ಹುತಾತ್ಮ ಯೋಧರಿಗೆ ನಮನ

ಬುಧವಾರ, ಜೂನ್ 19, 2019
28 °C

ಹುತಾತ್ಮ ಯೋಧರಿಗೆ ನಮನ

Published:
Updated:
ಹುತಾತ್ಮ ಯೋಧರಿಗೆ ನಮನ

ಭರತನಾಟ್ಯ ಕಲಾವಿದೆ ಸುಭಾಷಿಣಿ ವಸಂತ್‌ 2007ರಲ್ಲಿ ಹುತಾತ್ಮರಾದ ತಮ್ಮ ಪತಿ ದಿ. ಕರ್ನಲ್‌ ವಸಂತ್‌ ಅವರ ಸ್ಮರಣಾರ್ಥವಾಗಿ 2008ರಲ್ಲಿ 'ವಸಂತರತ್ನ ಫೌಂಡೇಷನ್‌ ಫಾರ್‌ ಆರ್ಟ್‌' ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಗೆ ಈಗ ಹತ್ತು ವರುಷ ತುಂಬಿದೆ.

ಗಡಿಯಲ್ಲಿ ಪತಿಯನ್ನು ಕಳೆದುಕೊಂಡ ತನ್ನಂತಹದ್ದೇ ಸ್ಥಿತಿಯಲ್ಲಿರುವ ಮಹಿಳೆಗೆ ಆತ್ಮಸ್ಥೈರ್ಯ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ... ಹೀಗೆ ಹುತಾತ್ಮ ಯೋಧರ ಕುಟುಂಬದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಸ್ಥೆಯ ಮುಖ್ಯಸ್ಥೆ ಸುಭಾಷಿಣಿ ವಸಂತರತ್ನ ಅವರ ಮೊಗದಲ್ಲಿ  10 ವರ್ಷದ ಚಟುವಟಿಕೆಗಳ ಬಗ್ಗೆ ಸಾರ್ಥಕತೆ ಇದೆ.

ಹುತಾತ್ಮ ಯೋಧರಿಗೆ ಗೌರವ ಸಲ್ಲಿಕೆ ಹಾಗೂ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಸುಭಾಷಿಣಿ ವಸಂತ್‌ ಅವರ ಏಕವ್ಯಕ್ತಿ ನೃತ್ಯ ಕಾರ್ಯಕ್ರಮ 'ಸೆಲ್ಯೂಟ್‌ ಟು ಹೀರೋಸ್‌‘ ಕಾರ್ಯಕ್ರಮವು ಅ.21ರಂದು ಸಂಜೆ 6 ಗಂಟೆಗೆ ಚೌಡಯ್ಯ ಮೆಮೊರಿಯಲ್‌ ಹಾಲ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕಾಗಿ ಸುಭಾಷಿಣಿ ಅವರು ಕಳೆದ ಎಂಟು ತಿಂಗಳಿನಿಂದ ಖ್ಯಾತ ನಟಿ, ನೃತ್ಯಗಾರ್ತಿ ವೈಜಯಂತಿ ಮಾಲ ಅವರಿಂದ ನೃತ್ಯ ತರಬೇತಿ ಪಡೆದಿದ್ದಾರೆ. ವೈಜಯಂತಿ ತಮ್ಮ ನೆಚ್ಚಿನ ಶಿಷ್ಯೆಗೆ ನಟುವಾಂಗ ಹಾಗೂ ಸಾಂಪ್ರದಾಯಿಕ ನೃತ್ಯ ಮಾರ್ಗಗಳ ಬಗ್ಗೆ ಕಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ವತಃ ಅವರೇ ಹಾಡಲಿರುವುದು ವಿಶೇಷ.

1.15 ಗಂಟೆ ಅವಧಿಯ ಸೋಲೊ ನೃತ್ಯದಲ್ಲಿ ಭರತನಾಟ್ಯದ ಸಾಂಪ್ರದಾಯಿಕ ಮಾರ್ಗಗಳು ಹಾಗೂ ಪ್ರಾಕಾರಗಳನ್ನು ಸುಭಾಷಿಣಿ ಪ್ರಸ್ತುತಪಡಿಸಲಿದ್ದಾರೆ. ನೃತ್ಯದ ಮೂಲಕವೇ ಹುತಾತ್ಮ ಯೋಧರಿಗೆ ಗೌರವ ಸಲ್ಲಿಕೆಯೂ ಇದೆ. ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗಗಳ ಹುತಾತ್ಮ ಯೋಧರ ಪತ್ನಿಯರು ಭಾಗವಹಿಸಲಿದ್ದಾರೆ.

ವೀರ ನಾರಿಯರಿಗೆ ನೆರವು

ಯೋಧರು ಯುದ್ಧದಲ್ಲಿ ಸಾವನ್ನಪ್ಪಿದರೆ ಅವರ ಪತ್ನಿಯರು ಭಾವನಾತ್ಮಕವಾಗಿ, ಆರ್ಥಿಕವಾಗಿಯೂ ಕಂಗಲಾಗುತ್ತಾರೆ. ಕೆಲ ಮಹಿಳೆಯರಿಗೆ ಸರ್ಕಾರ ತಮಗೆ ನೀಡುವ ಸೌಲಭ್ಯಗಳನ್ನು ಪಡೆಯುವ ಕ್ರಮವೂ ತಿಳಿದಿರುವುದಿಲ್ಲ. ಅಂಥ ಮಹಿಳೆಯರಿಗೆ ಸರ್ಕಾರದ ಸೌಲಭ್ಯ ತಲುಪುವಂತೆ ಮಾಡಲು 'ವಸಂತರತ್ನ ಫೌಂಡೇಷನ್‌ ಫಾರ್‌ ಆರ್ಟ್‌' ಸಹಾಯ ಮಾಡುತ್ತದೆ.

ಇವರಿಗೆ ಕಂಪ್ಯೂಟರ್‌, ಇಂಗ್ಲಿಷ್‌ ಕಲಿಕೆ, ಕೌಶಲ ತರಬೇತಿ ನೀಡುವ ಮೂಲಕ ಅವರು ಸ್ವಾವಲಂಬಿಯಾಗುವಂತೆ ತರಬೇತಿ ನೀಡುತ್ತದೆ. ಹುತಾತ್ಮ ಯೋಧರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದರೊಂದಿಗೆ, ಹುತಾತ್ಮ ಯೋಧರ ಹೆಸರಿನಲ್ಲಿ ಅವರು ಕಲಿತ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ದತ್ತಿ ಪ್ರಶಸ್ತಿ ನೀಡಲಾಗುತ್ತದೆ. ನೊಂದವರಿಗೆ ಮನಃಶಾಸ್ತ್ರಜ್ಞರಿಂದ ಆಪ್ತ ಸಲಹೆ, ವಕೀಲರಿಂದ ಕಾನೂನು ಸಲಹೆಯನ್ನೂ ಸಂಸ್ಥೆ ಒದಗಿಸುತ್ತದೆ. ಈ ಸೇವೆಗಾಗಿ ಸುಬಾಷಿಣಿ ಅವರಿಗೆ ‘ನೀರಜಾ ಭಾನೋಟ್‌’ ಪ್ರಶಸ್ತಿ ದೊರೆತಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry