ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಸಮುಚ್ಚಯಗಳಿಗೆ ನೋಟಿಸ್‌

Last Updated 5 ಅಕ್ಟೋಬರ್ 2017, 19:28 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ಕೆರೆಯಂಗಳದ 2 ಕಿ.ಮೀ ವಿಸ್ತೀರ್ಣದಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ (ಎಸ್‌ಟಿಪಿ) ಹೊಂದಿರದ ವಸತಿ ಸಮುಚ್ಚಯಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಎನ್‌ಪಿಡಿ (ಬೀಗ ಹಾಕುವ ಮುನ್ನ ಮಂಡಳಿ ನೀಡುವ ಅಂತಿಮ ನೋಟಿಸ್) ಜಾರಿ ಮಾಡಿದೆ.

‘ಕೆರೆಯ ಜಲಾನಯನ ಪ್ರದೇಶದಲ್ಲಿದ್ದ 152 ವಸತಿ ಸಮುಚ್ಚಯಗಳಿಗೆ ಈ ಹಿಂದೆಯೇ ನೋಟಿಸ್‌ ನೀಡಿದ್ದೆವು. ಈಗ 2 ಕಿ.ಮೀ ವಿಸ್ತೀರ್ಣದಲ್ಲಿನ ಕಟ್ಟಡಗಳಿಗೆ ಎನ್‌ಪಿಡಿ ನೀಡಿದ್ದೇವೆ’ ಎಂದು ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದರು.

‘ಎನ್‌ಪಿಡಿ ಜಾರಿಯಾದ ವಸತಿ ಸಮುಚ್ಚಯ ಮಾಲೀಕರ ವಿಚಾರಣೆಯನ್ನು ಮುಂದಿನ ಹಂತದಲ್ಲಿ ನಡೆಸುತ್ತೇವೆ. ಆಗ ಅವರಿಗೆ ಇರುವ ತೊಂದರೆ ಏನು, ಘಟಕ ಅಳವಡಿಸಲು ಎಷ್ಟು ಸಮಯ ಬೇಕಾಗುತ್ತದೆ, ಜಲಮಂಡಳಿ ಅನುಮತಿ ಹೇಗೆ ನೀಡಿದೆ ಎಂಬ ಬಗ್ಗೆ ಪರಿಶೀಲಿಸುತ್ತೇವೆ’ ಎಂದರು.

‘ನಮ್ಮ ನಿರ್ದೇಶನಗಳಿಗೆ ಕಟ್ಟಡ ಮಾಲೀಕರು ಸ್ಪಂದಿಸದಿದ್ದರೆ ಸಮುಚ್ಚಯದ ನೀರಿನ ಸಂಪರ್ಕ ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಳಿಸುತ್ತೇವೆ. ಎನ್‌ಪಿಡಿ ನೀಡಿದ 15 ದಿನಗಳ ನಂತರ ವಿಚಾರಣೆ ನಡೆಸಲಾಗುತ್ತದೆ’ ಎಂದು ಹೇಳಿದರು.

‘ಜಲಮೂಲದ ಸುತ್ತಮತ್ತಲಿನ ವಸತಿ ಸಮುಚ್ಚಯಗಳು ಕಡ್ಡಾಯವಾಗಿ ಎಸ್‌ಟಿಪಿಗಳನ್ನು ಸ್ಥಾಪಿಸಬೇಕೆಂಬ ಆದೇಶದಿಂದ ವಿನಾಯಿತಿ ನೀಡಬೇಕೆಂದು ಬೆಂಗಳೂರು ವಸತಿ ಸಮುಚ್ಚಯ ಒಕ್ಕೂಟ ನ್ಯಾಯ ಮಂಡಳಿಗೆ ಕೋರಿತ್ತು. ಆದರೆ, ಎನ್‌ಜಿಟಿ ಅದನ್ನು ನಿರಾಕರಿಸಿತು. ಇದರಿಂದ ನಮ್ಮ ಕೆಲಸಕ್ಕೆ ವೇಗ ಸಿಕ್ಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT