ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರಿಗೊಂದು ನ್ಯಾಯ?

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆಯ ಮೇಲುಕೋಟೆ ಪುರಾಣ–ಇತಿಹಾಸ ಪ್ರಸಿದ್ಧ ಯಾತ್ರಾ ಸ್ಥಳ. ಇಲ್ಲಿಯ ಚೆಲುವನಾರಾಯಣ ಹಾಗೂ ಯೋಗಾನರಸಿಂಹ ದೇಗುಲಗಳು ಪ್ರಮುಖವಾಗಿವೆ. 12ನೇ ಶತಮಾನದಲ್ಲಿ ಈ ಕ್ಷೇತ್ರವನ್ನು ಧಾರ್ಮಿಕ ಕರ್ಮ ಭೂಮಿಯನ್ನಾಗಿ ಮಾಡಿಕೊಂಡಿದ್ದ ರಾಮಾನುಜಾಚಾರ್ಯರು ಅಂದಿನ ಕಾಲದಲ್ಲೇ ದಲಿತರಿಗೂ ದೇವಾಲಯದೊಳಗೆ ಪ್ರವೇಶ ಅವಕಾಶ ಕಲ್ಪಿಸಿ ಸಮಾನತೆಯನ್ನು ಸಾರಿದ್ದರು.

ಇಲ್ಲಿಯ ದೇವಾಲಯಗಳಲ್ಲಿ ದೇವರ ಪೂಜೆ ಹಾಗೂ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ನಿಗದಿತ ಸಮಯ ಗೊತ್ತುಪಡಿಸಲಾಗಿದೆ. ಈಚೆಗೆ ಜಿಲ್ಲಾಧಿಕಾರಿ ಈ ನಿಯಮ ಉಲ್ಲಂಘಿಸಿ ಒಂದು ಗಂಟೆ ಮುಂಚಿತವಾಗಿ ದೇಗುಲದ ಬಾಗಿಲು ತೆರೆಯಿಸಿ ದರ್ಶನ ಪಡೆದರು ಎಂದು ವರದಿಯಾಗಿದೆ.

ಜಿಲ್ಲಾಧಿಕಾರಿಯ ಈ ನಡೆ ಸರಿಯೇ? ಮುಂದಿನ ದಿನಗಳಲ್ಲಿ ರಾಜಕಾರಣಿಗಳು, ಶಾಸಕರು, ಮಂತ್ರಿಗಳು ಅಥವಾ ಪ್ರಭಾವಿಗಳು ತಮಗೆ ಬೇಕಾದ ಸಮಯದಲ್ಲಿ ಬಾಗಿಲು ತೆರೆಯಿಸಿ ದೇವರ ದರ್ಶನ ಪಡೆಯಬಹುದಲ್ಲವೇ? ಹೀಗಾದರೆ ಸರ್ಕಾರಿ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಶ್ರೀಮಂತರಿಗೆ, ಸಾಮಾನ್ಯ ಜನರಿಗೆ ಬೇರೆ ಬೇರೆ ಸಮಯ ನಿಗದಿಮಾಡಿದರೂ ಅಚ್ಚರಿ ಇಲ್ಲ.

–ಸಿ. ಸಿದ್ದರಾಜು, ಆಲಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT