ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಕೆ ಸೀರೆಗೆ ಭಾರಿ ಬೇಡಿಕೆ

₹ 1.49 ಕೋಟಿ ಆದಾಯ
Last Updated 5 ಅಕ್ಟೋಬರ್ 2017, 20:06 IST
ಅಕ್ಷರ ಗಾತ್ರ

ಮೈಸೂರು: ಭಕ್ತಾದಿಗಳು ಹರಕೆ ಹಾಗೂ ಕಾಣಿಕೆಯಾಗಿ ಅರ್ಪಿಸುವ ಸೀರೆ ಮತ್ತು ಕುಪ್ಪಸದಿಂದಲೇ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲಕ್ಕೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ಆದಾಯ ಸಂಗ್ರಹವಾಗುತ್ತಿದೆ.

2016–17ನೇ ಸಾಲಿನಲ್ಲಿ ಹರಕೆಯಾಗಿ ಬಂದ ಸೀರೆಗಳ ಮಾರಾಟದಿಂದ ₹ 1.49 ಕೋಟಿ ಆದಾಯ ಬಂದಿದೆ. ಹಿಂದಿನ ಸಾಲಿನ ಆದಾಯಕ್ಕೆ ಹೋಲಿಸಿದರೆ ಈ ಬಾರಿ ₹ 49 ಲಕ್ಷ ಹೆಚ್ಚಳವಾಗಿದೆ.

‘ಹರಕೆಯಾಗಿ ಬರುವ ಸೀರೆಗಳಿಗೆ ಭಕ್ತರಿಂದ ಭಾರಿ ಬೇಡಿಕೆ ಬರುತ್ತಿದೆ. ಹಿಂದೆ ಸೀರೆಗಳನ್ನು ಹರಾಜು ಹಾಕುತ್ತಿದ್ದೆವು. ಎರಡು ವರ್ಷಗಳಿಂದ ದೇಗುಲದ ಆವರಣದಲ್ಲೇ ನಿತ್ಯ ಮಾರಾಟಕ್ಕೆ ಇಡುತ್ತಿದ್ದೇವೆ’ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದೆ ಸೀರೆಗಳಿಂದ ವರ್ಷಕ್ಕೆ ಕೇವಲ ₹ 40ರಿಂದ 50 ಲಕ್ಷ ಆದಾಯ ಬರುತ್ತಿತ್ತು. ಈಗ ಅದು ಕೋಟಿ ದಾಟಿದೆ. ಹರಕೆಯಾಗಿ ಬಂದ ಸೀರೆಗಳಿಗೆ ನಾವೇ ಬೆಲೆ ನಿಗದಿ ಮಾಡುತ್ತೇವೆ’ ಎಂದರು.

ಆದಾಯ ಹೆಚ್ಚಳ: ವಿವಿಧ ಮೂಲಗಳಿಂದ ದೇಗುಲಕ್ಕೆ ಬರುವ ಒಟ್ಟಾರೆ ಆದಾಯವೂ ಹೆಚ್ಚಿದೆ. 2016-17ನೇ ಸಾಲಿನಲ್ಲಿ ₹ 24.09 ಕೋಟಿ ಆದಾಯ ಬಂದಿದೆ. ಕಳೆದ ಬಾರಿಗಿಂತ ₹ 2 ಕೋಟಿ ಹೆಚ್ಚಳವಾಗಿದೆ.

ಪ್ರವೇಶ ಶುಲ್ಕ, ವಿದೇಶಗಳಿಂದ ಬರುವ ಕಾಣಿಕೆ, ಡಿಡಿ, ಮನಿ ಆರ್ಡರ್‌, ದೇಗುಲದ ವಿವಿಧ ಗುತ್ತಿಗೆ ಹಣ, ಲಡ್ಡುಪ್ರಸಾದ ಮಾರಾಟ, ಸೇವಾರ್ಥ, ವಿಶೇಷ ಪೂಜೆ, ದೇವತೆಗಳ ಮೆರವಣಿಗೆ ಸೇವೆ, ಅತಿಥಿಗೃಹ ಬಾಡಿಗೆ, ದಾಸೋಹ ಭವನ, ಇ–ಸೇವೆಗಳಿಂದ ಆದಾಯ ಸಂಗ್ರಹವಾಗುತ್ತಿದೆ.

ಆನ್‌ಲೈನ್‌ನಲ್ಲೇ ಟಿಕೆಟ್‌ ಪಡೆದು ದೇವಿ ದರ್ಶನ ಮಾಡಲೂ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಚಂಡಿಕಾ ಹೋಮಕ್ಕೆ ಸೇವಾ ದರ ಪಾವತಿಸಲು ಹಾಗೂ ದೇವಿಗೆ ಸೀರೆ ಅರ್ಪಿಸಲು ಆನ್‌ಲೈನ್‌ನಲ್ಲಿಯೇ ಅವಕಾಶ ಕಲ್ಪಿಸಲಾಗಿದೆ. ದೇಗುಲಕ್ಕೆ ಬರುವ ಆದಾಯದಿಂದಲೇ ಬೆಟ್ಟದಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಅಂಕಿ ಅಂಶ...1

ಹರಕೆ ಸೀರೆ ಹರಾಜು/ಮಾರಾಟದಿಂದ ದೇಗುಲಕ್ಕೆ ಆದಾಯ

ವರ್ಷ            ಆದಾಯ (₹ ಗಳಲ್ಲಿ)

2011–12   85.69 ಲಕ್ಷ

2012–13   55.42 ಲಕ್ಷ

2013–14   51.94 ಲಕ್ಷ

2014–15   47.53 ಲಕ್ಷ

2015–16   1 ಕೋಟಿ

2016–17   1.49 ಕೋಟಿ

******

ಅಂಕಿ ಅಂಶ...2

ವಿವಿಧ ಮೂಲಗಳಿಂದ ದೇಗುಲಕ್ಕೆ ಬಂದ ಒಟ್ಟು ಆದಾಯ

ವರ್ಷ          ಆದಾಯ (₹ ಕೋಟಿಗಳಲ್ಲಿ)

2014–15   18.33

2015–16   21.74

2016–17   24.09

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT