ವಿದೇಶಿ ಹೂಡಿಕೆ ಹೊರಹರಿವು ಸೂಚ್ಯಂಕ ಅಲ್ಪ ಇಳಿಕೆ

ಸೋಮವಾರ, ಜೂನ್ 17, 2019
25 °C

ವಿದೇಶಿ ಹೂಡಿಕೆ ಹೊರಹರಿವು ಸೂಚ್ಯಂಕ ಅಲ್ಪ ಇಳಿಕೆ

Published:
Updated:
ವಿದೇಶಿ ಹೂಡಿಕೆ ಹೊರಹರಿವು ಸೂಚ್ಯಂಕ ಅಲ್ಪ ಇಳಿಕೆ

ಮುಂಬೈ: ಸತತ ನಾಲ್ಕು ದಿನಗಳಿಂದ ಏರುಮುಖವಾಗಿದ್ದ ದೇಶದ ಷೇರುಪೇಟೆಗಳ ವಹಿವಾಟು ಗುರುವಾರ ಅಲ್ಪ ಇಳಿಕೆ ಕಂಡಿದೆ.

ವಿದೇಶಿ ಬಂಡವಾಳ ಹೊರಹರಿವು ಹೆಚ್ಚುತ್ತಿರುವುದು ಪೇಟೆಯಲ್ಲಿ ಕಳವಳ ಮೂಡಿಸಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್‌ಇ) 79 ಅಂಶ ಇಳಿಕೆ ಕಂಡು, 31,592 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 26 ಅಂಶ ಇಳಿಕೆಯಾಗಿ 9,888 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

‘ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಫಲಿತಾಂಶ ಋಣಾತ್ಮಕ ಮಟ್ಟದಲ್ಲಿರುವ ಆತಂಕ ವ್ಯಕ್ತವಾಗಿದೆ. ಹೀಗಿದ್ದರೂ ವಾಹನ ಮಾರಾಟದಲ್ಲಿ ಹೆಚ್ಚಳ, ಮೂಲಸೌಕರ್ಯ ವಲಯದ ಪ್ರಮುಖ 8 ಕೈಗಾರಿಕೆಗಳು ಎರಡನೇ ತಿಂಗಳಿನಲ್ಲಿಯೂ ಉತ್ತಮ ಸಾಧಿಸಿದೆ.ಇದು ಸೂಚ್ಯಂಕವನ್ನು ಹೆಚ್ಚು ಕುಸಿಯದಂತೆ ತಡೆದಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಶುಕ್ರವಾರ ಜಿಎಸ್‌ಟಿ ಮಂಡಳಿ ಕೈಗೊಳ್ಳುವ ನಿರ್ಧಾರಗಳೂ ಅಲ್ಪಾವಧಿಗೆ ಸೂಚ್ಯಂಕಗಳ ದಿಕ್ಕನ್ನು ನಿರ್ಧರಿಸಲಿವೆ. ಬುಧವಾರದ ವಹಿವಾಟಿನಲ್ಲಿ ದೇಶಿ ಸಾಂಸ್ಥಿಕ ಹೂಡಿಕೆದಾರರು ₹584.88 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹632.14 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಪವರ್‌ ಗ್ರಿಡ್‌ ಅತಿ ಹೆಚ್ಚು ಶೇ 1.99 ರಷ್ಟು ಇಳಿಕೆ ಕಂಡು ಪ್ರತಿ ಷೇರಿನ ಬೆಲೆ ₹204.85ಕ್ಕೆ ತಗ್ಗಿದೆ. ಅಂತೆಯೇ ಐಸಿಐಸಿಐ ಬ್ಯಾಂಕ್‌, ಬಜಾಜ್ ಆಟೊ, ಹೀರೊ ಮೋಟೊ ಕಾರ್ಪ್‌, ಎಚ್‌ಡಿಎಫ್‌ಸಿ ಮತ್ತು ಸನ್‌ ಫಾರ್ಮಾ ಷೇರುಗಳು ಇಳಿಕೆ ಕಂಡಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry