ಭ್ರಮರಾಂಬ ದೇವಿ ಅದ್ಧೂರಿ ಜಂಬೂ ಸವಾರಿ

ಮಂಗಳವಾರ, ಜೂನ್ 18, 2019
31 °C

ಭ್ರಮರಾಂಬ ದೇವಿ ಅದ್ಧೂರಿ ಜಂಬೂ ಸವಾರಿ

Published:
Updated:

ಮಸ್ಕಿ: ನವರಾತ್ರಿ ಅಂಗವಾಗಿ ಭ್ರಮರಾಂಬ ದೇವಿಯ ಜಂಬೂ ಸವಾರಿ ಮತ್ತು ಮಹಿಳೆಯರಿಂದ ಕುಂಭ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಅದ್ಧೂರಿಯಾಗಿ ನಡೆಯಿತು. ಬೆಳಿಗ್ಗೆ ಗಂಗಾಸ್ಥಳದಲ್ಲಿ ಗಂಗೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕುಂಭ ಹಾಗೂ ಜಂಬೂ ಸವಾರಿ ಮೆರವಣಿಗೆಗೆ ಅಶೋಕ ವೃತ್ತದಲ್ಲಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ ಮೆರವಣಿಗೆಗೆ ಚಾಲನೆ ನೀಡಿದರು.

ಸಂಡೂರಿನ ಚಂದ್ರಶೇಖರಯ್ಯ ಸ್ವಾಮಿ ವೀರಭದ್ರ ಕುಣಿತ, ಜಮಖಂಡಿಯ ಮಹಾಂತೇಶ ಅವರ ಕರಡಿ ಮಜಲು, ಸಿಂಧನೂರಿನ ಬಸವರಾಜ ನೇತೃತ್ವದ ಮಹಿಳಾ ವೀರಗಾಸೆ ತಂಡ, ರಾಂಪೂರದ ಚಿದಾನಂದಪ್ಪ ಅವರ ಪುರವಂತಿಕೆ ಸೇವೆ, ಹಸಮಕಲ್‌ ಅಮರೇಶ ತಂಡದ ಹಗಲು ವೇಷಗಾರರ ತಂಡ, ಮಸ್ಕಿಯ ಅಮರ ಪ್ರೇಮ ಸಂಸ್ಥೆಯ ಸಿಂಗಾರಿ ಮೇಳ, ಡೊಳ್ಳು ಕುಣಿತ ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ಅಶೋಕ ವೃತ್ತ, ಅಗಸಿ, ಮುಖ್ಯಬಜಾರ, ತೇರ ಬಜಾರ, ಕನಕವೃತ್ತದ ಮೂಲಕ ಸಾಗಿದ ಮೆರವಣಿಗೆ ಭ್ರಮರಾಂಬ ದೇವಸ್ಥಾನ ತಲುಪಿತು. ಮೆರವಣಿಗೆಯುದ್ದಕ್ಕೂ ಭಕ್ತರು ಭ್ರಮರಾಂಬದೇವಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕುಂಭ ಹೊತ್ತ ಮಹಿಳೆಯರಿಗೆ ಹಾಗೂ ಜಾನಪದ ಕಲಾ ತಂಡಗಳಿಗೆ ಗ್ರಾಮಸ್ಥರು ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.

ಗಂಗಾ ಸ್ಥಳದಿಂದ ಸಾವಿರಾರು ಕುಂಭಗಳಲ್ಲಿ ತರಲಾಗಿದ್ದ ಗಂಗಾ ಜಲದಿಂದ ಭ್ರಮರಾಂಬ ದೇವಿಯ ವಿಗ್ರಹಕ್ಕೆ ಅಭಿಷೇಕ ಮಾಡಲಾಯಿತು. ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. 15 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ರಾಯಚೂರು ಜಿಲ್ಲೆ ಸೇರಿದಂತೆ ಸುತ್ತಮುತ್ತ ತಾಲ್ಲೂಕುಗಳ ಭಕ್ತರು ಭಾಗವಹಿಸಿದ್ದರು.

ಉಪಾಧ್ಯಕ್ಷ ರವಿಕುಮಾರ ಪಾಟೀಲ, ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ಜಿ. ಸತ್ಯನಾರಾಯಣ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಉಪ್ಪಾರ, ಕೆ.ವೀರನಗೌಡ, ಮಹಾದೇವಪ್ಪಗೌಡ ಪೊಲೀಸ್‌ ಪಾಟೀಲ, ಪ್ರಸನ್ನ ಪಾಟೀಲ, ಮಂಜುನಾಥ ಪಾಟೀಲ, ಡಾ. ಶಿವಶರಣಪ್ಪ ಇತ್ಲಿ, ಡಾ. ಬಿ.ಎಚ್. ದಿವಟರ್ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry