ಚಂದನವನಕೆ ಬಂದ ಕರಾವಳಿ ಬಳ್ಳಿ

ಮಂಗಳವಾರ, ಜೂನ್ 25, 2019
29 °C

ಚಂದನವನಕೆ ಬಂದ ಕರಾವಳಿ ಬಳ್ಳಿ

Published:
Updated:
ಚಂದನವನಕೆ ಬಂದ ಕರಾವಳಿ ಬಳ್ಳಿ

ನನಗೆ ಚಿಕ್ಕಂದಿನಿಂದಲೂ ಡಾನ್ಸ್ ಅಂದ್ರೆ ಇಷ್ಟ. ಶಾಸ್ತ್ರೀಯ, ಪಾಶ್ಚಾತ್ಯ, ಬಾಲಿವುಡ್‌, ಹಿಪ್‌ಹಾಪ್‌ ಹೀಗೆ ವಿವಿಧ ಪ್ರಕಾರಗಳಲ್ಲಿ ತರಬೇತಿ ಪಡೆದುಕೊಂಡೆ. ನೃತ್ಯ ಸಂಯೋಜಕಿಯಾಗಿ, ರೂಪದರ್ಶಿಯಾಗಿಯೂ ಕೆಲಸ ಮಾಡಿದ್ದೇನೆ. ಮಾಡೆಲಿಂಗ್‌ ಮಾಡುವಾಗ ಸಿಕ್ಕ ಅವಕಾಶ ಸಿನಿ ರಂಗದ ದಾರಿ ತೋರಿತು. ‘ಅಟನ’ಕ್ಕೂ ಮುನ್ನ ಒಂದು ಚಿತ್ರಕ್ಕೆ ಬಣ್ಣ ಹಚ್ಚಿದ್ದರಂತೆ. ಕಾರಣಾಂತರಗಳಿಂದ ಆ ಸಿನಿಮಾ ಅರ್ಧಕ್ಕೆ ನಿಂತು ಹೋಯಿತು.

‘ಅಟನ’ ಹೊಸಬರ ಚಿತ್ರ. ಈ ಸಿನಿಮಾದಲ್ಲಿ ನಾನು ಸ್ತ್ರೀ ಸಂವೇದನೆ ಬಿಂಬಿಸುವ ಪಾತ್ರ ನಿರ್ವಹಿಸಿದ್ದೇನೆ. ನನ್ನ ಅಭಿನಯ ಸಾಮರ್ಥ್ಯಕ್ಕೆ ಸವಾಲೊಡ್ಡಿದ ಪಾತ್ರವಿದು. ಪ್ರೀತಿ, ಥ್ರಿಲ್ಲರ್‌, ಸೆಂಟಿಮೆಂಟ್‌ ಇರುವ ಚಿತ್ರ ಇದು.

ಚಿತ್ರದ ಶೀರ್ಷಿಕೆಯೇ ಧ್ವನಿಸುವಂತೆ ಈ ಚಿತ್ರದಲ್ಲಿ ಒಂದು ಜರ್ನಿ ಇದೆ. ಆ ಜರ್ನಿ ಪ್ರೇಕ್ಷಕರಿಗೂ ಹೊಸತನದ ಅನುಭವ ಕೊಡಲಿದೆ. ಹೊಸ ಪ್ರತಿಭೆ ವಿಶಾಲ್‌ ಚಿತ್ರದ ನಾಯಕ ನಟ. ಅಕ್ಟೋಬರ್‌ ಕೊನೆಯ ವಾರ ಅಥವಾ ನವೆಂಬರ್‌ ಮೊದಲವಾರದಲ್ಲಿ ಚಿತ್ರ ತೆರೆಗೆ ಬರಲಿದೆ.

ನಾನು ಮೂಲತಃ ಮಂಗಳೂರಿನ ಕೊಟ್ಟಾರದವಳು. ನಿಮಗೆ ಗೊತ್ತಾ ನಾನು ಹ್ಯಾಂಡ್‌ಬಾಲ್‌ ರಾಷ್ಟ್ರಮಟ್ಟದ ಆಟಗಾರ್ತಿ. ‘ಅಟನ’ ಚಿತ್ರದ ನಿರ್ದೇಶಕ ಪರಮೇಶ್ ಅವರು ಒಂದು ಫ್ಯಾಷನ್ ಶೋನಲ್ಲಿ ನನ್ನನ್ನು ನೋಡಿದರು. ಅವರ ಹೊಸ ಚಿತ್ರದ ನಾಯಕಿ ಪಾತ್ರಕ್ಕೆ ನಾನು ಹೊಂದುತ್ತೇನೆ ಅಂತ ಅವರಿಗೆ ಅನ್ನಿಸಿತು. ಆಫರ್‌ ನೀಡಿದರು. ಚಿತ್ರಕತೆ ನನಗೂ ಇಷ್ಟವಾದ್ದರಿಂದ ಒಪ್ಪಿಕೊಂಡೆ.

ಚಿತ್ರರಂಗಕ್ಕೆ ಕಾಲಿಟ್ಟ ನಂತರ ಶಿಫಾಲಿ ನನ್ನ ದಿನಚರಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡೆ. ಫಿಟ್‌ನೆಸ್ ಕಾಪಾಡಿಕೊಳ್ಳುವ ಸಲುವಾಗಿ ವರ್ಕೌಟ್ ಮೊರೆ ಹೋಗಿದ್ದೇನೆ.

ತೆರೆಯ ಮೇಲೆ ಸುಂದರವಾಗಿ ಕಾಣಿಸಬೇಕು ಅಂದ್ರೆ ದೇಹ ಫಿಟ್‌ ಆಗಿ ಇರಲೇಬೇಕು. ಅದಕ್ಕಾಗಿ ಯೋಗ ಮಾಡುತ್ತೇನೆ. ಜಿಮ್‌ನಲ್ಲಿ ಟಯರ್‌ ವರ್ಕೌಟ್‌ ಮಾಡಿ ಬೆವರಿಳಿಸುತ್ತೇನೆ. ನಾನು ಮೊದಲಿನಿಂದಲೂ ತಿಂಡಿಪೋತಿ. ತಿನ್ನುವುದರಲ್ಲಿ ಯಾವತ್ತೂ ಕಟ್ಟು ಮಾಡಿದವಳಲ್ಲ. ಹೆಚ್ಚು ತಿಂದರೆ ದಪ್ಪ ಆಗುತ್ತೇನೆ ಎಂಬ ಭಯವಿಲ್ಲ. ಏಕೆಂದರೆ, ನಿತ್ಯವೂ ನಾನು ಡಾನ್ಸ್ ಪ್ರಾಕ್ಟೀಸ್ ಮಾಡ್ತೀನಿ. ಮೈಮಾಟ ಚಂದ ಕಾಣಲು, ಫಿಟ್‌ನೆಸ್ ಕಾಪಾಡಿಕೊಳ್ಳಲು ಡಾನ್ಸ್‌ಗಿಂದ ದೊಡ್ಡ ಔಷಧಿ ಮತ್ತೊಂದಿಲ್ಲ.

ಭಾಷೆ ಯಾವುದಾದರೂ ಸರಿ ಉತ್ತಮ ಚಿತ್ರಕತೆ ಸಿಕ್ಕರೆ ನಟಿಸಲು ಸಿದ್ಧ. ಈಗ ನನ್ನಕೈಲಿ ಮತ್ತೊಂದು ಕನ್ನಡ ಸಿನಿಮಾ ಇದೆ. ‘ಮೆಂಟಲ್‌ ಮಂಜ’ ಈ ಚಿತ್ರದ ನಾಯಕ ನಟ. ಸ್ಯಾಂಡಲ್‌ವುಡ್‌ ಮೂಲಕ ಆರಂಭಗೊಂಡಿರುವ ತಮ್ಮ ಚಿತ್ರಯಾನವನ್ನು ಕೋಸ್ಟಲ್‌ವುಡ್‌ ಮತ್ತು ಅದರಾಚೆಗೂ ವಿಸ್ತರಿಸಿಕೊಳ್ಳುವ ಕನಸು ಹೊಸೆಯುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry