ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧ ಏಕಿಲ್ಲ?

Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಜ್ಯೋತಿಷ, ವಾಸ್ತು ನಿಷೇಧ ಇಲ್ಲ?’ ವರದಿ (ಪ್ರ.ವಾ., ಸೆ. 27) ಓದಿ ಆತಂಕವಾಯಿತು. ನಿಜಕ್ಕೂ ನಿಷೇಧಗೊಳ್ಳಬೇಕಾದ್ದು ಜ್ಯೋತಿಷ ಮತ್ತು ವಾಸ್ತು ಸಂಗತಿಗಳೇ ಆಗಿವೆ. ಏಕೆಂದರೆ ಇಂದು ಟಿ.ವಿ. ವಾಹಿನಿಗಳಲ್ಲಿ ಈ ಕುರಿತು ಪ್ರಸಾರವಾಗುವ ಕಾರ್ಯಕ್ರಮಗಳು ನಮ್ಮ ಜನರ ನೆಮ್ಮದಿಯನ್ನೇ ಹಾಳು ಮಾಡಿವೆ.

ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕೂಡ ಈ ಮೂಢನಂಬಿಕೆಗಳಿಗೆ ಬಲಿಯಾಗುತ್ತಿರುವುದನ್ನು ನೋಡಿದರೆ ನಮ್ಮ ಸಮಾಜದ ಭವಿಷ್ಯದ ಬಗ್ಗೆ ಗಾಬರಿಯಾಗುತ್ತದೆ. ಜ್ಯೋತಿಷ–ವಾಸ್ತುಗಳನ್ನು ನಂಬಿ, ಹೊಸದಾಗಿ ಕಟ್ಟಿಸಿದ ಮನೆಗಳನ್ನೇ ಒಡೆದು ಸಿಮೆಂಟು ಮತ್ತು ಮರಳನ್ನು ಪೋಲು ಮಾಡಲಾಗುತ್ತಿದೆ.

ಹೀಗಾಗಿ ಸಿಮೆಂಟು ಮತ್ತು ಮರಳಿನ ಬೇಡಿಕೆ ಹೆಚ್ಚುತ್ತಿದೆ. ಇದೆಲ್ಲ ರಾಷ್ಟ್ರೀಯ ಪ್ರಾಕೃತಿಕ ಸಂಪನ್ಮೂಲದ ದುರ್ಬಳಕೆಯಲ್ಲವೇ? ಇಪ್ಪತ್ತೊಂದನೇ ಶತಮಾನದಲ್ಲೂ ನಾವು ಇಂತಹ ಮೂಢ ಮತಿಗೆ ಬಲಿಯಾಗಬೇಕೇ?

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT