‘ಮಳೆ ಸಮಸ್ಯೆಗೆ ಸ್ಪಂದಿಸಿ ಜನರ ಮನಸ್ಸು ಗೆಲ್ಲಿ’: ಕಾಂಗ್ರೆಸ್‌ ಶಾಸಕರಿಗೆ ವೇಣುಗೋಪಾಲ್‌ ಸಲಹೆ

ಬುಧವಾರ, ಜೂನ್ 19, 2019
22 °C

‘ಮಳೆ ಸಮಸ್ಯೆಗೆ ಸ್ಪಂದಿಸಿ ಜನರ ಮನಸ್ಸು ಗೆಲ್ಲಿ’: ಕಾಂಗ್ರೆಸ್‌ ಶಾಸಕರಿಗೆ ವೇಣುಗೋಪಾಲ್‌ ಸಲಹೆ

Published:
Updated:
‘ಮಳೆ ಸಮಸ್ಯೆಗೆ ಸ್ಪಂದಿಸಿ ಜನರ ಮನಸ್ಸು ಗೆಲ್ಲಿ’: ಕಾಂಗ್ರೆಸ್‌ ಶಾಸಕರಿಗೆ ವೇಣುಗೋಪಾಲ್‌ ಸಲಹೆ

ಬೆಂಗಳೂರು: ‘ಮಳೆಯಿಂದಾಗಿ ನಗರದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಜನರ ಮನಸ್ಸು ಗೆಲ್ಲಿ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಪಕ್ಷದ ನಗರ ಶಾಸಕರಿಗೆ ತಾಕೀತು ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ, ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಎಲ್ಲ ಸ್ಥಾನಗಳನ್ನು ಗೆಲ್ಲಬೇಕು’ ಎಂದು ಗುರಿ ನೀಡಿದ್ದಾರೆ.

‘ಶಾಸಕರು ನೇರವಾಗಿ ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸಬೇಕು. ಬಿಜೆಪಿ ನಾಯಕರಿಗಿಂತಲೂ ಮೊದಲು ನೀವು ಜನರನ್ನು ತಲುಪಬೇಕು’ ಎಂದೂ ಸೂಚನೆ ನೀಡಿದ್ದಾರೆ.

‘ಬೆಂಗಳೂರು ನಗರದ ಸಮಸ್ಯೆಗಳನ್ನು ಎತ್ತಿ ಹಿಡಿದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಕೆಲವು ಸಚಿವರುಗಳ ಮೇಲೆ ಮಾಡಿದ್ದ ಆರೋಪಗಳು ನನ್ನ ಗಮನಕ್ಕೂ ಬಂದಿವೆ. ಈ ಆರೋಪಗಳಿಗೆ ಸ್ಪಷ್ಟೀಕರಣ ನೀಡಿ, ತಿರುಗೇಟು ನೀಡುವ ಕೆಲಸ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

‘ಬಿಜೆಪಿ ನಾಯಕರ ತಂತ್ರಗಳಿಗೆ ತಿರುಗೇಟು ನೀಡುವ ಕೆಲಸವನ್ನು ನೀವು ಮಾಡಬೇಕು‌. ಬೂತ್ ಮಟ್ಟದ ಕಮಿಟಿಗಳನ್ನು ಬಲಪಡಿಸಬೇಕು. ಪಕ್ಷ ಸಂಘಟಿಸುವ ಕೆಲಸ ಮಾಡಬೇಕು’ ಎಂದೂ ಸೂಚನೆ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry