‘ರಾಜರಥ’ದ ಮೊದಲ ನೋಟ!

ಮಂಗಳವಾರ, ಮೇ 21, 2019
23 °C

‘ರಾಜರಥ’ದ ಮೊದಲ ನೋಟ!

Published:
Updated:
‘ರಾಜರಥ’ದ ಮೊದಲ ನೋಟ!

‘ರಂಗಿತರಂಗ’ ಸಿನಿಮಾ ಮೂಲಕ ಸಿನಿಮಾ ಪ್ರಿಯರ ಹೃದಯ ಗೆದ್ದಿದ್ದ ಅನೂಪ್‌ ಭಂಡಾರಿ ಅವರು ಮತ್ತೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ಇದರ ಹೆಸರು ‘ರಾಜರಥ’. ಈ ಸಿನಿಮಾದ ಮೂರು ಜನ ಪ್ರಮುಖ ಪಾತ್ರಧಾರಿಗಳ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಇದು ಆಗಿರುವುದು ಆನ್‌ಲೈನ್‌ ಮೂಲಕವೇ, ನಿರ್ದಿಷ್ಟ ಸಭಾಂಗಣವೊಂದರ ವೇದಿಕೆಯಲ್ಲಿ ಅಲ್ಲ! ಈ ಚಿತ್ರವನ್ನು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾಗುತ್ತಿದೆಯಂತೆ.ತಮಿಳು ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟ ಆರ್ಯ ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರಂತೆ.

‘ರಾಜರಥ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ನಾಯಕ, ನಾಯಕಿಯನ್ನು ಮಾತ್ರವಲ್ಲದೆ ರವಿಶಂಕರ್ ಅವರ ವಿಶೇಷ ಗೆಟಪ್ಪನ್ನೂ ನೋಡಬಹುದು. ಈ ಸಿನಿಮಾದಲ್ಲಿ ಸಿಗುವ ಫೀಲ್‌ ಏನಿರುತ್ತದೆ ಎಂಬುದನ್ನೂ ಈ ಪೋಸ್ಟರ್ ಹೇಳುತ್ತದೆ’ ಎಂದರು ನಿರ್ದೇಶಕ ಅನೂಪ್.

ಸಿನಿಮಾ ತಂಡವು ಆರ್ಯ ಅವರ ಲುಕ್ ಈ ಚಿತ್ರದಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿಸುವ ‍ಪೋಸ್ಟರ್‌ಅನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆಯಂತೆ.

ಅಜಯ್ ರೆಡ್ಡಿ, ಅಂಜು ವಲ್ಲಭನೇನಿ, ವಿಶು ಡಾಕಪ್ಪಗಾರಿ ಮತ್ತು ಸತೀಶ್ ಶಾಸ್ತ್ರಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿದವರು ಅನೂಪ್ ಭಂಡಾರಿ. ಛಾಯಾಗ್ರಹಣ ವಿಲಿಯಂ ಡೇವಿಡ್ ಅವರದ್ದು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry