ಓಂಕಾರವೆನ್ನುವ ಪದಕ್ಕೆ ವಿಶೇಷವಾದ ಅರ್ಥವಿದೆ. ಓಂ ಎನ್ನುವುದರಿಂದ ಮನಸ್ಸು ಶಾಂತವಾಗುತ್ತದೆ. ಇಡೀ ಜಗತ್ತಿನ ಸಮ್ಮಿಲನ ಎಂಬ ಅರ್ಥವನ್ನು ಇದು ನೀಡುತ್ತದೆ.
ನಮ್ಮ ಮನೆಯನ್ನು ಕಟ್ಟುವ ಮೊದಲು ಬಹಳ ಕನಸುಗಳನ್ನು ಇರಿಸಿಕೊಂಡಿದ್ದೆವು. ಅಂದುಕೊಂಡ ಹಾಗೆಯೇ ಮನೆ ನಿರ್ಮಿಸಿದೆವು. ಇದಕ್ಕೊಂದು ಚೆಂದದ ಹೆಸರಿಡುವ ಸಂದರ್ಭದಲ್ಲಿ ಓಂಕಾರದ ನಿನಾದ ನೆನಪಾಯಿತು. ಎಲ್ಲರೂ ಒಪ್ಪಿಕೊಂಡು ಈ ಹೆಸರು ಇಟ್ಟೆವು. –ಸುಮಾ ಶಾಂತರಾಜು, ಟಿ.ದಾಸರಹಳ್ಳಿ