ಗೋವಾ ಕಡಲ ತೀರದಲ್ಲಿ ಸಮಂತಾ- ಅಕ್ಕಿನೇನಿ ನಾಗಚೈತನ್ಯ ಮದುವೆಗೆ ಸಕಲ ಸಿದ್ಧತೆ

ಭಾನುವಾರ, ಜೂನ್ 16, 2019
32 °C

ಗೋವಾ ಕಡಲ ತೀರದಲ್ಲಿ ಸಮಂತಾ- ಅಕ್ಕಿನೇನಿ ನಾಗಚೈತನ್ಯ ಮದುವೆಗೆ ಸಕಲ ಸಿದ್ಧತೆ

Published:
Updated:
ಗೋವಾ ಕಡಲ ತೀರದಲ್ಲಿ ಸಮಂತಾ- ಅಕ್ಕಿನೇನಿ ನಾಗಚೈತನ್ಯ ಮದುವೆಗೆ ಸಕಲ ಸಿದ್ಧತೆ

ಗೋವಾ: ಟಾಲಿವುಡ್‌ನ ನಾಗ ಚೈತನ್ಯ– ಸಮಂತಾ ಜೋಡಿ ಶನಿವಾರ ಸಪ್ತಪದಿ ತುಳಿಯಲಿದ್ದು, ಶುಕ್ರವಾರ ಹಿಂದೂ ಸಂಪ್ರದಾಯದಂತೆ ಮೆಹಂದಿ ಕಾರ್ಯಕ್ರಮ ಅದ್ಧೂರಿಯಾಗಿ ನೇರವೇರಲಿದೆ.

ಗೋವಾದ ಖಾಸಗಿ ಹೋಟೆಲ್‌ವೊಂದರಲ್ಲಿ ಎರಡು ದಿನ ಕಾಲ ನಡೆಯಲಿರುವ ವಿವಾಹ ಸಮಾರಂಭದಲ್ಲಿ ಸ್ನೇಹಿತರು ಹಾಗೂ ಕುಟುಂಬದ ಆಪ್ತರು ಭಾಗವಹಿಸಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

*

ಈ ಜೋಡಿ 2010ರಲ್ಲಿ ತೆರೆಕಂಡ ‘ಏ ಮಾಯೆ ಚೆಸಾವೆ’, ‘ಆಟೋನಗರ್‌ ಸೂರ್ಯ’, ‘ಮನಂ’ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಸಮಂತಾ ಹಾಗೂ ನಾಗಚೈತನ್ಯ ನಡುವೆ ಪ್ರೇಮಾಂಕುರವಾಗಿದೆ ಎಂಬ ಮಾತುಗಳು ಕೇಳಿ ಬಂದ ಬಳಿಕ 2016ರಲ್ಲಿ ತಮ್ಮ ಪ್ರೇಮ ರಹಸ್ಯವನ್ನು ಒಪ್ಪಿಕೊಂಡು ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು.

ಇದೀಗ ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ಮದುವೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry