‘ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ’

ಶನಿವಾರ, ಮೇ 25, 2019
33 °C

‘ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ’

Published:
Updated:
‘ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ’

ಸುರಪುರ: ‘ಮುಂಗಾರು ಬೆಳೆ ವಿಫಲವಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ನೆರವಿಗೆ ಬರಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಣ್ಣ ಹಾಲಭಾವಿ ಒತ್ತಾಸಿದರು.

ತಾಲ್ಲೂಕಿನ ತಿಪನಟಗಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ‘ಕಳೆದ ಮೂರು ವರ್ಷಗಳಿಂದ ಸತತ ಬರಗಾಲವಿದ್ದು, ಇದರಿಂದ ರೈತರು ತತ್ತರಿಸಿಹೋಗಿದ್ದಾರೆ. ಬೆಳೆದಿರುವ ಅಲ್ಪ ಸ್ವಲ್ಪ ಬೇಳೆಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೇಲೆ ಸಿಗುತ್ತಿಲ್ಲ. ಹೀಗಾಗಿ ಮಾಡಿದ ಸಾಲ ತೀರಿಸಲಾಗದೆ ರೈತರು ಅಸಹಾಯಕ ಸ್ಥಿತಿಯಲ್ಲಿದ್ದಾರೆ’ ಎಂದರು.

‘ರೈತರ ಶೋಷಣೆ ಪ್ರತಿ ಹಂತದಲ್ಲಿ ನಡೆಯುತ್ತಿದೆ. ಸಕಾಲಕ್ಕೆ ಬೀಜ ಗೋಬ್ಬರ ಸಿಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷದಿಂದ ಸರ್ಕಾರದ ಯೋಜನೆಗಳು ಸರ್ಮಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಂದ ರೈತರು ಕೃಷಿಯನ್ನೆ ಕೈ ಬಿಡುವ ಹಂತದಲ್ಲಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ ರೈತರಿಗೆ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸಿದರು.

ಪ್ರಮುಖರಾದ ಮಹಾದೇವಿ ಬೇವಿನಾಳಮಠ, ಹಣಮಂತ್ರಾಯ ಮಡಿವಾಳ, ಮುದ್ದಣ್ಣ ಅಮ್ಮಾಪುರ, ದೇವಿಂದ್ರಪ್ಪಗೌಡ ಪೋಲೀಸಪಾಟೀಲ, ಭೀಮರಾಯ ಒಕ್ಕಲಿಗ, ಸಂಜನಾಗೌಡ, ಶಿವಲಿಂಗಯ್ಯ ಸ್ವಾಮಿ ಇದ್ದರು. ತಿಪ್ಪನಟಗಿ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ದೇವಿಂದ್ರಪ್ಪ ಹವಾಲ್ದಾರ (ಗೌರವಾಧ್ಯಕ್ಷ), ಹಣಮಂತ್ರಾಯ ದೇಸಾಯಿ (ಅಧ್ಯಕ್ಷ), ಭೀಮರಾಯ ಹೊಟ್ಟಿ, ಭೀಮಣ್ಣ ಜಡಬಿ, ಹಣಮಂತ್ರಾಯ ಭೋವಿ (ಉಪಾಧ್ಯಕ್ಷರು), ದಂಡಪ್ಪ ಜಡಬಿ (ಪ್ರಧಾನ ಕಾರ್ಯದರ್ಶಿ), ಬಸವರಾಜ ಬೋವಿ, ಯಂಕಪ್ಪ ಸುರಪುರ (ಸಹ ಕಾರ್ಯದರ್ಶಿಗಳು), ಭೀಮಣ್ಣ ದೇಸಾಯಿ (ಸಂಚಾಲಕ), ಭೀಮಣ್ಣ ಜಡಬಿ (ಖಜಾಂಚಿ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry