ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮರಾಜ್ಯದ ಕಲ್ಪನೆ ನೀಡಿದ ವಾಲ್ಮೀಕಿ’

Last Updated 6 ಅಕ್ಟೋಬರ್ 2017, 5:29 IST
ಅಕ್ಷರ ಗಾತ್ರ

ಬಳ್ಳಾರಿ: ‘ಮಹರ್ಷಿ ವಾಲ್ಮೀಕಿ ರಾಮಾಯಣವನ್ನು ರಚಿಸದೇ ಇದ್ದಿದ್ದರೆ ವಿಶ್ವಕ್ಕೆ ರಾಮರಾಜ್ಯದ ಪರಿಕಲ್ಪನೆಯೇ ದಕ್ಕುತ್ತಿರಲಿಲ್ಲ’ ಎಂದು ಪ್ರೊ.ವಿಠಲರಾವ್ ಟಿ.ಗಾಯಕವಾಡ್‌ ಪ್ರತಿಪಾದಿಸಿದರು. ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತವು ಗುರುವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ‘ರಾಮಾಯಣದಿಂದ ಪ್ರಭಾವಿತರಾಗಿದ್ದ ಮಹಾತ್ಮ ಗಾಂಧೀಜಿ ಅವರು ದೇಶದಲ್ಲಿ ರಾಮರಾಜ್ಯವನ್ನು ಅನುಷ್ಠಾನಕ್ಕೆ ತರುವ ಮಹತ್ವಾಕಾಂಕ್ಷೆ ಹೊಂದಿದ್ದರು. ಅವರು ಇಷ್ಟಪಡುತ್ತಿದ್ದ ಭಜನೆಗಳಲ್ಲಿ ರಾಮನ ಭಜನೆಯೂ ಇದ್ದುದು ವಿಶೇಷ’ ಎಂದರು.

‘ಆಡಳಿತದಲ್ಲಿ ನೈತಿಕ ಮೌಲ್ಯಗಳ ಮಹತ್ವವನ್ನು ವಾಲ್ಮೀಕಿ ರಾಮಾಯಣ ಕೃತಿಯ ಮೂಲಕ ಸಮರ್ಥವಾಗಿ ಮಂಡಿಸಿದರು. ರಾಜ ಮತ್ತು ಆಡಳಿತ, ರಾಜ ಮತ್ತು ಆತನ ಕುಟುಂಬದ ನಡುವೆ ನೈತಿಕ ಮೌಲ್ಯಗಳ ಸೇತುವೆ ಇರಲೇಬೇಕು ಎಂಬು ಸತ್ಯವನ್ನು ರಾಮಾಯಣದ ಪ್ರತಿ ಭಾಗವೂ ಸಾರುತ್ತದೆ’ ಎಂದರು.

ಸಂಸಾರದಲ್ಲಿ ನಿಷ್ಠೆ: ‘ಸಂಸಾರದಲ್ಲಿ ಪತಿ ಮತ್ತು ಪತ್ನಿಯ ನಡುವೆ ಪರಸ್ಪರ ನಿಷ್ಠೆ ಇರಬೇಕು ಎಂಬುದು ವಾಲ್ಮೀಕಿಯ ನಿಲುವಾಗಿತ್ತು. ರಾಮನ ದಾಂಪತ್ಯದ ಮೂಲಕ ಈ ನಿಷ್ಠೆಯನ್ನು ಪ್ರತಿಪಾದಿಸಿದರು. ಏಕಪತ್ನಿ ಮತ್ತು ಏಕಪತಿ ನಿಷ್ಠೆಯೇ ಕುಟುಂಬವನ್ನು ಕಾಯುವ ಏಕೈಕ ಮೌಲ್ಯ ಎಂಬುದು ರಾಮಾಯಣದ ಆಂತರ್ಯದಲ್ಲಿ ಒಡಮೂಡಿರುವ ಸತ್ಯ’ ಎಂದರು.

ಅರಿಯಲಿ: ಜಯಂತಿ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಿ.ಭಾರತಿ, ‘ವಾಲ್ಮೀಕಿಯ ಜೀವನತತ್ವಗಳನ್ನು ಇಂದಿನ ಯುವಜನ ಅರಿಯಬೇಕು. ರಾಮಾಯಣವನ್ನು ಓದಬೇಕು’ ಎಂದರು. ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೃಷ್ಣ, ‘ವಾಲ್ಮೀಕಿ ಜನಾಂಗದವರು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಯತ್ತ ಸಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಮೇಯರ್ ಜಿ.ವೆಂಕಟರಮಣ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್‌ ಉಮಾದೇವಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಸದಸ್ಯ ಅಲ್ಲಂ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌.ಚೇತನ್, ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕನ್ನಡ–ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸೈಯದ್‌ ಮನ್ಸೂರ್‌ ಬಾಷಾ, ವಾಲ್ಮೀಕಿ ಸಮುದಾಯದ ಮುಖಂಡರಾದ ಜಯರಾಂ, ಸದಾಶಿವಪ್ಪ, ಬಿ.ಸತ್ಯನಾರಾಯಣ, ರಾಜಪ್ಪ ವೇದಿಕೆಯಲ್ಲಿದ್ದರು.

ಪಾಲಿಕೆಯಲ್ಲಿ: ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ವಾಲ್ಮೀಕಿ ಚಿತ್ರಪಟಕ್ಕೆ ಮೇಯರ್ ಜಿ.ವೆಂಕಟರಮಣ ಹೂನಮನ ಸಲ್ಲಿಸಿದರು. ಆಯುಕ್ತ ಎಂ.ಕೆ.ನಲ್ವಡಿ, ಉಪಮೇಯರ್ ಉಮಾದೇವಿ, ಸದಸ್ಯರಾದ ಕುಮಾರಸ್ವಾಮಿ, ನಾಗಮ್ಮ, ಬೆಣಕಲ್ ಬಸವರಾಜ್, ಸೀತಾರಾಮ್, ಪಾಷಿಬ್, ಕೆರೆಕೊಡಪ್ಪ, ಐ.ದಿವ್ಯಾಕುಮಾರಿ, ಡಿ.ಸೂರಿ, ರಮೇಶ ಇದ್ದರು.

ಕದಸಂಸ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರಮುಖರು ನಗರದ ಎಸ್ಪಿ ವೃತ್ತದಲ್ಲಿರುವ ವಾಲ್ಮೀಕಿ ಪುತ್ಥಳಿಗೆ ಹೂನಮನ ಸಲ್ಲಿಸಿದರು. ರಾಜ್ಯ ಸಂಘಟನಾ ಸಂಚಾಲಕ ಮುಂಡ್ರಿಗಿ ನಾಗರಾಜ್, ಜಿಲ್ಲಾ ಸಂಚಾಲಕ ಎಸ್‌. ವಿಘ್ನೇಶ್‌, ಮುಖಂಡರಾದ ಗೋವರ್ಧನ್‌, ಎಚ್‌. ವೀರಭದ್ರಪ್ಪ, ರಾಜ, ನಟರಾಜಗೌಡ, ಗುರುದೇವ, ಸಣ್ಣಸೀನಾ, ಯರ್ರಿಸ್ವಾಮಿ, ಹೊನ್ನೂರುಸ್ವಾಮಿ, ಮಲ್ಲೇಶಿ, ಗಾಳೆಪ್ಪ ಉಪಸ್ಥಿತರಿದ್ದರು.

ಕನ್ನಡ ರಕ್ಷಣಾ ಯುವ ವೇದಿಕೆ: ವೇದಿಕೆಯು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಕಪ್ಪಗಲ್ಲು ಸಿ.ಮುನಿಸ್ವಾಮಿ ಮಾತನಾಡಿದರು. ಮುಖಂಡರಾದ ಕೋರಿಬಸವ, ಕೃಷ್ಣಾರೆಡ್ಡಿ, ಎಸ್‌.ಎಂ.ಶಿವಕುಮಾರಸ್ವಾಮಿ, ಈ.ಕೃಷ್ಣಪ್ಪ, ದಸ್ತಗೀರ್‌ ಸಾಬ್‌, ಬುಶ್ಯಪ್ಪ ಇದ್ದರು.

ಛಲವಾದಿ ಮಹಾಸಭಾ: ಛಲವಾದಿ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸಿ, ನರಸಪ್ಪ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಸಿ. ಶಿವಕುಮಾರ್, ಉಪಾಧ್ಯಕ್ಷರಾದ ಶ್ರೀನಿವಾಸ ಛಲವಾದಿ, ಟಿ. ಸುಂಕಪ್ಪ, ಎಂ. ಪಂಪಯ್ಯ, ಮುಖಂಡರಾದ ಸಿ.ಹನುಮೇಶಪ್ಪ, ಸಿ.ಶಂಕರ್, ಕೆ.ಶ್ರೀನಿವಾಸ, ನಾಗೇಂದ್ರ, ಬಿ.ವೈ. ಗೋವಿಂದ, ರಂಗನಾಥ, ಗೂಳೆಪ್ಪ, ಜಂಬಯ್ಯ, ಡಿ. ವಸಂತ, ರಂಗಯ್ಯ, ಕುಮಾರ್, ನಾಗರಾಜು ಪಾಲ್ಗೊಂಡಿದ್ದರು.

ಜೆಡಿಎಸ್‌: ನಗರದಲ್ಲಿರುವ ಜೆಡಿಎಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಕೋರ್‌ ಕಮಿಟಿ ಸದಸ್ಯ ಮೀನಹಳ್ಳಿ ತಾಯಣ್ಣ ಮತ್ತು ಯುವ ಘಟಕದ ಅಧ್ಯಕ್ಷ ವೈ. ಗೋಪಾಲ ಮಾತನಾಡಿದರು. ಮುಖಂಡರಾದ ಶಾಂತಕುಮಾರ್, ಹೊನ್ನೂರಸ್ವಾಮಿ, ಡಾ.ವೈ. ಗೌಸಿಯ ಬೀ, ಶಿವಕುಮಾರಿ, ರಾಮೇಶ್ವರಿ, ರಾಜೇಶ್ವರಿ, ಜೆ. ಪುಷ್ಪ, ಜ್ಯೋತಿ, ಪಂಪಾಪತಿ, ಗಾಂದಿಲಿಂಗಪ್ಪ, ಡಿ.ವಿಜಯಕುಮಾರ್, ಶ್ರೀನಿವಾಸ್ ಕ್ಯಾಂಪ್, ವಾದಿರಾಜಶೆಟ್ಟಿ, ವೈ. ಯಲ್ಲನಗೌಡ, ಎಮ್. ವಿಜಯಕುಮಾರ ಗೌಡ, ಮುಕ್ಕಣ್ಣ, ಎಲೀಷ ವೇದನಾಯಕಂ, ಎಸ್.ಎಂ. ಮಹಮ್ಮದ್ ರಫೀಕ್, ಎಂ.ಡಿ. ರಫೀಕ್, ಪರುಶುರಾಮ, ನಾಗರಾಜ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT