ಬಾಂಗ್ಲಾ ಗಡಿಯಲ್ಲಿ ಭದ್ರತೆ ಹೆಚ್ಚಳ

ಗುರುವಾರ , ಜೂನ್ 20, 2019
27 °C

ಬಾಂಗ್ಲಾ ಗಡಿಯಲ್ಲಿ ಭದ್ರತೆ ಹೆಚ್ಚಳ

Published:
Updated:
ಬಾಂಗ್ಲಾ ಗಡಿಯಲ್ಲಿ ಭದ್ರತೆ ಹೆಚ್ಚಳ

ನವದೆಹಲಿ :‘ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳಲು ರೋಹಿಂಗ್ಯಾ ಸಮುದಾಯದವರು ಬಳಸುತ್ತಿದ್ದ 140 ನುಸುಳು ಸ್ಥಳಗಳನ್ನು ಪತ್ತೆಮಾಡಿ ಅಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ’ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮಾಹಿತಿ ನೀಡಿದೆ.

ಬಿಎಸ್‌ಎಫ್ ಮತ್ತು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಮುಖ್ಯಸ್ಥರ ಮಧ್ಯೆ ಅಕ್ಟೋಬರ್‌ 2ರಿಂದ 6ರವರೆಗೆ ನಡೆದ ಸುದೀರ್ಘ ಸಭೆಯಲ್ಲಿ ರೋಹಿಂಗ್ಯಾ ಸಮುದಾಯದವರ ಅಕ್ರಮ ವಲಸೆ ನಿಯಂತ್ರಣ ಸಂಬಂಧ ಮಾತುಕತೆ ನಡೆಸಲಾಗಿದೆ. ಅಕ್ರಮ ವಲಸೆ ನಿಯಂತ್ರಣಕ್ಕೆ ಎರಡೂ ಭದ್ರತಾ ಪಡೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಂಡಿವೆ.

‘ಎರಡೂ ಕಡೆಯ ಸ್ಥಳೀಯರ ನೆರವು ಇಲ್ಲದೆ ವಲಸಿಗರು ಗಡಿ ನುಸುಳಲು ಸಾಧ್ಯವಿಲ್ಲ. ಅವರಿಗೆ ನೆರವಾಗುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. 140 ಗಡಿ ನುಸುಳುವಿಕೆ ಸ್ಥಳಗಳಲ್ಲಿ ಅತ್ಯಾಧುನಿಕ ಕಣ್ಗಾವಲು ಉಪಕರಣಗಳನ್ನು ಅಳವಡಿಸಲಾಗಿದೆ’ ಎಂದು ಬಿಎಸ್‌ಎಫ್ ತಿಳಿಸಿದೆ.

‘ಮ್ಯಾನ್ಮಾರ್‌ನಿಂದ ಬರುತ್ತಿರುವ ರೋಂಹಿಂಗ್ಯಾ ಮುಸ್ಲಿಮರನ್ನು ನೋಂದಣಿ ಮಾಡಿಕೊಂಡೇ ದೇಶದೊಳಕ್ಕೆ ಬಿಟ್ಟುಕೊಳ್ಳಲಾಗುತ್ತಿದೆ. ನೋಂದಣಿ ಮಾಡಿಸದವರಿಗೆ ಯಾವುದೇ ಸವಲತ್ತು ನೀಡಬೇಡಿ ಮತ್ತು ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸರ್ಕಾರ ಆದೇಶಿಸಿದೆ. ಭಾರತದ ವಿರುದ್ಧದ ಭಯೋತ್ಪಾದನೆ ನಮ್ಮ ನೆಲದಲ್ಲಿ ನೆಲೆಯೂರಲು ಬಿಡುವುದಿಲ್ಲ’ ಎಂದು ಬಿಜಿಬಿ ಸಹ ಭರವಸೆ ನೀಡಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry