ಜೆಡಿಎಸ್‌ ತಳಮಟ್ಟದಿಂದ ಸಂಘಟಿಸಿ: ನಾಗನಗೌಡ ಕಂದಕೂರ

ಬುಧವಾರ, ಜೂನ್ 19, 2019
22 °C

ಜೆಡಿಎಸ್‌ ತಳಮಟ್ಟದಿಂದ ಸಂಘಟಿಸಿ: ನಾಗನಗೌಡ ಕಂದಕೂರ

Published:
Updated:

ಯಾದಗಿರಿ: ‘ಜೆಡಿಎಸ್‌ನ ವಿವಿಧ ಘಟಕಗಳಿಗೆ ನೇಮಕವಾಗಿರುವ ಪದಾಧಿಕಾರಿಗಳು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು’ ಎಂದು ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ನಾಗನಗೌಡ ಕಂದಕೂರು ಸಲಹೆ ನೀಡಿದರು.

ನಗರದ ಸರ್ಕೀಟ್ ಹೌಸ್‌ನಲ್ಲಿ ಮಂಗಳವಾರ ನಡೆದ ಪಕ್ಷದ ನೂತನ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಕ್ಷದ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಬಡವರ, ರೈತರು ಹಾಗೂ ಯುವಕರ ಏಳಿಗೆಗಾಗಿ ರಾಜ್ಯಕ್ಕೆ ಜೆಡಿಎಸ್‌ನ ಅವಶ್ಯವಿದ್ದು, ಈ ಬಾರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ, ನಾಡಿನ ಅಭಿವೃದ್ಧಿಗೆ ಮತ್ತೊಮ್ಮೆ ನಾಂದಿ ಹಾಡಬೇಕಿದೆ’ ಎಂದರು.

‘ಕುಮಾರಸ್ವಾಮಿ ಸದ್ಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಒಂದು ತಿಂಗಳ ವಿಶ್ರಾಂತಿಯ ನಂತರ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯದ 50 ಕಡೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಯಾದಗಿರಿ ಜಿಲ್ಲೆಯಲ್ಲೂ ಗ್ರಾಮ ವಾಸ್ತವ್ಯ ಮಾಡುವರು’ ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಅವರ ಆದೇಶದಂತೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜಿ. ತಮ್ಮಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಹನುಮೇಗೌಡ ಬೀರನಕಲ್, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮಸಿಯೋದ್ದೀನ್ ಆಸೀಂ ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಶಿವಶಕರ ಮೋಟಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ ಅವರು ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಿದರು.

ಚನ್ನಪ್ಪಗೌಡ ಮೋಸಂಬಿ, ಲಿಂಗಣಗೌಡ ಕೋಂಡಾಪೂರ, ರಾಜಶೇಖರಗೌಡ ವಡಗೇರಾ, ಅಜಯರೆಡ್ಡಿ ಎಲ್ಹೇರಿ, ಅನಿಲ ಕುಮಾರ ಹೆಡಗಿಮದ್ರಾ, ಸುಭಾಶ್ಚಂದ್ರ ಹೊನಗೆರಾ, ವಿಶ್ವನಾಥ , ನರಸಪ್ಪ ಬದ್ದೇಪಲ್ಲಿ, ಹಣಮಂತ್ರಾಯ ತೇಕ್ರಾಳ್, ಎಂ.ಜಿ.ಕೊಣ್ಣೂರು, ಸಂಗಾರೆಡ್ಡಿ ಸೈದಾಪುರ, ಶಿವಶಂಕರ ಶಿವರಾಯ, ಶರಣು ಅವಂಟಿ, ನರಸಪ್ಪ ಧನವಾಡ, ಭೀಮೇಶಪ್ಪ ಗುಡಸೆ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry