ಆತಿಥೇಯ ಜೈಪುರ ತಂಡಕ್ಕೆ ಸೋಲು

ಸೋಮವಾರ, ಜೂನ್ 24, 2019
24 °C

ಆತಿಥೇಯ ಜೈಪುರ ತಂಡಕ್ಕೆ ಸೋಲು

Published:
Updated:
ಆತಿಥೇಯ ಜೈಪುರ ತಂಡಕ್ಕೆ ಸೋಲು

ಜೈಪುರ: ಗುಜರಾತ್ ಫಾರ್ಚೂನ್‌ ಜೈಂಟ್ಸ್‌ ತಂಡವು ಶುಕ್ರವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಟೂರ್ನಿಯ ಅಂತರ ವಲಯ ಪಂದ್ಯದಲ್ಲಿ ಆತಿಥೇಯ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಸೋಲಿಸಿತು.

ಸ್ಥಳೀಯ ಅಭಿಮಾನಿಗಳ ಮುಂದೆ ಜಿಗುಟುತನದ ಆಟವಾಡುವಲ್ಲಿ ಜೈಪುರ ತಂಡವು ವಿಫಲವಾಯಿತು.

ಇದರ ಲಾಭ ಪಡೆದ ಗುಜರಾತ್ ತಂಡವು 29–23 ಪಾಯಿಂಟ್‌ಗಳಿಂದ ಜಯಿಸಿತು.

ಗುಜರಾತ್ ತಂಡದ ಚಂದ್ರನ್ ರಂಜೀತ್ ಅವರು ರೇಡಿಂಗ್‌ನಲ್ಲಿ ಏಳು ಪಾಯಿಂಟ್‌ಗಳನ್ನು ಗಳಿಸಿದರು. ಇದರಿಂದಾಗಿ ಜೈಪುರ ತಂಡದ ಮೇಲೆ ಒತ್ತಡ ಹೆಚ್ಚಿತ್ತು.

ಎ ವಲಯದಲ್ಲಿ 19 ಪಂದ್ಯಗಳನ್ನು ಆಡಿದ್ದ ಗುಜರಾತ್ ತಂಡವು 72 ಪಾಯಿಂಟ್ಸ್‌ಗಳನ್ನು ಗಳಿಸಿತ್ತು. ಅಗ್ರಪಟ್ಟ ಪಡೆದಿತ್ತು. ಜೈಪುರ ತಂಡವು 45 ಅಂಕಗಳನ್ನು ಗಳಿಸಿ ಐದನೇ ಸ್ಥಾನ ಪಡೆದಿತ್ತು. ಒಟ್ಟು 16 ಪಂದ್ಯಗಳನ್ನು ಪಡೆದಿತ್ತು.

ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡದವರು 25–19ರಿಂದ ಪುಣೇರಿ ಪಲ್ಟನ್ ತಂಡವನ್ನು ಮಣಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry