ಕಬಡ್ಡಿ: ಬುಲ್ಸ್‌ಗೆ ಗೆಲುವು

ಗುರುವಾರ , ಜೂನ್ 20, 2019
26 °C

ಕಬಡ್ಡಿ: ಬುಲ್ಸ್‌ಗೆ ಗೆಲುವು

Published:
Updated:
ಕಬಡ್ಡಿ: ಬುಲ್ಸ್‌ಗೆ ಗೆಲುವು

ಚೆನ್ನೈ: ನಾಯಕ ರೋಹಿತ್‌ ಕುಮಾರ್‌  ಅವರ ಅಪೂರ್ವ ಆಟದ ಬಲದಿಂದ ಬೆಂಗಳೂರು ಬುಲ್ಸ್‌ ತಂಡದವರು ಪ್ರೊ ಕಬಡ್ಡಿ ಲೀಗ್‌ ಐದನೇ ಆವೃತ್ತಿಯ ಪಂದ್ಯದಲ್ಲಿ ಗೆದ್ದಿದ್ದಾರೆ.

ಗುರುವಾರ ನಡೆದ ‘ಬಿ’ ಗುಂಪಿನ ಹೋರಾಟದಲ್ಲಿ ಬುಲ್ಸ್‌ ತಂಡ 43–35 ಪಾಯಿಂಟ್ಸ್‌ನಿಂದ ಆತಿಥೇಯ ತಮಿಳ್‌ ತಲೈವಾಸ್‌ ಸವಾಲನ್ನು ಮೀರಿ ನಿಂತಿತು.

ಲೀಗ್‌ನಲ್ಲಿ 13ನೇ ಸೋಲು ಕಂಡ ಅಜಯ್‌ ಠಾಕೂರ್‌ ಸಾರಥ್ಯದ ತಲೈವಾಸ್‌ ತಂಡ ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು.

ರೋಹಿತ್‌ ಅವರು ಅಮೋಘ ರೈಡ್‌ಗಳನ್ನು ಮಾಡಿದ ಕಾರಣ ಬುಲ್ಸ್‌ ತಂಡ ಆರಂಭದ ಎರಡು ನಿಮಿಷಗಳಲ್ಲೇ 3–1ರ ಮುನ್ನಡೆ ಗಳಿಸಿತು.

ಮೊದಲ ಆರು ನಿಮಿಷಗಳಲ್ಲಿ ಉಭಯ ತಂಡಗಳ ರೈಡರ್‌ಗಳು ಪಾರಮ್ಯ ಸಾಧಿಸಿದರು. ಈ ಅವಧಿಯಲ್ಲಿ 7–4ರಿಂದ ಮುಂದಿದ್ದ ಬುಲ್ಸ್‌ ಬಳಿಕವೂ ಪ್ರಾಬಲ್ಯ ಮೆರೆಯಿತು.

13ನೇ ನಿಮಿಷದಲ್ಲಿ ರೈಡಿಂಗ್‌ನಲ್ಲಿ ಎರಡು ಪಾಯಿಂಟ್ಸ್‌ ತಂದುಕೊಟ್ಟ ರೋಹಿತ್‌ ತಂಡದ ಮುನ್ನಡೆಯನ್ನು 12–7ಕ್ಕೆ ಹೆಚ್ಚಿಸಿದರು.

ಆ ನಂತರ ಬೆಂಗಳೂರಿನ ತಂಡ 27–10, 32–13 ಹೀಗೆ ಮುನ್ನಡೆ ಹೆಚ್ಚಿಸಿಕೊಂಡು ಸಾಗಿತು. 32ನೇ ನಿಮಿಷದಲ್ಲಿ ‘ಸೂಪರ್‌ ರೈಡ್‌‘ ಮಾಡಿದ ಅಜಯ್‌ ನಾಲ್ಕು ಪಾಯಿಂಟ್ಸ್‌ ಕಲೆಹಾಕಿ ಹಿನ್ನಡೆಯನ್ನು 21–38ಕ್ಕೆ ತಗ್ಗಿಸಿದರು. ಹೀಗಿದ್ದರೂ ತಂಡ ಸೋಲಿನಿಂದ ಪಾರಾಗಲಿಲ್ಲ. ರೈಡಿಂಗ್‌ ಮತ್ತು ರಕ್ಷಣಾ ವಿಭಾಗದಲ್ಲಿ ಮಿಂಚಿದ ಬುಲ್ಸ್‌ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry