ಪ್ರಧಾನಿ ಹುದ್ದೆ ತ್ಯಜಿಸಲು ತೆರೆಸಾಗೆ ಒತ್ತಡ

ಬುಧವಾರ, ಜೂನ್ 19, 2019
23 °C
ಕನ್ಸರ್ವೇಟಿವ್ ಪಕ್ಷದಲ್ಲಿ ಭಿನ್ನಮತ: ಮಾಜಿ ಅಧ್ಯಕ್ಷ ಶಾಪ್ಸ್‌ಗೆ 30 ಸಂಸದರ ಬೆಂಬಲ

ಪ್ರಧಾನಿ ಹುದ್ದೆ ತ್ಯಜಿಸಲು ತೆರೆಸಾಗೆ ಒತ್ತಡ

Published:
Updated:
ಪ್ರಧಾನಿ ಹುದ್ದೆ ತ್ಯಜಿಸಲು ತೆರೆಸಾಗೆ ಒತ್ತಡ

ಲಂಡನ್: ಪ್ರಧಾನಿ ಹುದ್ದೆ ತ್ಯಜಿಸುವಂತೆ ತೆರೆಸಾ ಮೇ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ತೆರೆಸಾ ಅವರ ಕನ್ಸರ್ವೇಟಿವ್‌ ಪಕ್ಷದಲ್ಲೇ ಭಿನ್ನಮತ ಭುಗಿಲೆದ್ದಿದೆ.

ಕನ್ಸರ್ವೇಟಿವ್ ಪಕ್ಷದ ಮಾಜಿ ಅಧ್ಯಕ್ಷ ಗ್ರಾಂಟ್ ಶಾಪ್ಸ್ ಅವರು ಮೇ ಅವರ ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಪುಟದ ಮಾಜಿ ಸಚಿವರು ಸೇರಿದಂತೆ ಪಕ್ಷದ ಸುಮಾರು 30 ಸಂಸದರು ತಮಗೆ ಬೆಂಬಲ ನೀಡಿದ್ದಾರೆ ಎಂದು ಶಾಪ್ಸ್ ಹೇಳಿಕೊಂಡಿದ್ದಾರೆ.

‘ನಮಗೆ ಬೆಂಬಲ ನೀಡುವ ಸಂಸದರ ಸಂಖ್ಯೆಯನ್ನು ಶೀಘ್ರ 48ಕ್ಕೆ ಹೆಚ್ಚಿಸಲಾಗುವುದು. ಪಕ್ಷದ ನಾಯಕತ್ವ ಸಮಸ್ಯೆ ಪರಿಹರಿಸಲು ಇದು ಸೂಕ್ತ ಸಮಯವಾಗಿದೆ ಎಂದು ನಾನು ಹಾಗೂ ನನ್ನ ಸಹೋದ್ಯೋಗಿಗಳು ಭಾವಿಸುತ್ತೇವೆ. ಇದನ್ನು ತೆರೆಸಾ ಮೇ ಅವರಿಗೆ ವೈಯಕ್ತಿಕವಾಗಿ ತಿಳಿಸಬೇಕು ಎಂದಿತ್ತು. ಆದರೆ ಈಗ ಈ ವಿಷಯ ಬಹಿರಂಗವಾಗಿದೆ’ ಎಂದು ಶಾಪ್ಸ್‌ ತಿಳಿಸಿದ್ದಾರೆ.

‘ಮೇ ನೇತೃತ್ವದಲ್ಲಿ ನಡೆದಿರುವ ಸಾಕಷ್ಟು ಪ್ರಮಾದಗಳನ್ನು ಮರೆಮಾಚಲು ಅವರ ಸಚಿವ ಸಂಪುಟ ಮುಂದಾಗಿದೆ. ಇದರಿಂದ ದೇಶಕ್ಕೂ ನಷ್ಟವಾಗಿದೆ’ ಎಂದು ಶಾಪ್ಸ್ ಆರೋಪಿಸಿದ್ದಾರೆ.

ತೀವ್ರಗೊಂಡ ಆಗ್ರಹ: ಜೂನ್‌ ತಿಂಗಳ ಚುನಾವಣೆಯ ಬಳಿಕ ಅಧಿಕಾರ ವಹಿಸಿಕೊಂಡ ಸಮಯದಿಂದಲೂ ತೆರೆಸಾ ಅವರು ರಾಜೀನಾಮೆ ನೀಡಬೇಕು ಎನ್ನುವ ಒತ್ತಾಯಗಳು ಕೇಳಿಬರುತ್ತಿದೆ. ಈಚೆಗಷ್ಟೇ ಮ್ಯಾಂಚೆಸ್ಟರ್‌ನಲ್ಲಿ ನಡೆದ ಕನ್ಸರ್ವೇಟಿವ್ ಪಕ್ಷದ ಸಮಾವೇಶದಲ್ಲಿ ತೆರೆಸಾ ಅವರು ಮಾಡಿದ ಗೊಂದಲಕಾರಿ ಭಾಷಣದಿಂದಾಗಿ, ರಾಜೀನಾಮೆಯ ಆಗ್ರಹ ಮತ್ತಷ್ಟು ತೀವ್ರಗೊಂಡಿದೆ.

ಇದೇ 11ರಂದು ಕನ್ಸರ್ವೇಟಿವ್ ಪಕ್ಷದ ಸಮಿತಿ ಸದಸ್ಯರು ಸಭೆ ಸೇರಲಿದ್ದಾರೆ. ಇದು ಪಕ್ಷದ ಭವಿಷ್ಯ ಹಾಗೂ ಮೇ ಅವರ ನಾಯಕತ್ವ ಕುರಿತು ನಿರ್ಣಯ ಕೈಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry