ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿನ ಆಟ: ಸೆಮಿಫೈನಲ್‌ಗೆ ಮರಿನ್‌ ಸಿಲಿಕ್‌

Last Updated 6 ಅಕ್ಟೋಬರ್ 2017, 20:01 IST
ಅಕ್ಷರ ಗಾತ್ರ

ಟೋಕಿಯೊ: ಮಿಂಚಿನ ಆಟ ಆಡಿದ ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ಅವರು ಜಪಾನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಸಿಲಿಕ್‌ 6–2, 6–0ರ ನೇರ ಸೆಟ್‌ಗಳಿಂದ ಅಮೆರಿಕದ ರ‍್ಯಾನ್‌ ಹ್ಯಾರಿಸನ್‌ ವಿರುದ್ಧ ಗೆದ್ದರು.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಸಿಲಿಕ್‌, ಎರಡೂ ಸೆಟ್‌ಗಳಲ್ಲೂ ಎದುರಾಳಿಯ ಮೇಲೆ ಪ್ರಾಬಲ್ಯ ಮೆರೆದರು. ಮೊದಲ ಸರ್ವ್‌ನಲ್ಲಿ 20 ಪಾಯಿಂಟ್ಸ್‌ ಹೆಕ್ಕಿದ ಅವರು 11 ಏಸ್‌ಗಳನ್ನು ಸಿಡಿಸಿದರು.

ಮೊದಲ ಸೆಟ್‌ನ ಆರಂಭದಿಂದಲೇ ಗರ್ಜಿಸಿದ ಸಿಲಿಕ್‌ ಆರಂಭದ ನಾಲ್ಕು ಗೇಮ್‌ಗಳಲ್ಲಿ ಹ್ಯಾರಿಸನ್‌ ಅವರಿಂದ ಪ್ರಬಲ ಪೈಪೋಟಿ ಎದುರಿಸಿದರು. ಬಳಿಕ ಅಂಗಳದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿ ಎದುರಾಳಿಯನ್ನು ಕಂಗೆಡಿಸಿದರು.

ಎರಡನೇ ಸೆಟ್‌ನಲ್ಲಿ ಸಿಲಿಕ್‌ ಆಟ ಇನ್ನಷ್ಟು ರಂಗೇರಿತು. ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಆಧಿಪತ್ಯ ಸಾಧಿಸಿದ ಅವರು ಏಕಪಕ್ಷೀಯವಾಗಿ ಜಯದ ತೋರಣ ಕಟ್ಟಿದರು. ಈ ಸೆಟ್‌ನಲ್ಲಿ ಹ್ಯಾರಿಸನ್‌ ಒಂದೂ ಸರ್ವ್‌ ಉಳಿಸಿಕೊಳ್ಳಲಿಲ್ಲ.

ಎಂಟರ ಘಟ್ಟದ ಇತರ ಹೋರಾಟಗಳಲ್ಲಿ ಬೆಲ್ಜಿಯಂನ ಡೇವಿಡ್‌ ಗೊಫಿನ್‌ 7–5, 6–2ರಲ್ಲಿ ಫ್ರಾನ್ಸ್‌ನ ರಿಚರ್ಡ್‌ ಗ್ಯಾಸ್ಕೆಟ್‌ ಎದುರೂ, ಅರ್ಜೆಂಟೀನಾದ ಡಿಗೊ ಸ್ವಾರ್ಟ್ಜ್‌ಮನ್‌ 6–0, 7–5ರಲ್ಲಿ ಅಮೆರಿಕದ ಸ್ಟೀವ್‌ ಜಾನ್ಸನ್‌ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT