ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಇಶಾಂತ್ ದಾಳಿಗೆ ಕುಸಿದ ಅಸ್ಸಾಂ

ಮಿಂಚಿದ ಇಶಾಂತ್‌ ಶರ್ಮಾ; 459 ರನ್‌ ಕಲೆ ಹಾಕಿದ ಹಿಮಾಚಲ ಪ್ರದೇಶ
Last Updated 6 ಅಕ್ಟೋಬರ್ 2017, 19:49 IST
ಅಕ್ಷರ ಗಾತ್ರ

ನವದೆಹಲಿ: ಭರವಸೆ ಹುಸಿಯಾಗಲಿಲ್ಲ. ನಾಯಕ ಇಶಾಂತ್ ಶರ್ಮಾ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡಿದರು. ಚೊಚ್ಚಲ ಪಂದ್ಯ ಆಡಿದ ಎಡಗೈ ವೇಗಿ ಕುಲವಂತ್‌ ಖೇಜ್ರೋಲಿಯ ಕೂಡ ಮಿಂಚಿದರು.

ಇದರ ಪರಿಣಾಮ ದೆಹಲಿ ತಂಡ ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲಿ ಉತ್ತಮ ಆರಂಭ ಕಂಡಿದೆ. ಮೊದಲ ದಿನದಾಟದ ಮುಕ್ತಾಯಕ್ಕೆ ಈ ತಂಡ ಎದುರಾಳಿ ಅಸ್ಸಾಂ ತಂಡದ ಏಳು ವಿಕೆಟ್‌ಗಳನ್ನು ಕಬಳಿಸಿದೆ. ಅಸ್ಸಾಂ 224 ರನ್‌ ಗಳಿಸಿದೆ.

ಫಿರೋಜ್ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಎ’ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ದೆಹಲಿ ಎದುರಾಳಿ ತಂಡ 33 ರನ್‌ ಗಳಿಸುವಷ್ಟರಲ್ಲಿ ಮೊದಲ ಆಘಾತ ನೀಡಿತು. 44 ರನ್‌ ಗಳಿಸುವಷ್ಟರಲ್ಲಿ ಅಸ್ಸಾಂನ ಎರಡನೇ ವಿಕೆಟ್ ಕೂಡ ಪತನಗೊಂಡಿತು.

ನವದೀಪ್ ಸೈನಿ ಮತ್ತು ನಿತೀಶ್ ರಾಣ ದೆಹಲಿ ತಂಡಕ್ಕೆ ಆರಂಭಿಕ ಮೇಲುಗೈ ಗಳಿಸಿಕೊಟ್ಟರು. ನಂತರ ಇಶಾಂತ್ ಶರ್ಮಾ (31ಕ್ಕೆ3) ಮತ್ತು ಕುಲವಂತ್‌ (18ಕ್ಕೆ1) ದಾಳಿಗೆ ಅಸ್ಸಾಂ ತಂಡ ತತ್ತರಿಸಿತು.

*

31 ರನ್‌ಗಳಿಗೆ 3 ವಿಕೆಟ್ ಕಬಳಿಸಿದ ಇಶಾಂತ್ ಶರ್ಮಾ

ಹೈದರಾಬಾದ್–ಮಹಾರಾಷ್ಟ್ರ ಪಂದ್ಯದ ಮೊದಲ ದಿನ ಮಳೆಗೆ ಆಹುತಿ

271 ರನ್ ಗಳಿಸಿದ ಹಿಮಾಚಲ ಪ್ರದೇಶದ ಪ್ರಶಾಂತ್ ಚೋಪ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT