ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಶ್ರೀಮಂತಿಕೆಯ ಉದ್ಧಾಮ: ಮೊಯಿಲಿ

Last Updated 6 ಅಕ್ಟೋಬರ್ 2017, 8:43 IST
ಅಕ್ಷರ ಗಾತ್ರ

ಹೆಬ್ರಿ: ಸಮಾಜದ ಸಮಷ್ಠಿಯ ಅಭಿವೃ ದ್ಧಿಗೆ ಪ್ರಸನ್ನ ಬಲ್ಲಾಳ್ ದೊಡ್ಡ ಕೊಡುಗೆ ನೀಡಿದ್ದಾರೆ. ಹೆಬ್ರಿಯ ಸಮಗ್ರ ಅಭಿವೃ ದ್ಧಿಗೆ ಅವರು ನೀಡುತ್ತಿದ್ದ ಸಲಹೆಯನ್ನು ಮನ್ನಿಸಿ ಅಭಿವೃದ್ಧಿ ಮಾಡಲಾಗಿದೆ. ಅವರಿಲ್ಲದ ಹೆಬ್ರಿಯನ್ನು ಎಣಿಸಲು ಸಾಧ್ಯವಿಲ್ಲ. ಅವರೊಬ್ಬ ಹೃದಯ ಶ್ರೀಮಂತಿಕೆಯ ಉದ್ಧಾಮ ಎಂದು ಸಂಸದ ಡಾ.ಎಂ.ವೀರಪ್ಪ ಮೊಯಿಲಿ ಭಾವುಕರಾಗಿ ನುಡಿದರು.

ಹೆಬ್ರಿಯ ಶೀಲಾ ಸುಭೋದ್ ಬಲ್ಲಾಳ್ ಬಂಟರ ಭವನದಲ್ಲಿ ಗುರುವಾರ ನಡೆದ ಪ್ರಸನ್ನ ಬಲ್ಲಾಳ್ ಶ್ರದ್ಧಾಂ ಜಲಿ ಸಭೆಯಲ್ಲಿ ಸಂಸದ ಡಾ.ಎಂ. ವೀರಪ್ಪ ಮೊಯಿಲಿ ಮಾತನಾಡಿದರು. ಹೆಬ್ರಿ ತಾಲ್ಲೂಕು ಆಗಬೇಕು ಎಂದು ಬಲ್ಲಾಳರು ಕನಸು ಕಂಡಿದ್ದರು. ಊರಿನ ಕಣ್ಮಣಿಯಾಗಿ ದಿವ್ಯಜ್ಯೋತಿಯಾಗಿದ್ದರು. ನನ್ನ ಕುಟುಂಬಕ್ಕೂ ಬಲ್ಲಾಳ್ ಅಗಲಿಕೆ ದೊಡ್ಡ ನಷ್ಟ ಎಂದರು. ನನ್ನ ಬದುಕಿನಲ್ಲಿ ಇಂತಹ ಸಜ್ಜನ ಪರಿಪೂರ್ಣ ವ್ಯಕ್ವಿತ್ವದ ವ್ಯಕ್ತಿಯನ್ನೇ ಕಂಡಿಲ್ಲ ಎಂದು ಮೊಯಿಲಿ ಹೇಳಿದರು.

ಪ್ರಸನ್ನ ಬಲ್ಲಾಳ್ ಕುಟುಂಬಸ್ಥರು, ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಸೇರಿ ಸಾವಿರಾರು ಜನ ಪುಷ್ಪ ನಮನ ಸಲ್ಲಿಸಿದರು.
ಚೈತನ್ಯ ಯುವ ವೃಂದದ ಎಚ್. ಜನಾರ್ದನ್, ಬಲ್ಲಾಳರ ಗುರುಗಳಾದ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ರಘುರಾಮ ಸೋಮಯಾಜಿ, ಯಳ ಗೋಳಿ ಟಿ. ಭೋಜ ಶೆಟ್ಟಿ, ಜೇಸಿಐನ ಹರಿದಾಸ ಬಿ.ಸಿ.ರಾವ್ ಶಿವಪುರ, ಹೆಬ್ರಿ ಅಜೆಕಾರು ಬಂಟರ ಸಂಘದ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯಕ್, ಶಾರದೋತ್ಸವ ಸಮಿತಿಯ ಟಿ.ಜಿ. ಆಚಾರ್ಯ, ಬಲ್ಲಾಳ್ ಆಪ್ತರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್. ಗೋಪಾಲ ಭಂಡಾರಿ ನುಡಿನಮನ ಸಲ್ಲಿಸಿದರು.

ಅರಣ್ಯ ಸಚಿವ ರಮನಾಥ ರೈ, ಶಾಸಕ ಅಭಯಚಂದ್ರ ಜೈನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಮಂಜುನಾಥ ಭಂಡಾರಿ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಸೀತಾನದಿ ವಿಠ್ಠಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT