ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕ ಕಳೆದರೂ ಪೂರ್ಣವಾಗದ ಬಿಇಓ ಕಚೇರಿ ಕಟ್ಟಡ ನಿರ್ಮಾಣ

Last Updated 6 ಅಕ್ಟೋಬರ್ 2017, 8:35 IST
ಅಕ್ಷರ ಗಾತ್ರ

ತುಮಕೂರು: ಶಿಕ್ಷಣ ಇಲಾಖೆಗೆ ಸರ್ಕಾರವು ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದ್ದರೂ ಸಹ ಕಟ್ಟಡ ಸೇರಿದಂತೆ ಮೂಲ ಸೌಕರ್ಯಗಳಿಲ್ಲದೇ ಇಲಾಖೆ ಕೆಲಸ ಕಾರ್ಯಗಳು ಕುಟುಂತ ಸಾಗಿವೆ. ಇಂತಹ ಸಮಸ್ಯೆಗಳ ಸಾಲಿಗೆ ತುಮಕೂರು ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಟ್ಟಡ ಸಮಸ್ಯೆಯೂ ಒಂದಾಗಿದೆ.

ಸರ್ಕಾರವು 2006ರಲ್ಲಿಯೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದರೂ ಈವರೆಗೂ ಕಟ್ಟಡ ನಿರ್ಮಾಣ ಪೂರ್ಣಗೊಂಡಿಲ್ಲ. ಕಟ್ಟಡ ನಿರ್ಮಾಣ ಕಾಮಗಾರಿ ಅರೆಬರೆಯಾಗಿ ನಿಂತಿದೆ.

ಆರಂಭದಲ್ಲಿ ₹ 3 ಲಕ್ಷ ಅನುದಾನ ನೀಡಿ ಕಾಮಗಾರಿ ಪ್ರಾರಂಭಿಸಲು ನಿರ್ಮಿತಿ ಕೇಂದ್ರಕ್ಕೆ ವಹಿಸಿ ಕೊಡಲಾಗಿತ್ತು. ₹ 65 ಲಕ್ಷ ಅಂದಾಜು ಮೊತ್ತದೊಂದಿಗೆ ಕಾಮಗಾರಿ ಪ್ರಾರಂಭಗೊಂಡರೂ ಅನುದಾನ ಕೊರತೆಯಿಂದ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ. 2012ರವರೆಗೆ ನಿರ್ಮಿತಿ ಕೇಂದ್ರಕ್ಕೆ  ₹ 50 ಲಕ್ಷ ಬಿಡುಗಡೆಯಾಗಿದೆ.

ನಂತರ ಅನುದಾನದ ಕೊರತೆ ಕಾರಣ ಕಟ್ಟಡ ಕಾಮಗಾರಿ ನಿಲ್ಲಿಸಲಾಗಿದೆ. ಕಟ್ಟಡವನ್ನು ಚಾವಣಿ ಹಂತದವರೆಗೆ ಪೂರ್ಣ ಮಾಡಲಾಗಿದೆ. ಕಾಲ ಕಾಲಕ್ಕೆ ಅನುದಾನ ಬಿಡುಗಡೆ ಮಾಡದೇ ಇದ್ದುದರಿಂದ ಈಗ ಅಂದಾಜು ಮೊತ್ತವು ಇತ್ತೀಚಿನ ದರಪಟ್ಟಿಯಂತೆ ₹ 1.7 ಕೋಟಿಗೆ ತಲುಪಿದೆ.

ಹೆಚ್ಚಿನ ಅನುದಾನ ಕೋರಿ ಇಲಾಖೆ ಉನ್ನತ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬೇಗ ಬಿಡುಗಡೆಯಾಗುವ ಸಾಧ್ಯತೆ ಇದೆ. ಅನುದಾನ ಬಂದ ಬಳಿಕ ಆದಷ್ಟು ಬೇಗ ಕಟ್ಟಡ ಪೂರ್ಣಗೊಳಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ ಅಂಶಗಳು
ಬಿಡುಗಡೆಯಾದ ಅನುದಾನ ಮೊತ್ತ
2006ರ ಡಿಸೆಂಬರ್‌ನಲ್ಲಿ ₹ 9 ಲಕ್ಷ
2011ರ ಮಾರ್ಚ್‌ನಲ್ಲಿ ₹15 ಲಕ್ಷ
2011ರ ಸೆಪ್ಟೆಂಬರ್‌ನಲ್ಲಿ ₹ 10 ಲಕ್ಷ
2012 ನವೆಂಬರ್‌ನಲ್ಲಿ ₹ 16 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT