.

Post Comments (+)