ಸೋಮವಾರ, ಸೆಪ್ಟೆಂಬರ್ 16, 2019
22 °C

ಜಿಲ್ಲೆಯಲ್ಲಿ ಜಲಮರುಪೂರಣದ ಮೊದಲ ಪರ್ವ

Published:
Updated:
ಜಿಲ್ಲೆಯಲ್ಲಿ ಜಲಮರುಪೂರಣದ ಮೊದಲ ಪರ್ವ

ಮಂಗಳೂರು: ಕಳೆದ ಬೇಸಿಗೆಯಲ್ಲಿ ಬೆಂದು ಕಂಗಾಲಾದ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ನೀರನ್ನು ರಕ್ಷಿಸುವ ವಿಧಾನಗಳತ್ತ ಮುಖಮಾಡಿದ್ದಾರೆ. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಜಲಮರುಪೂರಣಕ್ಕೆ ಸಂಬಂಧಿಸಿ ಸಮ ರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ.

ಲೋಕಶಿಕ್ಷಣ ಇಲಾಖೆ ವತಿಯಿಂದ ಜಾರಿಗೊಳಿಸಲು ಉದ್ದೇಶಿಸಿರುವ ಜಲ ಸಾಕ್ಷರತಾ ಆಂದೋಲನಕ್ಕೆ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳು ಉತ್ತ ಮವಾಗಿ ಸ್ಪಂದಿಸಿವೆ. ಅನುದಾನವನ್ನು ನಿರೀಕ್ಷಿಸದೇ ಮಳೆನೀರನ್ನು ಕೈಲಾದಷ್ಟು ಮಟ್ಟಿಗೆ ಹಿಡಿದು ನಿಲ್ಲಿಸುವ ಪ್ರಯತ್ನಗಳು ನಡೆದಿವೆ.

ನರಿಂಗಾನ ಗ್ರಾಮ ಪಂಚಾಯಿತಿಯ ಪ್ರೇರಕಿ ಹರಿಣಾಕ್ಷಿ ನರಿಂಗಾನ ಹೇಳುವ ಪ್ರಕಾರ, ‘ಜನರು ನೀರನ್ನು ಉಳಿಸಿ ಕೊಳ್ಳಲು ಯಾವುದೇ ಕೆಲಸ ಮಾಡಲು ಸಿದ್ಧರಿದ್ದಾರೆ. ಸುಮಾರು 30 ಮನೆಗಳಿಗೆ ಮಳೆನೀರು ಹಿಡಿದಿಡುವ ಮಾಹಿತಿ ಕೊಟ್ಟಿದ್ದೇನೆ. ಆದರೆ ಈ ಮಾಹಿತಿ ಕೊಟ್ಟಿದ್ದೇ ತಡವಾಯಿತೇನೋ ಅನಿಸು ತ್ತದೆ. ಬೇಸಿಗೆಯಲ್ಲಿಯೇ ಜನರನ್ನು ಸಜ್ಜುಗೊಳಿಸಿದ್ದರೆ ಒಳ್ಳೆಯದಿತ್ತು. ಜನರಿಗೆ ಮಾಹಿತಿ ನೀಡಿದ್ದೇ ಜುಲೈ ಅಂತ್ಯವಾದ್ದರಿಂದ ಬಳಿಕ ಮಳೆಯೂ ಸರಿಯಾಗಿ ಬರಲಿಲ್ಲ’.

‘ಎರಡು ಮನೆಗಳಲ್ಲಿ, ಚಾವಣಿಯ ನೀರನ್ನು ಹಂಡೆಯೊಂದಕ್ಕೆ ಪೈಪ್‌ ಮೂಲಕ ತುಂಬಿಸುವ ವ್ಯವಸ್ಥೆ ಮಾಡಲಾಗಿದೆ. ಈ ಹಂಡೆಯ ತಳಕ್ಕೆ ಜಲ್ಲಿ, ಹೊಯ್ಗೆ, ಇದ್ದಿಲು ಹಾಕಿ ಶುದ್ಧಮಾಡಿ, ಹಂಡೆಯ ತಳಕ್ಕೆ ತೂತು ಕೊರೆದು ಪೈಪ್‌ಮೂಲಕ ಬಾವಿಗೆ ಬಿಡುವುದರಿಂದ ಬಾವಿ ಒಸರು ಬೇಗ ಇಂಗುವುದಿಲ್ಲ. ಹೆಚ್ಚು ಖರ್ಚಿಲ್ಲದ ಈ ವಿಧಾನದ ಬಗ್ಗೆ ನರಿಂಗಾನದ ಜನತೆ ಉತ್ಸಾಹ ವ್ಯಕ್ತಪಡಿಸಿದ್ದು , ಮುಂದಿನ ಮಳೆಗಾಲದ ಒಂದು ಹನಿ ನೀರೂ ಹರಿದು ಹೋಗದಂತೆ ಮಾಡ ಲಾಗುವುದು’ ಎಂಬುದು ಅವರ ಅಭಿಪ್ರಾಯ.

ಕರೋಪಾಡಿ ಗ್ರಾಮದ ಗ್ರಾಮವಿ ಕಾಸ ಪ್ರೇರಕಿ ಭಾರತಿ ಕರೋಪಾಡಿ ಕೂಡ ಈ ಮಾತನ್ನೇ ಹೇಳುತ್ತಾರೆ. ‘ಊರಿನಲ್ಲಿ ಆರು ಮನೆಗಳ ಕೃಷಿ ಜಮೀನಿನ ತೋಡಿನಲ್ಲಿ ಹರಿದು ಹೋಗುವ ನೀರನ್ನು ನಿಲ್ಲಿಸುವ ನಿಟ್ಟಿ ನಲ್ಲಿ ಕಟ್ಟ ಹಾಕಲಾಗಿದೆ. ಈ ವರ್ಷ ಹೆಚ್ಚಿನವರಿಗೆ ಮಾಹಿತಿ ನೀಡಿದ್ದು, ಮಳೆ ಕಡಿಮೆಯಾದ್ದರಿಂದ ಹೆಚ್ಚು ಕಟ್ಟ ಕಟ್ಟುವುದು ಸಾಧ್ಯವಾಗಲಿಲ್ಲ.

ಮುಂದಿನ ವರ್ಷ ಜನರು ಮಳೆಗಾಲಕ್ಕೆ ಮುನ್ನವೇ ನೀರನ್ನು ಹಿಡಿದಿಡಲು ಸಜ್ಜಾಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಖಾಸಗಿ ಜಮೀನಿನಲ್ಲಿ ಸ್ವ ಇಚ್ಛೆಯಿಂದ ಕಟ್ಟ ಕಟ್ಟಲು ಮುಂದಾದರೆ, ಸರ್ಕಾರಿ ಜಮೀನಲ್ಲಿ ಅಥವಾ ನಾಲ್ಕೈದು ಮನೆ ಗಳು ಒಟ್ಟಾಗಿ ದೊಡ್ಡ ಕಟ್ಟ ನಿರ್ಮಿಸಲು ಸರ್ಕಾರದ ನೆರವು ದೊರೆತರೆ ಒಳ್ಳೆಯದು’ ಎನ್ನುತ್ತಾರೆ ಅವರು.

ಲೋಕಶಿಕ್ಷಣ ಇಲಾಖೆ ವತಿಯಿಂದ ನಡೆಯುವ ಈ ಯೋಜನೆಯ ಉಸ್ತುವಾ ರಿಯನ್ನು ವಯಸ್ಕರ ಶಿಕ್ಷಣಾಧಿಕಾರಿ ಕೆ. ಸುಧಾಕರ್‌ ವಹಿಸಿಕೊಂಡಿದ್ದಾರೆ. ಪ್ರತಿ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿ ಕಾರಿ ಹಾಗೂ ಗ್ರಾಮ ವಿಕಾಸ ಪ್ರೇರಕರಿಗೆ ಮಾಹಿತಿ ನೀಡಲಾಗಿದೆ. ಗ್ರಾಮಗಳಲ್ಲಿ ಜಲ ಸಾಕ್ಷರತಾ ಸಮಿತಿಗಳನ್ನು ರಚಿಸಿ ಮಾಹಿತಿ ಪಸರುವ ಕೆಲಸ ನಡೆಯುತ್ತಿದೆ.

ಜಲ ಮರುಪೂರಣಕ್ಕೆ ಅವಕಾಶ: ಕೊಳವೆಬಾವಿಗೆ ಜೀವ ಇರ್ವತ್ತೂರಿನಲ್ಲಿ ಕೊಳವೆ ಬಾವಿ ಸುತ್ತ ಗುಂಡಿ ತೋಡಿ ಜಲ ಮರುಪೂರಣಕ್ಕೆ ಅವಕಾಶ ಮಾಡಲಾಗಿದೆ. ಇರ್ವತ್ತೂರಿನಲ್ಲಿ ಎರಡು, ಮೂರುಪಡುಕೋಡಿ ಪ್ರಾಥಮಿಕ ಶಾಲೆಯಲ್ಲೊಂದು ಹಾಗೂ ಮನೆಯೊಂದರಲ್ಲಿ ಈ ರೀತಿ ಕೊಳವೆಬಾವಿಗೆ ಜೀವ ತುಂಬುವ ಪ್ರಯತ್ನ ನಡೆದಿದೆ. ಮುಂದಿನ ಬೇಸಿ ಗೆಯಲ್ಲಿ ಹೆಚ್ಚು ನೀರು ದೊರೆತೀತೇನೋ ಕಾದು ನೋಡಬೇಕು ಎನ್ನುತ್ತಾರೆ ಇರ್ವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರೇರಕರಾಗಿ ಕೆಲಸ ಮಾಡುವ ಅಬ್ದುಲ್‌ ರಹಿಮಾನ್‌.

Post Comments (+)